"ಜುದ್ವಾ -2" ದಾಖಲೆ, ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆ
ನಟರು ವರುಣ್ ಧವನ್, ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ತಾಪ್ಸೆ ಪನ್ನೂ ಅಭಿನಯದ "ಜುದ್ವಾ -2" 16 ದಿನಗಳಲ್ಲಿ ರೂ 200 ಕೋಟಿ ದಾಟಿದೆ.

Published On :
ಮುಂಬಯಿ: ನಟರು ವರುಣ್ ಧವನ್, ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ತಾಪ್ಸೆ ಪನ್ನೂ ಅಭಿನಯದ "ಜುದ್ವಾ -2" 16 ದಿನಗಳಲ್ಲಿ ರೂ 200 ಕೋಟಿ ದಾಟಿದೆ.
1997 ರ ಸಲ್ಮಾನ್ ಖಾನ್-ರ "ಜುಡ್ವಾ" ದ ನೂತನ ಅವತರಿಣಿಕೆಯನ್ನು ಡೇವಿಡ್ ಧವನ್ "ಜುಡ್ವಾ - 2" ಹೆಸರಿನಲ್ಲಿ ನಿರ್ದೇಶಿಸಿದ್ದರು. ಚಿತ್ರವು ಸೆ.29 ರಂದು ತೆರೆ ಕಂದಿತ್ತು.
ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಮತ್ತು ಸಾಜಿದ್ ನದಿದ್ವಾಲಾ ಅವರ ನಿರ್ಮಾಣದಲ್ಲಿ ಆಕ್ಷನ್-ಹಾಸ್ಯ ಮಿಶ್ರಿತ ಚಿತ್ರ 2.65 ಕೋಟಿ ರೂ. ಗಳಿಕೆಯೊಂದಿಗೆ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ಇದರ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹ 130.21 ಕೋಟಿ ರೂ. ಎಂದು ಚಿತ್ರ ತಂದ ಹೇಳಿಕೆಯಲ್ಲಿ ತಿಳಿಸಿದೆ.
ಗಲ್ಲಾ ಪೆಟ್ಟಿಗೆಯಲ್ಲಿ ಚಿತ್ರ ಒಟ್ಟಾರೆ 203.33 ಕೋಟಿ ರೂ.ಗಳಿಸಿದ್ದು ವರುಣ್ ತಮ್ಮ ಐಕಾನಿಕ್ ಲುಕ್ ಗೆ ಮರಳಿದ್ದಾರೆ. "ಜುದ್ವಾ 2" ದಲ್ಲಿ ವರುಣ್, ಸಲ್ಮಾನ್ ರ ಪ್ರೇಮ್ ಮತ್ತು ರಾಜ. ಆಗಿ ನಟಿಸಿದ್ದರೆ ಜಾಕ್ವೆಲಿನ್ ಮತ್ತು ತಾಪ್ಸೆ ಅನುಕ್ರಮವಾಗಿ ಕರಿಷ್ಮಾ ಕಪೂರ್ ಮತ್ತು ರಂಭಾ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Jacqueline Fernandezಜಾಕ್ವೆಲಿನ್ ಫೆರ್ನಾಂಡಿಸ್ವರುಣ್ ಧವನ್Taapsee Pannuತಾಪ್ಸಿ ಪನ್ನುVarun DhawanJudwaa 2ಜುದ್ವಾ 2
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


