ಪರಸ್ಪರ ಒಪ್ಪಿಗೆಯ ವಿಚ್ಛೇದನ ಕೇಳಿದ ಅಮಲಾ ಪೌಲ್, ವಿಜಯ್
ಎರಡು ವರ್ಷಗಳ ಹಿಂದಷ್ಟೇ ಕಾಲಿವುಡ್ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಹಾಟ್ ನಟಿ...

Published On :
ಚೆನ್ನೈ: ಎರಡು ವರ್ಷಗಳ ಹಿಂದಷ್ಟೇ ಕಾಲಿವುಡ್ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಹಾಟ್ ನಟಿ ಅಮಲಾ ಪೌಲ್ ಈಗ ಡೈವೋರ್ಸ್ ಹಾದಿಯಲ್ಲಿದ್ದು, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ನಿರ್ಧರಿಸ್ದಾರೆ.
ಈ ಸಂಬಂಧ ಇಂದು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ತಾರಾ ದಂಪತಿ, ಹಿಂದು ವಿವಾಹ ಕಾಯ್ದೆಯ ಸೆಕ್ಷೆನ್ 13(ವ) ಅಡಿ ಪರಸ್ಪರ ಒಪ್ಪಿಗೆಯ ವಿಚ್ಛೇದ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಿನ್ಸಿಪಲ್ ಕೌಟುಂಬಿಕ ಕೋರ್ಟ್ ನ್ಯಾಯಾಧಿಶ ಮರಿಯಾ ಕ್ಲೇಟ್ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕಾನೂನಾತ್ಮಕವಾಗಿ ಬೇರೆಯಾಗಲು ಇಂದಿನಿಂದ ಆರು ತಿಂಗಳ ಕಾಲವಕಾಶ ನೀಡಿದ್ದಾರೆ. ಜೀವನೋಪಾಯಕಾಗಿ ಅಥವಾ ಇತರೆ ಯಾವುದೇ ಆಸ್ತಿಗಾಗಿ ಎರಡೂ ಕಡೆಯಿಂದ ಬೇಡಿಕೆ ಇಲ್ಲ ಎಂದು ದಂಪತಿಗಳು ಸ್ಪಷ್ಟಪಡಿಸಿದ್ದಾರೆ.
ಜೂನ್ 12, 2014ರಂದು ಅಮಲಾ ಪೌಲ್ ಹಾಗೂ ವಿಜಯ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮಾರ್ಚ್ 2, 2015ರಿಂದಲೇ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


