ಸಿನಿಮಾ ಸುದ್ದಿ

ತೆಲುಗು ಬಿಗ್‌ಬಾಸ್ ನಿರೂಪಕರು ಬದಲಾಗ್ತಾರಾ?

ಮೊದಲ ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿದ್ದು ಇದೀಗ ಬಿಗ್‌ಬಾಸ್ ಸೀಸನ್ 2ನಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆ ಇದೆ...

ತೆಲುಗು ಬಿಗ್‌ಬಾಸ್ ನಿರೂಪಕರು ಬದಲಾಗ್ತಾರಾ?
ಅಲ್ಲು ಅರ್ಜುನ್-ಜೂನಿಯರ್ ಎನ್‍ಟಿಆರ್
Published On :
ಮೊದಲ ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿದ್ದು ಇದೀಗ ಬಿಗ್‌ಬಾಸ್ ಸೀಸನ್ 2ನಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆ ಇದೆ. 
ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದ ಜೂನಿಯರ್ ನಂದಮೂರಿ ತಾರಕರಾಮ್ ಬಿಗ್‌ಬಾಸ್ ಸೀಸನ್ 2ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅವರ ಜಾಗಕ್ಕೆ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 
ಜುಲೈನಲ್ಲಿ ಬಿಗ್‌ಬಾಸ್ ಸೀಸನ್ 2 ಶುರುವಾಗಲಿದ್ದು ಸಮಯದ ಅಭಾವ ಅಥವಾ ಸಂಭಾವನೆ ವಿಚಾರವಾಗಿ ಜೂನಿಯರ್ ಎನ್ಟಿಆರ್ ನಿರೂಪಣೆಯಿಂದ ಹಿಂದೆ ಸರಿದಿದ್ದಾರಾ ಎಂಬ ಪ್ರಶ್ನೆಗಳು ಮೂಡತೊಡಗಿವೆ. 
ಸದ್ಯದ ಮಾಹಿತಿ ಪ್ರಕಾರ ಜೂನಿಯರ್ ಎನ್ಟಿಆರ್ ತಮ್ಮ ಮುಂಬರುವ ಚಿತ್ರಗಳಲ್ಲಿ ನಿರ್ದೇಶಕರಾದ ತ್ರಿವಿಕ್ರಮ್ ಮತ್ತು ಎಸ್ಎಸ್ ರಾಜಮೌಳಿ ಜತೆ ಕೆಲಸ ಮಾಡಲಿದ್ದಾರೆ. ಜತೆಗೆ ತಮ್ಮ ಕುಟುಂಬಕ್ಕೆ ಸಮಯ ಕೊಡಬೇಕು ಎಂಬ ಉದ್ದೇಶದಿಂದಾಗಿ ಬಿಗ್‌ಬಾಸ್ ರಿಯಾಲಿಟಿ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.