ಸಿನಿಮಾ ಸುದ್ದಿ

ನೀವು ಫಿಟ್ ಆಗಿದ್ದರೆ, ಯಶಸ್ಸು ಖಂಡಿತ: ಖಳನಟ ಕಬೀರ್ ಸಿಂಗ್

ಹೆಬ್ಬುಲಿ ಚಿತ್ರದ ಯಶಸ್ಸಿನ ನಂತರ ಮತ್ತೆ ಸುದೀಪ್ ಮತ್ತು ಕೃಷ್ಣ ಜೋಡಿ ಪೈಲ್ವಾನ್ ಚಿತ್ರದಲ್ಲಿ ಒಂದಾಗಿದೆ. ಇನ್ನು ಈ ಚಿತ್ರದಲ್ಲಿ ಖಳನಾಯಕನಾಗಿ ಕಬೀರ್ ದುಲ್ಹಾನ್ ಸಿಂಗ್ ಅಭಿನಯಿಸುತ್ತಿದ್ದಾರೆ...

ನೀವು ಫಿಟ್ ಆಗಿದ್ದರೆ, ಯಶಸ್ಸು ಖಂಡಿತ: ಖಳನಟ ಕಬೀರ್ ಸಿಂಗ್
ಕಬೀರ್ ದುಲ್ಹಾನ್ ಸಿಂಗ್
Published On :
ಹೆಬ್ಬುಲಿ ಚಿತ್ರದ ಯಶಸ್ಸಿನ ನಂತರ ಮತ್ತೆ ಸುದೀಪ್ ಮತ್ತು ಕೃಷ್ಣ ಜೋಡಿ ಪೈಲ್ವಾನ್ ಚಿತ್ರದಲ್ಲಿ ಒಂದಾಗಿದೆ. ಇನ್ನು ಈ ಚಿತ್ರದಲ್ಲಿ ಖಳನಾಯಕನಾಗಿ ಕಬೀರ್ ದುಲ್ಹಾನ್ ಸಿಂಗ್ ಅಭಿನಯಿಸುತ್ತಿದ್ದಾರೆ. 
ಪೈಲ್ವಾನ್ ಚಿತ್ರಕ್ಕಾಗಿ ನಿರ್ದೇಶಕ ಕೃಷ್ಣ ಅವರು ಸಿಕ್ಸ್ ಪ್ಯಾಕ್ ಹೊಂದಿರುವ ಖಳನಟನ ಹುಡುಕಾಟದಲ್ಲಿ ತೊಡಗಿದ್ದರು. ಅವರು ಅಂದುಕೊಂಡಂತೆ ಸಿಕ್ಸ್ ಪ್ಯಾಕ್ ಖಳನಟ ಕಬೀರ್ ಸಿಂಗ್ ಸಿಕ್ಕಿದ್ದಾರೆ. 
ಕಬೀರ್ ಸಿಂಗ್ ಅವರನ್ನು ಹೊಗಳಿರುವ ಸುದೀಪ್ ಕಬೀರ್ ಅವರ ಕಾರ್ಯಕ್ಷಮತೆ ಮತ್ತು ಶ್ರಮ ಸ್ವತಃ ಬದಲಾಗಿದೆ. ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಲು 12 ವಾರಗಳ ಚಾಲೆಂಜ್ ತೆಗೆದುಕೊಂಡಿದ್ದರು. ಅದೇ ರೀತಿ ತಮ್ಮ ದೇಹವನ್ನು ದಂಡಿಸಿ ಒಂದು ಆಕಾರಕ್ಕೆ ತಂದಿದ್ದಾರೆ. ಕಬೀರ್ ಅವರ ಬದಲಾವಣೆಯನ್ನು ಕಾಣಲು ಅಭಿಮಾನಿಗಳು ಮತ್ತು ಸಹ ನಟರು ಕಾತುರರಾಗಿದ್ದಾರೆ ಎಂದರು. 
ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಸುದೀಪ್, ನಿಧಾನವಾಗಿ... ನನಗೆ ಇದನ್ನು ಮಾಡಲಾಗುವುದಿಲ್ಲ@Kabirdulhansingh ನನ್ನ ಸಹೋದರ ಏನು ಬದ್ಧತೆ ಅದ್ಭುತ ಎಂದು ಟ್ವೀಟಿಸಿದ್ದರು. 
ಪೈಲ್ವಾನ್ ಚಿತ್ರಕ್ಕಾಗಿ ಕಬೀರ್ ಸ್ವ ಇಚ್ಛೆಯಿಂದ ಈ ಚಾಲೆಂಜ್ ಅನ್ನು ಸ್ವೀಕರಿಸಿದ್ದರು. ನಾನು ನಿನ್ನಷ್ಟು ಹಾರ್ಡ್ ವರ್ಕ್ ಅಲ್ಲ ಸ್ನೇಹಿತ. ನಾನು ನಿನ್ನ ಜತೆ ಸ್ಕ್ರೀನ್ ಹಂಚಿಕೊಳ್ಳಲು ಕಾತರಿಸುತ್ತಿದ್ದೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಬೀರ್ ನಾನು ಎಂಟು ಪ್ಯಾಕ್ ಗಾಗಿ ತಯಾರಿ ನಡೆಸಿದ್ದೇನೆ. 90 ದಿನಗಳ ಕಾಲ ಜಿಮ್ ನಲ್ಲಿ ಕಸರತ್ತು ನಡೆಸಿದ್ದ ಕಬೀರ್ ಸದ್ಯ ಸಿಕ್ಸ್ ಪ್ಯಾಕ್ ಅನ್ನು ಮಾಡಿದ್ದೇನೆ. ನಾವು ಫಿಟ್ ಆಗಿದ್ದರೆ ಖಂಡಿತ ಯಶಸ್ಸು ಲಭಿಸುತ್ತದೆ ಎಂದು ಹೇಳಿದ್ದಾರೆ. 
ಹೆಬ್ಬುಲಿ ಚಿತ್ರದಲ್ಲೂ ಕಬೀರ್ ದುಲ್ಹಾನ್ ಸಿಂಗ್ ಖಳನಾಯಕನಾಗಿ ಅಭಿನಯಿಸಿದ್ದರು. ಮತ್ತೆ ನಿರ್ದೇಶಕ ಕೃಷ್ಣ ಅವರು ಪೈಲ್ವಾನ್ ಚಿತ್ರಕ್ಕಾಗಿ ಕಬೀರ್ ನನ್ನು ಆಯ್ಕೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.