ಬಿಗ್ ಬಾಸ್ ಸೀಸನ್-5 ಅ.15ರಿಂದ ಆರಂಭ; ಬಿಗ್ ಹೌಸ್ ಸೆಲೆಬ್ರಿಟಿ ಪಟ್ಟಿಯಲ್ಲಿ ಯಾರಿದ್ದಾರೆ ಗೊತ್ತಾ?
ನಟ ಕಿಚ್ಚಾ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಷೋಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಅಕ್ಟೋಬರ್ 15ರಿಂದ ಕಾರ್ಯಕ್ರಮ ಆರಂಭವಾಗಲಿದೆ.

Published On :
ಬೆಂಗಳೂರು: ನಟ ಕಿಚ್ಚಾ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಷೋಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಅಕ್ಟೋಬರ್ 15ರಿಂದ ಕಾರ್ಯಕ್ರಮ ಆರಂಭವಾಗಲಿದೆ.
ಒಟ್ಟು 100 ದಿನಗಳ ಕಾಲ ನಡೆಯುವ ಈ ಬಹು ನಿರೀಕ್ಷಿತ ರಿಯಾಲಿಟಿ ಷೋನಲ್ಲಿ ಈ ಬಾರಿ ಸೆಲೆಬ್ರಿಟಿಗಳು ಮಾತ್ರವಲ್ಲದೇ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಇದೇ ಅಕ್ಟೋಬರ್ 15ರಂದು ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಲಿದ್ದು, ಅಕ್ಟೋಬರ್ 16ರಿಂದ ಬಿಗ್ ಹೌಸ್ ನಲ್ಲಿ ಸ್ಪರ್ಧಿಗಳ 100 ದಿನಗಳ ಸಂಸಾರ ಶುರುವಾಗಲಿದೆ. ಈ ಬಗ್ಗೆ ಸ್ವತಃ ಕಲರ್ಸ್ ಸೂಪರ್ ಚಾನಲ್ ಪ್ರಕಟಣೆ ನೀಡಿದ್ದಲ್ಲದೇ ಕಾರ್ಯಕ್ರಮ ಕುರಿತ ಪ್ರಮೋವನ್ನೂ ಕೂಡ ಫೇಸ್ ಬುಕ್ ನಲ್ಲಿ ಬಿಡುಗಡೆ ಮಾಡಿದೆ.
ಸೆಲೆಬ್ರಿಟಿಗಳೊಂದಿಗೆ ಅರ್ಧದಷ್ಟು ಜನಸಾಮಾನ್ಯರು
ಬಿಗ್ ಹೌಸ್ ನೊಳಗೆ ಪ್ರವೇಶ ಪಡೆಯಲು ಈ ಬಾರಿ ತೀವ್ರ ಪೈಪೋಟಿ ಎದುರಾಗಿದ್ದು, ಈ ಬಾರಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಪ್ರತೀ ಬಾರಿ ಸೆಲೆಬ್ರಿಟಿಗಳಿಂದ ತುಂಬಿರುತ್ತಿದ್ದ ಬಿಗ್ ಹೌಸ್ ನಲ್ಲಿ ಈ ಬಾರಿ ಅರ್ಧದಷ್ಟು ಜನ ಸಾಮಾನ್ಯರು ಕಾಣಸಿಗಲಿದ್ದಾರೆ. ಕಳೆದ ಸೀಸನ್ 3 ನಲ್ಲಿಯೇ ಇಂತಹುದೊಂದು ಪ್ರಯೋಗಕ್ಕೆ ಬಿಗ್ ಬಾಸ್ ತಂಡ ಮುಂದಾಗಿತ್ತು. ಅದರಂತೆ ನೇಹಾಗೌಡ, ಜಯಶ್ರೀ ಅವರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿತ್ತು.
ಈ ಬಾರಿ ಚಿತ್ರರಂಗ, ಟೆಲಿವಿಷನ್ ರಂಗದ ಗಣ್ಯರು ಸೇರಿದಂತೆ ಜನ ಸಾಮಾನ್ಯರು ಕೂಡ ಬಿಗ್ ಹೌಸ್ ನಲ್ಲಿ ಕಾಣಸಿಗಲಿದ್ದಾರೆ. ಪತ್ರಿಕೆಯೊಂದು ವರದಿ ಮಾಡಿರುವಂತೆ ಈ ಬಾರಿ ಬಿಗ್ ಹೌಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇಷ್ಟಕಾಮ್ಯ ಚಿತ್ರದ ನಾಯಕಿ ಕಾವ್ಯಾಶೆಟ್ಟಿ, ನಟ ಕೋಮಲ್, ನಟಿ ತಾರಾ, ನಟ ಸುನಿಲ್ ರಾವ್, ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್, ನಟ ದಿಗಂತ್, ಹಾಸ್ಯ ನಟ ರಾಜು ತಾಳಿಕೋಟೆ, ಒಗ್ಗರಣೆ ಡಬ್ಬಿ ಕಾರ್ಯಕ್ರಮ ನಿರೂಪಕ ಮುರಳಿ ಸೇರಿದಂತೆ ಹಲವು ಗಣ್ಯರ ಹೆಸರುಗಳು ಕೇಳಿಬರುತ್ತಿವೆ. ಒಟ್ಟು 16 ಮಂದಿ ಸ್ಪರ್ಧಿಗಳ ಪೈಕಿ 7 ಅಥವಾ 8 ಮಂದಿ ಸ್ಪರ್ಧಿಗಳು ಸೆಲೆಬ್ರಿಟಿಗಳಾದರೆ. ಉಳಿದ 7 ಅಥವಾ 8 ಮಂದಿ ಜನಸಾಮಾನ್ಯರು ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿರಲಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruSandalwoodಸ್ಯಾಂಡಲ್ ವುಡ್Kiccha sudeepColors Kannadaಕಲರ್ಸ್ ಕನ್ನಡಕಿಚ್ಚಾ ಸುದೀಪ್Biggboss Kannada Season 5ಬಿಗ್ ಬಾಸ್ ಸೀಸನ್ 5
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


