ಅಂಜನೀಪುತ್ರ ಸಿನಿಮಾದಲ್ಲಿ ಗೃಹಿಣಿಯರಿಗಾಗಿ ವಿಶೇಷ ಸಾಂಗ್
ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಸಿನಿಮಾದ ಆಡಿಯೋ ನವೆಂಬರ್ ಮೊದಲ ವಾರದಲ್ಲಿ ...

Published On :
ಬೆಂಗಳೂರು: ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಸಿನಿಮಾದ ಆಡಿಯೋ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.
ರವಿ ಬಸ್ರೂರು ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಗೃಹಿಣಿಯರಿಗಾಗಿ ಹಾಡೊಂದನ್ನು ಸಮರ್ಪಸಲಾಗಿದೆ. ಇದೇ ಚಿತ್ರದ ಹೈಲೈಟ್ ಆಗಿದ್ದು, ಹಾಡು ಹಿಟ್ ಆಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಪುನೀತ್ ಮತ್ತು ರಶ್ಮಿಕಾ ಈ ಹಾಡಿನಲ್ಲಿ ನಟಿಸಿದ್ದಾರೆ. ಸಂಪೂರ್ಣವಾಗಿ ಕರಾವಳಿ ಮಾದರಿಯಲ್ಲಿ ನೃತ್ಯ ಸಂಯೋಜಿಸಲಾಗಿದೆ, ಮೈಸೂರು ಮತ್ತು ಉತ್ತರ ಕರ್ನಾಟಕ ಭಾಷೆಗಳಲ್ಲಿ ಸಾಹಿತ್ಯ ರಚಿಸಲಾಗಿದೆ. ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ತಮಿಳಿನ ಸೂಪರ್ ಸಿನಿಮಾ ಪೂಜೈ ನಿಂದ ಪ್ರೇರಿತಗೊಂಡು ಎಂ ಎನ್ ಕುಮಾರ್ ಅಂಜನೀಪುತ್ರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಮ್ಯ ಕೃಷ್ಣ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಹರಿಪ್ರಿಯಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth Rajkumarsongಹಾಡುಪುನೀತ್ ರಾಜ್ ಕುಮಾರ್ಗೃಹಿಣಿRashmika Mandannaರಶ್ಮಿಕಾ ಮಂದಣ್ಣAnjani Putraಅಂಜನೀಪುತ್ರHousewives
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


