ತ್ರೈಮಾಸಿಕ ವರದಿ: ವೊಡಾಫೋನ್ ಐಡಿಯಾಗೆ 25,460 ಕೋಟಿ ನಷ್ಟ
ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಗುರುವಾರ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,460 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.

ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಗುರುವಾರ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,460 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.
ವೊಡಾಫೋನ್ ಐಡಿಯಾದ ನಷ್ಟವು ಹಿಂದಿನ ವರ್ಷದ ಈ ಅವಧಿಯಲ್ಲಿ ಸುಮಾರು 4,874 ಕೋಟಿ ರೂ ಆಗಿತ್ತು. ಇನ್ನು ಹಣಕಾಸು ವರ್ಷ2021 ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 10,659.3 ಕೋಟಿ ರೂ.ಗೆ ತಲುಪಿದ್ದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 11,269.9 ಕೋಟಿ ರೂ. ಆಗಿತ್ತು.
ಅಡ್ಜೆಸ್ಟೆಡ್ ಗ್ರಾಸ್ ರೆವಿನ್ಯೂ (ಎಜಿಆರ್) ಜೂನ್ ತ್ರೈಮಾಸಿಕದಲ್ಲಿ ಹೆಚ್ಚುವರಿ ಶುಲ್ಕ 19,440.5 ಕೋಟಿ ರೂ. ಒಳಗೊಂಡಿದೆ. ವಿವೇಕದಿಂದ, ಒಟ್ಟು ಅಂದಾಜು ಎಜಿಆರ್ 194.4 ಬಿಲಿಯನ್ ರೂ.ಗಳ ಬಾಕಿ ಶುಲ್ಕವನ್ನು ಗುರುತಿಸಿದ್ದೇವೆ. ಜೊತೆಗೆ ಮಾರ್ಚ್ 31, 2020 ರ ವೇಳೆಗೆ 460.0 ಬಿಲಿಯನ್ ರೂ.ಗಳ ಬಾಕಿ ಹೊಣೆಗಾರಿಜೆ ಇದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ .
ಕೊರೋನಾ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಮೊದಲ ತ್ರೈಮಾಸಿಕ ಆದಾಯ ಪ್ರಭಾವಿತವಾಗಿದೆ ಎಂದು ಕಂಪನಿ ತಿಳಿಸಿದೆ.
ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂಗಡಿಗಳ ಲಾಕ್ ಡೌನ್ ಆಗಿ ರೀಚಾರ್ಜ್‌ಗಳ ಲಭ್ಯತೆ ಕಡಿಮೆಯಾಗಿತ್ತು. ಆರ್ಥಿಕ ಕುಸಿತದ ಕಾರಣದಿಂದಾಗಿ ಗ್ರಾಹಕರ ರೀಚಾರ್ಜ್ ಮಾಡುವ ಸಾಮರ್ಥ್ಯದ ಮೇಲೆ ಸಹ ಪರಿಣಾಮ ಬೀರಿತ್ತು ಎಂದು ವೊಡಾಫೋನ್ ಐಡಿಯಾದ ಎಂಡಿ ಮತ್ತು ಸಿಇಒ ರವೀಂದರ್ ಟಕ್ಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


