ಕ್ಯಾನೆ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಫಿಗೆ ನಿರ್ಬಂಧ
ಕ್ಯಾನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಪಿಗೆ ಆಯೋಜಕರು ನಿರ್ಬಂಧ ವಿಧಿಸಲು ಚಿಂತನೆ ನಡೆಸಿದ್ದಾರೆ.

ಫ್ರಾನ್ಸ್ : ಕ್ಯಾನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಪಿಗೆ ಆಯೋಜಕರು ನಿರ್ಬಂಧ ವಿಧಿಸಲು ಚಿಂತನೆ ನಡೆಸಿದ್ದಾರೆ.
ಚಲನಚಿತ್ರೋತ್ಸದ ನಿರ್ದೇಶಕ ಥೈರಿ ಪ್ರೆಮ್ಯಾಕ್ಸ್ ಸಂದರ್ಶನವೊಂದರಲ್ಲಿಈ ವಿಷಯವನ್ನು ಹಂಚಿಕೊಂಡಿದ್ದಾರೆ. ಕೆಂಪು ಹಾಸಿನ ಮೇಲೆ ಸೆಲ್ಫಿ ತೆಗೆದುಕೊಳ್ಳುವುದು ಹಾಸ್ಯಾಸ್ಪದ ಎಂದಿದ್ದಾರೆ.
ಕೆಂಪು ಹಾಸಿನ ಮೇಲೆ ಸೆಲ್ಪಿ ನಿರಾಂತಕವಾಗಿ ಮುಂದುವರೆದಿದ್ದು, ಈ ಹೊಸ ಕ್ರಮವನ್ನು ಹೇಗೆ ಅನುಷ್ಠಾನಗೊಳಿಸುವುದು ಎಂಬ ಬಗ್ಗೆ ಚಿಂತನೆ ನಡೆಸಲಾಗಿದೆ. ನಾವು ಪೊಲೀಸರಲ್ಲ, ಆದರೆ ವೀಕ್ಷಕರಾಗಿ ಪರಿಸ್ಥಿತಿಯನ್ನು ಅವರಿಗೆ ಅರ್ಥಮಾಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
10 ವರ್ಷಗಳ ಹಿಂದೆ ಸೆಲ್ಫಿ ಅಸ್ವಿತ್ವದಲ್ಲಿ ಇರಲಿಲ್ಲ. ವಿಶ್ವದಲ್ಲಿಯೇ ಅದಕ್ಕೆ ಪ್ರಾಮುಖ್ಯತೆನ್ನೂ ನೀಡುತ್ತಿರಲಿಲ್ಲ. ಆದರೆ, ಇತ್ತೀಚಿಗೆ ಅದರ ಹುಚ್ಚು ಹೆಚ್ಚಾಗಿರುವುದು ಅಸಹ್ಯ ಮೂಡಿಸಿದೆ. ನಾವು ಕ್ಯಾನೆಗೆ ಹೋಗೋದು ಚಿತ್ರ ವೀಕ್ಷಣೆಗಾಗಿ, ಸೆಲ್ಪಿ ತೆಗೆಯುವುದಕ್ಕೆ ಅಲ್ಲ ಎನ್ನುತ್ತಾರೆ ಪ್ರೆಮ್ಯಾಕ್ಸ್.
ಸೆಲ್ಪಿ ತೆಗೆದುಕೊಳ್ಳುವುದರಿಂದ ಅಸಹ್ಯವಾಗಿ ಕಾಣುತ್ತದೆ. ಚಲನಚಿತ್ರೋತ್ಸವದ ಪ್ರತಿಷ್ಠಿತೆ ಕಾಪಾಡುವುದು ತಮ್ಮ ಕರ್ತವ್ಯವಾಗಿದೆ. ಹಾಗಾಗೀ ಅದರ ಕಡಿವಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಪ್ರೆಮಾಕ್ಸ್ ಹೇಳಿದ್ದಾರೆ.
ಈ ಬಾರಿ ಕ್ಯಾನೆಗೆ ಆಯ್ಕೆ ಆಗುವ ಚಲನಚಿತ್ರಗಳನ್ನು ಫ್ರೆಂಚ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹೊಸ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


