'ರೋಗ್' ನಿರ್ಮಾಪಕರಿಗೆ ಪೂರಿ ಜಗನ್ನಾಥ್ ಹೆಸರು ಸೂಚಿಸಿದ್ದು ರಕ್ಷಿತಾ
ತಮ್ಮ ಸೋದರಳಿಯನನ್ನು ಚಿತ್ರರಂಗಕ್ಕೆ ಪರಿಚಯಿಸಲು ಕಾಯುತಿದ್ದ ನಿರ್ಮಾಪಕ ಸಿ ಆರ್ ಮನೋಹರ್ ಅವರಿಗೆ ನಿರ್ದೇಶಕ ಪುರಿ ಜಗನ್ನಾಥ್ ಹೆಸರನ್ನು ಸೂಚಿಸಿದ್ದು ನಟಿ ರಕ್ಷಿತಾ.

Published On :
ಬೆಂಗಳೂರು: ತಮ್ಮ ಸೋದರಳಿಯನನ್ನು ಚಿತ್ರರಂಗಕ್ಕೆ ಪರಿಚಯಿಸಲು ಕಾಯುತಿದ್ದ ನಿರ್ಮಾಪಕ ಸಿ ಆರ್ ಮನೋಹರ್ ಅವರಿಗೆ ನಿರ್ದೇಶಕ ಪುರಿ ಜಗನ್ನಾಥ್ ಹೆಸರನ್ನು ಸೂಚಿಸಿದ್ದು ನಟಿ ರಕ್ಷಿತಾ.
ಗುರುವಾರ ನಡೆದ 'ರೋಗ್' ಸಿನೆಮಾದ ಆಡಿಯೋ ಬಿಡುಗಡೆಯಲ್ಲಿ ಇದ್ಕಕಾಗಿ ರಕ್ಷಿತಾ ಅವರಿಗೆ ಧನ್ಯವಾದ ಹೇಳಿದ ನಿರ್ಮಾಪಕ "ಯೋಜನೆಯೊಂದಕ್ಕೆ ಪ್ರೇಮ್ ಜೊತೆಗೆ ಚರ್ಚಿಸುವಾಗ ಇದೆಲ್ಲವೂ ನಡೆದದ್ದು. ಸಿನಿಮಾರಂಗಕ್ಕೆ ಇಶಾನ್ ನನ್ನ ಪರಿಚಯಿಸುವ ನನ್ನ ಬಯಕೆ ಬಗ್ಗೆ ಹೇಳಿದೆ. 'ಅಪ್ಪು' ಸಿನೆಮಾ ದಿನಗಳಿಂದಲೂ ಪೂರಿ ಅವರ ಉತ್ತಮ ಗೆಳತಿಯಾಗಿರುವ ರಕ್ಷಿತಾ ಕೂಡಲೇ ಅವರಿಗೆ ಕರೆ ಮಾಡಿ ನಮ್ಮಿಬ್ಬರನ್ನು ಪರಿಚಯಿಸಿದರು. ಈಗ ಪೂರಿ ಅವರ ಸಿನೆಮಾದಲ್ಲಿ ಇಶಾನ್ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿರುವುದಕ್ಕೆ ಖುಷಿಯಾಗಿದೆ" ಎನ್ನುತ್ತಾರೆ ಮನೋಹರ್.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪೂರಿ "ಕನ್ನಡ ಸಿನೆಮಾಗಳೊಂದಿಗೆ ನನ್ನ ಸಂಬಂಧ ಹಿಂದಿನದ್ದು. ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರ ಸಿನೆಮಾಗಳನ್ನು ಮಾಡಿದ್ದೇನೆ. ಅವರೆಲ್ಲರೂ ನನ್ನ ಕುಟುಂಬವಿದ್ದಂತೆ. ಈಗ 'ರೋಗ್' ಗಾಗಿ ಸಿ ಆರ್ ಮನೋಹರ್ ಅವರ ಕುಟುಂಬದ ಜೊತೆಗೆ ಬಹಳ ನಿಕಟವಾಗಿದ್ದೇನೆ" ಎಂದಿದ್ದಾರೆ.
ಆಡಿಯೋ ಬಿಡುಗಡೆಯಲ್ಲಿ ಇಡೀ ಕುಟುಂಬ ಭಾಗವಹಿಸಿದ್ದಕ್ಕೆ ಇಶಾನ್ ಸಂತಸಗೊಂಡಿದ್ದಾರೆ. ಸುದೀಪ್, ತೆಲುಗು ನಟರಾದ ಶ್ರೀಕಾಂತ್, ಮನ್ನಾರ ಚೋಪ್ರಾ ಮುಂತಾದವರು ಆಡಿಯೋ ಬಿಡುಗಡೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


