ಸಿನಿಮಾ ಸುದ್ದಿ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?

ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಈ ಜೋಡಿಯ ಪ್ರೇಮ್ ಕಹಾನಿ ಹೇಗೆ, ಎಲ್ಲಿ ಶುರುವಾಯಿತು ಎಂಬುದೇ ಸ್ವಾರಸ್ಯ...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೈಹಿಡಿಯುತ್ತಿರುವ ಬಾಲ್ಯದ ಗೆಳತಿ, ಯಾರು ಪ್ರೇರಣಾ, ಹಿನ್ನಲೆ ಏನು, ಪ್ರೀತಿ ಶುರುವಾಗಿದ್ದೆಲ್ಲಿ?
ಧ್ರುವ ಸರ್ಜಾ-ಪ್ರೇರಣಾ
Published On :
ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಈ ಜೋಡಿಯ ಪ್ರೇಮ್ ಕಹಾನಿ ಹೇಗೆ, ಎಲ್ಲಿ ಶುರುವಾಯಿತು ಎಂಬುದೇ ಸ್ವಾರಸ್ಯ.
ಪ್ರೇರಣಾ ಧ್ರುವ ಸರ್ಜಾ ಅವರ ಮನೆಯ ಪಕ್ಕದಲ್ಲೇ ವಾಸವಾಗಿದ್ದರು. ಕಳೆದ 16 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಧ್ರುವ ಸರ್ಜಾ ಅವರಿಗೆ 15 ವರ್ಷವಿದ್ದಾಗಲೇ ಪ್ರೇರಣಾ ಅವರ ಜತೆ ಪ್ರೀತಿಯಲ್ಲಿ ಬಿದ್ದರು. 16 ವರ್ಷದ ಪ್ರೀತಿಗೆ ಸಾಕ್ಷಿಯಾಗಿ ಈಗ ಮದುವೆಯಾಗುತ್ತಿದ್ದಾರೆ. 
Story image
ಪ್ರೇರಣಾ ಅವರು ಶಂಕರ್ ಮತ್ತು ಸರಿತಾ ದಂಪತಿಯ ಪುತ್ರಿ. ಸದ್ಯ ಬೆಂಗಳೂರಿನ ಬಸವನಗುಡಿಯ ಖಾಸಗಿ ಕಾಲೇಜಿನಲ್ಲಿ ಪ್ರೇರಣಾ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. 
ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ನಿಶ್ಚಿತಾರ್ಥ ಬಹಳ ಸರಳವಾಗಿ ಡಿಸೆಂಬರ್ 9ರಂದು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ. 
Story image
ಕಲಾ ನಿರ್ದೇಶಕ ಅರುಣ್ ಸಾಗರ್ ಧ್ರುವ ಸರ್ಜಾರ ನಿಶ್ಚಿತಾರ್ಥಕ್ಕಾಗಿ ವಿಶೇಷವಾಗಿ ಆಂಜನೇಯ ಸ್ವಾಮೀಯ ಸೆಟ್ ಹಾಕಲಿದ್ದಾರೆ. ಧ್ರುವ ಸರ್ಜಾ ಆಂಜನೇಯ ಸ್ವಾಮೀಯ ಪರಮಭಕ್ತನಾಗಿದ್ದು ತನ್ನ ಇಷ್ಟಾರ್ಥ ದೇವರ ಸೆಟ್ ನಲ್ಲೇ ನಿಶ್ಚಿತಾರ್ಥ ನೆರವೇರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.