ಸಿನಿಮಾ ಸುದ್ದಿ

ವೃತ್ತಿಯೇ ನನಗೆ ನಿವೃತ್ತಿ ನೀಡಲಿದೆ ಅಥವಾ ನನ್ನ ದೇಹ: ಬಿಗ್ ಬಿ

೭೪ರ ಇಳಿ ವಯಸ್ಸಿನಲ್ಲಿಯೂ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ನಿವೃತ್ತಿಯ ಯಾವುದೇ ಯೋಚನೆಗಳಿಲ್ಲ.

ವೃತ್ತಿಯೇ ನನಗೆ ನಿವೃತ್ತಿ ನೀಡಲಿದೆ ಅಥವಾ ನನ್ನ ದೇಹ: ಬಿಗ್ ಬಿ
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
Published On :
ಮುಂಬೈ: ೭೪ರ ಇಳಿ ವಯಸ್ಸಿನಲ್ಲಿಯೂ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ನಿವೃತ್ತಿಯ ಯಾವುದೇ ಯೋಚನೆಗಳಿಲ್ಲ. 
"ಬಹುತೇಕ ಸಮಯಗಳಲ್ಲಿ ಇಂತಹ ಪ್ರಶ್ನೆಗಳನ್ನು ಎತ್ತಿದ್ದಾರೆ, ನನ್ನ ಬೂಟ್ಸ್ ಕಳಚಿ ನಿವೃತ್ತಿ ಪಡೆದು ವಿಶ್ರಾಂತಿ ಏಕೆ ತೆಗೆದುಕೊಳ್ಳಬಾರದೆಂದು.. ಧನ್ಯವಾದಗಳು ಆದರೆ ನೋ ಥ್ಯಾಂಕ್ ಯು" ಎಂದು ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ. 
"ವೃತ್ತಿಯೇ ನನಗೆ ನಿವೃತ್ತಿ ನೀಡಲಿದೆ ಅಥವಾ ನನ್ನ ದೇಹ... ಅಲ್ಲಿಯವರೆಗೂ ಪ್ರತಿ ಘಂಟೆ ಮತ್ತು ಪ್ರತಿ ದಿನ ಹೋರಾಡಲಿದ್ದೇನೆ" ಎಂದಿರುವ ಅವರು "ಜನ ತಿಳಿದುಕೊಂಡಂತೆ ನನ್ನ ಬಳಿ ಹಣ, ಕೀರ್ತಿ ಅಥವಾ ಹೆಸರು ಇಲ್ಲ... ಮತ್ತು ಅವು ಸಾಧನೆಗೆ ಮಾನದಂಡವಲ್ಲ. ಸಾಧನೆಯನ್ನು ಇದೆ ಎಂದು ಬಣ್ಣಿಸುವವರು ಯಾರು.. ಅದು ಏನು? ಬೆಟ್ಟವೇ? ಪರ್ವತವೇ? ಒಬ್ಬರು ಗೆದ್ದು ಆಕ್ರಮಿಸಿಕೊಳ್ಳಬಹುದಾದ ನಿರ್ಧಿಷ್ಟ ದೂರವೇ?
"ಪ್ರತಿ ಮನುಷ್ಯನಿಗೂ ಸಾಧನೆಯ ಬಗ್ಗೆ ಅವನದ್ದೇ ಕಲ್ಪನೆಗಳು, ವಿನ್ಯಾಸ ಮತ್ತು ಯೋಜನೆಗಳು ಇರುತ್ತವೆ. ಇದನ್ನು ಇಂತದೆ ಎಂದು ಸಾಮಾನ್ಯಕರಿಸಲು ಸಾಧ್ಯವಿಲ್ಲ. ಆದುದರಿಂದ ಆ ಸಾಮಾನ್ಯಕರಣವನ್ನು ನನಗೆ ಆರೋಪಿಸಬೇಡಿ" ಎಂದು ಕೂಡ ಬರೆದಿದ್ದಾರೆ. 
ನಿವೃತ್ತಿ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಚ್ಚಿಕೊಂಡಿರುವ ವಿಶ್ವವಿಖ್ಯಾತ ನಟ "ಎತ್ತರವನ್ನು ಗೆದ್ದಿರುವವನಿಗೆ ನಿವೃತ್ತಿ ಬೇಕು ಎಂದು ಪರಿಗಣಿಸಲಾಗುತ್ತದೆ. ಆದರೆ ಒಂದು ಎತ್ತರ ಗೆದ್ದ ನಂತರ ಮತ್ತೊಂದು ಎತ್ತರ ಇದ್ದೆ ಇರುತ್ತದೆ. ಯಾರಿಗೆ ಗೊತ್ತು? ನಿವೃತ್ತಿ ಎಂಬುದು ಒತ್ತಡದ ನಿರ್ಬಂಧ. ಕೆಲವರು ಅದನ್ನು ಒಪ್ಪಿಕೊಂಡು ಅನುಮೋದಿಸುತ್ತಾರೆ. ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ" ಎಂದಿದ್ದಾರೆ ಬಿಗ್ ಬಿ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.