ಪ್ರೇಮ್ ನಿರ್ದೇಶನದ "ಆರ್ ದಿ ಕಿಂಗ್" ಚಿತ್ರ ಮುಂದಕ್ಕೆ..!
ರಾಜ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ "ಆರ್ ದಿ ಕಿಂಗ್" ಚಿತ್ರ ಮುಂದಕ್ಕೆ ಹೋಗಿದೆ...

ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ "ಆರ್ ದಿ ಕಿಂಗ್" ಚಿತ್ರ ಮುಂದಕ್ಕೆ ಹೋಗಿದೆ.
ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಮತ್ತು ರಾಜ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ಚಿತ್ರ ಆರ್ ದಿ ಕಿಂಗ್ ಚಿತ್ರ ಮುಂದಕ್ಕೆ ಹೋಗಿದ್ದು, ಚಿತ್ರ ಕಥೆಯಲ್ಲಿ ಬದಲಾವಣೆ ಬಯಸಿರುವ ರಾಜ್ ಕುಟುಂಬ ಚಿತ್ರೀಕರಣವನ್ನು ಮುಂದಕ್ಕೆ ಹಾಕಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಡಾ.ರಾಜ್ ಕುಮಾರ್ ಹಟ್ಟುಹಬ್ಬದ ದಿನದಂದು ನಡೆದ ಭರ್ಜರಿ ಕಾರ್ಯಕ್ರಮದಲ್ಲಿ ಟೈಟಲ್ ಲಾಂಚ್ ಮಾಡಿದ್ದ ನಿರ್ದೇಶಕ ಪ್ರೇಮ್ ಕೆಲ ಪ್ರೋಮೋ ಶೂಟ್ ಕೂಡ ಮಾಡಿದ್ದರು. ಆದರೆ ಚಿತ್ರದ ಕಥೆ ಕುರಿತು ಮಾತ್ರ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಹೀಗಾಗಿ ಚಿತ್ರದ ಕಥೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಚಿತ್ರದ ನಿರ್ಮಾಣದ ಹೊಣೆಯನ್ನು ರಾಜ್ ಕುಟುಂಬದ ಒಡೆತನವಿರುವ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ವಹಿಸಿಕೊಂಡಿದ್ದು, ಸ್ವತಃ ರಾಘವೇಂದ್ರ ರಾಜ್ ಕುಮಾರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿನಯ್ ರಾಜ್ ಕುಮಾರ್ ಅವರ 2ನೇ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳು ಹೆಚ್ಚಿವೆ. ಹೀಗಾಗಿ ಸಾಮಾನ್ಯ ಕಥೆಯಾಧಾರಿತ ಚಿತ್ರವನ್ನು ಮಾಡುವುದು ಬೇಡ ಎಂದು ನಿರ್ಧರಿಸಿದ್ದೇವೆ. ನಿರ್ದೇಶಕ ಪ್ರೇಮ್ ಅವರು ನೀಡಿರುವ ಕಥೆಯಲ್ಲಿ ಎಲ್ಲೋ ಸಣ್ಣಪುಟ್ಟ ತೊಡಕಿದೆ ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿ ಹೊಸ ಕಥೆಗಳಿಗಾಗಿ ಪ್ರೇಮ್ ಅವರನ್ನು ಕೇಳಿದ್ದೇವೆ. ಪ್ರೇಮ್ ಕೂಡ ನಮ್ಮ ಅಭಿರುಚಿಗೆ ತಕ್ಕಂತೆ ಇರುವ ಕಥೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ಆರ್ ದಿ ಕಿಂಗ್ ಎಂಬ ಶೀರ್ಷಿಕೆ ಕುರಿತು ಮಾತನಾಡಿದ ಅವರು, ಇದೇ ಟೈಟಲ್ ಬೇಕು ಎಂದು ನಾವೇನು ಅಂದುಕೊಂಡಿಲ್ಲ. ಚಿತ್ರ ಕಥೆ ಕುರಿತಂತೆ ಪ್ರೇಮ್ ಅವರು ಯಾವುದೇ ಶೀರ್ಷಿಕೆ ಇಡಬಹುದು. ಪ್ರಸ್ತುತ ಆರ್ ದಿ ಕಿಂಗ್ ಟೈಟಲ್ ನೊಂದಾಯಿಸಲಾಗಿದೆ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.
ಒಟ್ಟಾರೆ ಭಾರಿ ನಿರೀಕ್ಷೆಯೊಂದಿಗೆ ಚಾಲನೆ ಪಡೆದ "ಆರ್ ದಿ ಕಿಂಗ್" ಚಿತ್ರ ಇದೀಗ ಮುಂದೂಡಲ್ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


