ಸಿನಿಮಾ ಸುದ್ದಿ

ಶಾನ್ವಿ ಮತ್ತು ಶ್ರುತಿ ಈಗ ಅಭಿಮಾನಿ ಗೆಳತಿಯರು!

ಸಿನೆಮಾ ನಾಯಕನಟಿಯರು ಮತ್ತೊಬ್ಬ ನಟಿಯನ್ನು ಪ್ರಶಂಸಿಸುವುದು ಚಿತ್ರರಂಗದಲ್ಲಿ ತುಸು ಅಪರೂಪವೇ!ಆದರೆ ನಟಿ ಶಾನ್ವಿ ಶ್ರೀವಾಸ್ತವ ಅವರ ಬಳಿ ಶ್ರುತಿ ಹರಿಹರನ್ ಹೆಸರು ಎತ್ತಿದಾಕ್ಷಣ

ಶಾನ್ವಿ ಮತ್ತು ಶ್ರುತಿ ಈಗ ಅಭಿಮಾನಿ ಗೆಳತಿಯರು!
ಶ್ರುತಿ ಹರಿಹರನ್-ಶಾನ್ವಿ ಶ್ರೀವಾಸ್ತವ
Published On :
ಬೆಂಗಳೂರು: ಸಿನೆಮಾ ನಾಯಕನಟಿಯರು ಮತ್ತೊಬ್ಬ ನಟಿಯನ್ನು ಪ್ರಶಂಸಿಸುವುದು ಚಿತ್ರರಂಗದಲ್ಲಿ ತುಸು ಅಪರೂಪವೇ!ಆದರೆ ನಟಿ ಶಾನ್ವಿ ಶ್ರೀವಾಸ್ತವ ಅವರ ಬಳಿ ಶ್ರುತಿ ಹರಿಹರನ್ ಹೆಸರು ಎತ್ತಿದಾಕ್ಷಣ "ಅವರು ಅದ್ಭುತ ನಟಿ. ಅವರ ನಟನೆ ನನಗೆ ನಿಜಕ್ಕೂ ಇಷ್ಟ" ಎನ್ನುತ್ತಾರೆ. 
ಪ್ರಕಾಶ್ ಜಯರಾಮ್ ನಿರ್ದೇಶನದ 'ತಾರಕ್' ಸಿನೆಮಾದ ಚಿತ್ರೀಕರಣಕ್ಕೆ ೧೪ ದಿನಗಳ ಕಾಲ ಮಲೇಶಿಯಾಗೆ ತೆರಳಿದ್ದ ಶಾನ್ವಿ ಹಿಂದಿರುಗಿದ್ದಾರೆ. ಈ ಸಿನೆಮಾದಲ್ಲಿ ದರ್ಶನ್ ಎದುರು ನಟಿಸುತ್ತಿರುವ ಶಾನ್ವಿ, ಶ್ರುತಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. "ಅವರು ಸಿಕ್ಕಾಪಟ್ಟೆ ಮಾತು ಕೂಡ ಆಡುತ್ತಾರೆ" ಎನ್ನುತ್ತಾರೆ ಶಾನ್ವಿ. 
ಶಾನ್ವಿ ಪ್ರಶಂಸೆಯನ್ನು ಹಿಂದಿರುಗಿಸುವ ನಟಿ ಶ್ರುತಿ "ಈ ಸಿನೆಮಾದಲ್ಲಿ ಶಾನ್ವಿ ಅವರ ಕೆಲಸ ಆದರಣೀಯ ಮತ್ತು ಜನ ಅವರನ್ನು ಇಷ್ಟಪಡಲಿದ್ದಾರೆ. ಇದು ಅವರ ಅತ್ಯುತ್ತಮ ಸಿನೆಮಾ ಆಗಲಿದೆ" ಎನ್ನುತ್ತಾರೆ. 
ಜೂನ್ ಮಧ್ಯದಿಂದ ಚಿತ್ರೀಕರಣಕ್ಕಾಗಿ 'ತಾರಕ್' ಚಿತ್ರತಂಡ ಇಟಲಿಗೆ ತೆರಳಲಿದೆ. ದುಶ್ಯಂತ್ ನಿರ್ಮಿಸುತ್ತಿರುವ ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎ ವಿ ಕೃಷ್ಣ ಕುಮಾರ್ ಅವರ ಸಿನೆಮ್ಯಾಟೋಗ್ರಫಿ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.