coronavirus lockdown

ತ್ರೈಮಾಸಿಕ ವರದಿ: ವೊಡಾಫೋನ್ ಐಡಿಯಾಗೆ 25,460 ಕೋಟಿ ನಷ್ಟ
ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಗುರುವಾರ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,460 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.

4 ತಿಂಗಳಲ್ಲಿ ಶೇ.67ರಷ್ಟು ಬೆಳವಣಿಗೆ ಹಿನ್ನೆಲೆ: ಬೆಂಗಳೂರಿನಲ್ಲಿ ಹೊಸ ಜೂಮ್ ಟೆಕ್ ಸೆಂಟರ್ ಸ್ಥಾಪನೆ ಶೀಘ್ರ
ಗೂಗಲ್, ಮೈಕ್ರೋಸಾಫ್ಟ್ ಮತ್ತು ಜಿಯೋ ಮುಂತಾದ ಟೆಕ್ ಸಂಸ್ಥೆಗಳ ಪ್ರತಿಸ್ಪರ್ಧಿ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಸಂಸ್ಥೆ ಜೂಮ್ ತನ್ನ ಭಾರತೀಯ ಹಾಗೂ ಜಾಗತಿಕ ಸೇವೆಗಳ ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತನ್ನ ಮೊದಲ ಟೆಕ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಿದೆ.

ವೈದ್ಯಕೀಯ ಕಾರಣಕ್ಕೆ ತಾಯಿಯೊಂದಿಗೆ ಉತ್ತರ ಪ್ರದೇಶಕ್ಕೆ ಪ್ರಯಾಣ: ನಟ ನವಾಜುದ್ದೀನ್ ಸಿದ್ದಿಕಿ ಸ್ಪಷ್ಟನೆ
ನಟ ನವಾಜುದ್ದೀನ್ ಸಿದ್ದಿಕಿ ಸೋಮವಾರ ತಮ್ಮ ಕುಟುಂಬದೊಡನೆ ತಮ್ಮ ಸ್ವಂತ ಊರಾದ ಉತ್ತರ ಪ್ರದೇಶದ ಬುಧಾನಾಗೆ ಪ್ರಯಾಣಿಸಿದ್ದು ಲಾಕ್ ಡೌನ್ ನಡುವೆಯೇ ಅಂತರ್ ರಾಜ್ಯ ಪ್ರಯಾಣ ಮಾಡಿದುದಕ್ಕಾಗಿ ವಿವಾದಕ್ಕೆ ಈಡಾಗಿದ್ದಾರೆ. ಆದರೆ ಇದಕ್ಕೀಗ ಸ್ಪಷ್ಟನೆ ನೀಡಿರುವ ನಟ ಸಿದ್ದಿಕಿ ತನ್ನ ತಾಯಿಗೆ ಅನಾರೋಗ್ಯವಿದ್ದ ಕಾರಣ ಪ್ರಯಾಣ ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ

ಮೇ 31ರವರೆಗೆ ಲಾಕ್ ಡೌನ್ ಮುಂದುವರಿಕೆ: ರಾಷ್ಟ್ರೀಯ ವಿಪತ್ತು ಪ್ರಾಧಿಕಾರದಿಂದ ಗೃಹ ಇಲಾಖೆಗೆ ಮನವಿ
ಮೇ 18ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 3.0 ಲಾಕ್ ಡೌನ್ ಅವಧಿ ಮುಗಿಯಲಿದ್ದು ನಾಳೆಯಿಂದ ಮೇ 31ರವರೆಗೆ ಲಾಕ್ ಡೌನ್ ಮುಂದುವರೆಸುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿಕೊಂಡಿದೆ.

ಲಾಕ್ ಡೌನ್: ಚಿಕ್ಕಬಳ್ಳಾಪುರದಲ್ಲಿ ವಿಷ ಸೇವಿಸಿ ಹೂವು ಬೆಳೆಗಾರ ಆತ್ಮಹತ್ಯೆ
ಜಮೀನಿನಲ್ಲಿ ಹೂವು ಬೆಳೆದಿದ್ದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಿಗುಪ್ಪೆ ಗ್ರಾಮದಲ್ಲಿ ನಡೆದಿದೆ.

