ಸಿನಿಮಾ ಸುದ್ದಿ

ಬೆಲ್ ಬಾಟಮ್ ಚಿತ್ರದಲ್ಲಿ ರಿಷಬ್, ಹರಿಪ್ರಿಯಾ ರೆಟ್ರೋ ಲುಕ್

ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳುತ್ತಿರುವ ಬೆಲ್ ಬಾಟಮ್ ಚಿತ್ರ 80ರ ದಶಕದ ಪತ್ತೇದಾರಿ ಕಥೆಯನ್ನಾಧರಿಸಿದ್ದು ಚಿತ್ರದ ನಾಯಕ ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ರೆಟ್ರೋ...

ಬೆಲ್ ಬಾಟಮ್ ಚಿತ್ರದಲ್ಲಿ ರಿಷಬ್, ಹರಿಪ್ರಿಯಾ ರೆಟ್ರೋ ಲುಕ್
ರಿಷಬ್ ಶೆಟ್ಟಿ, ಹರಿಪ್ರಿಯಾ
Published On :
ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳುತ್ತಿರುವ ಬೆಲ್ ಬಾಟಮ್ ಚಿತ್ರ 80ರ ದಶಕದ ಪತ್ತೇದಾರಿ ಕಥೆಯನ್ನಾಧರಿಸಿದ್ದು ಚಿತ್ರದ ನಾಯಕ ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ರೆಟ್ರೋ ವೇಷದಲ್ಲಿ ಮಿಂಚಿದ್ದಾರೆ. 
ಚಿತ್ರದಲ್ಲಿ ಹರಿಪ್ರಿಯಾರ ಫಸ್ಟ್ ಲುಕ್ ಅನ್ನು ಈ ಹಿಂದೆ ಬಹಿರಂಗವಾಗಿತ್ತು. ಅದೇ ರೀತಿ ನಾಯಕನ ಗೆಟಪ್ ಬಗ್ಗೆಯೂ ವಿಶೇಷ ಕಾಳಜಿ ವಹಿಸಲಾಗಿದ್ದು ಈ ಕಾಲದ ಪತ್ತೇದಾರಿಯ ಪಾತ್ರದಲ್ಲಿ ರಿಷಬ್ ಕಾಣಿಸಿಕೊಳ್ಳುತ್ತಿದ್ದಾರೆ. ರಿಷಬ್ ಲುಕ್ ಹೇಗಿರಲಿದೆ ಎಂಬುದನ್ನು ತಿಳಿಸಲು ಕೆಲವು ಪೋಟೋಗಳನ್ನು ಚಿತ್ರತಂಡ ಹರಿಬಿಟ್ಟಿದೆ. 
ರಿಷಭ್ 80ರ ದಶಕದ ಸಿನಿಮಾ ನಾಯಕರಂತೆಯೇ ಕೇಶವಿನ್ಯಾಸ ಮಾಡಿಸಿಕೊಂಡು ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇನ್ನು ಅಣ್ಣಾವ್ರು ಮಾಡಿದ ಪತ್ತೇದಾರಿ ಸಿನಿಮಾಗಳ ಪ್ರಭಾವ ನನ್ನ ಮೇಲೆ ಸಾಕಷ್ಟಿದೆ. ನಾನು ರಾಜ್ ಕುಮಾರ್, ಅನಂತ್ ನಾಗ್, ಶಂಕರ್ ನಾಗ್ ಮುಂತಾದವರ ಚಿತ್ರಗಳಿಂದ ಪ್ರಭಾವಿತನಾಗಿ ಕಾಲೇಜು ದಿನಗಳಲ್ಲೇ ನಾನು ಇಂಥ ಕಾಸ್ಟ್ಯೂಮ್ ಗಳನ್ನು ಧರಿಸುತ್ತಿದ್ದೆ ಎಂದು ಹೇಳಿದ್ದಾರೆ. 
Story image
ಮೊದಲ ಹಂತವಾಗಿ ಜೋಗದಲ್ಲಿ 20 ದಿನಗಳ ಶೂಟಿಂಗ್ ಮಾಡಲಾಗಿದೆ. ಚಿಕ್ಕ ಪಾತ್ರಗಳಿಗಾಗಿ ಆಡಿಷನ್ ನಡೆಸಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ ನಿರ್ದೇಶಕರು. ಇನ್ನು ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಸಂತೋಷ್ ಕುಮಾರ್ ಎಂಬುವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.