ಸಿದ್ದರಾಮಯ್ಯ 'ಏನು ನಿಮ್ ಪ್ರಾಬ್ಲಮ್': ಕಾವೇರಿಗಾಗಿ ತಿಥಿ ಗಡ್ಡಪ್ಪ ಗರಂ
ತಮಿಳುನಾಡಿಗೆ ಕಾವೇರಿ ನೀರು ಬಿಡೋ ಬದ್ಲು ನಮಗೆ ವಿಷ ಕೊಟ್ಟು ನೀರಿನ ಒಳಗಡೆ ಮುಳುಗಿಸಿ ನಿಮಗೆ ತೃಪ್ತಿಯಾದಿತು ಎಂದು ತಿಥಿ ಚಿತ್ರದಲ್ಲಿ ಗಡ್ಡಪ್ಪ ಪಾತ್ರದಾರಿ...

Published On :
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡೋ ಬದ್ಲು ನಮಗೆ ವಿಷ ಕೊಟ್ಟು ನೀರಿನ ಒಳಗಡೆ ಮುಳುಗಿಸಿ ನಿಮಗೆ ತೃಪ್ತಿಯಾದಿತು ಎಂದು ತಿಥಿ ಚಿತ್ರದಲ್ಲಿ ಗಡ್ಡಪ್ಪ ಪಾತ್ರದಾರಿ ಚನ್ನೇಗೌಡ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ತಮಿಳುನಾಡಿಗೆ ನೀರು ಬಿಟ್ಟದ್ದನ್ನು ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗಡ್ಡಪ್ಪ ಕಾವೇರಿ ನೀರು ನಮ್ದು, ನಮ್ ರೈತರಿಗೆ ನೀರಿಲ್ಲ, ಕುಡಿಯುಕು ನೀರಿಲ್ಲ, ಇಲ್ದೇನೆ ಒದ್ದಾಡ್ತಾ ಬಿದ್ದಿದ್ದೀವಿ, ನಮ್ಗೆ ನೀರು ಬಿಡಿ ಅಂದ್ರೆ ಅಲ್ಲಿಂದ ತಂದ್ ಬಿಡೋದು. ತಮಿಳುನಾಡಿಗೆ ನೀರು ಬಿಟ್ಟಿದ್ದೀರಲ್ಲಾ ಅದನ್ನ ನಿಲ್ಸಿ. ಇಲ್ಲಾಂದ್ರೆ ನಮ್ಗೆ ಒಂಚೂರ್ ವಿಷ ಕೊಟ್ಟಿ, ನೀರ್ ನೊಳಿಕಾಗಿ ಏನಾದ್ರೂ ಒಂದ್ ಮಾಡಿ ಸಾಯ್ಸಿ ಆಗ ನಿಮ್ಗೆ ತೃಪ್ತಿ ಆಗ್ತದೆ ಎಂದು ತಮ್ಮ ಆಕ್ರೋಶದ ಮಾತುಗಳನ್ನು ಮಾದ್ಯಮದ ಮುಂದೆ ತೊಡಿಕೊಂಡಿದ್ದಾರೆ.
ಸಿದ್ದರಾಮಯ್ಯ ಯಾಕ್ ಇತರ ಮಾಡ್ತಿದಿರೀ ಏನ್ ನಿಮ್ ಪ್ರಾಬ್ಲಮ್, ಯಾಕ್ ನಮ್ಗೆ ಇತರ ತೊಂದ್ರೆ ಕೊಡ್ತಿದಿರೀ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Agricultureತಮಿಳುನಾಡುಪ್ರತಿಭಟನೆprotestSiddaramaiahಸಿದ್ದರಾಮಯ್ಯಕರ್ನಾಟಕfarmersರೈತರುಕಾವೇರಿ ವಿವಾದGaddappaCauvery disputeಗಡ್ಡಪ್ಪ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