ಕೊರೋನಾ ಲಾಕ್‌ಡೌನ್ ನಡುವೆ ಆನ್ ಲೈನ್ ಪಾರ್ಟಿ ಸಂಭ್ರಮ!
ಲಾಕ್‌ಡೌನ್ ಸಮಯದಲ್ಲಿ ಅನೇಕರು ತಮ್ಮ ಫ್ಯಾಷನ್ ಸೌಲಭ್ಯ ತ್ಯಜಿಸುವುದು ಕಠಿಣವಾಗುತ್ತದೆ ಆದರೆ ನಗರದ ಫ್ಯಾಷನ್ ಪ್ರಿಯರು ವರ್ಚುವಲ್ ಕಾಸ್ಟ್ಯೂಮ್ ಪಾರ್ಟಿಗೆ ಸಿದ್ದವಾಗಿದ್ದಾರೆ. ಇನ್ಸ್ಟಾಗ್ರಾಮ್ ಕಾಸ್ಟ್ಯೂಮ್ ಪಾರ್ಟಿ ವಿಥ್ ಎಸ್ ಎಂಬ ವಿಶೇಷ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅನೇಕರನ್ನು ಆಕರ್ಷಿಸುತ್ತಿದೆ.

'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಯೋಜನೆ ಜಾರಿಗೆ ಮುಂದಾಗಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಕೊರೋನಾವೈರಸ್ ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಬ್ಸಿಡಿ ಆಹಾರ ಧಾನ್ಯವನ್ನು ಪಡೆಯಲು ಸಾಧ್ಯವಾಗುವಂತೆ'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಯೋಜನೆಯನ್ನು 'ತಾತ್ಕಾಲಿಕವಾಗಿ' ಅಳವಡಿಸಿಕೊಳ್ಳುವ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರವ ಸರ್ಕಾರಕ್ಕೆ ಕೇಳಿದೆ. ಕೇಂದ್ರ ಸರ್ಕಾರದ ಈ ಯೋಜನೆ ಇದೇ ವರ್ಷ ಜೂನ್

ಕೊರೋನಾ ಎಫೆಕ್ಟ್: ನೆಟ್‌ಫ್ಲಿಕ್ಸ್ ಗೆ 15 ದಶಲಕ್ಷ ಹೊಸ ಚಂದಾದಾರರು!
ಕೊರೋನಾವೈರಸ್ ಹರಡುವಿಕೆಯಿಂದ ಉಂಟಾದ ಲಾಕ್‌ಡೌನ್ ಆನ್‌ಲೈನ್ ಬಳಕೆದಾರರ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಈ ವೇಳೆ ನೆಟ್‌ಫ್ಲಿಕ್ಸ್ ತನ್ನ ಮೊದಲ ತ್ರೈಮಾಸಿಕದಲ್ಲಿದಾಖಲೆಯ 15.8 ಮಿಲಿಯನ್ ಹೊಸ ಚಂದಾದಾರರನ್ನು ಪಡೆದುಕೊಂಡಿದೆ.

ವಲಸೆ ಕಾರ್ಮಿಕರು ಎಂದಿಗೆ ತಂತಮ್ಮ ಊರು ಸೇರಬಹುದು?: ಕೇಂದ್ರ ಸರ್ಕಾರಕ್ಕೆ ಉದ್ದವ್ ಠಾಕ್ರೆ ಪ್ರಶ್ನೆ
ಕೊರೋನಾವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಹೋಗಲಾಗದೆ ಸಮಸ್ಯೆಗೆ ಸಿಲುಕಿದ್ದು ಅವರನ್ನು ಅವರವರ ಸ್ಥಳಗಳಿಗೆ ಗೆ ಕಳುಹಿಸುವ ಕುರಿತು ಈ ತಿಂಗಳ ಅಂತ್ಯದ ವೇಳೆಗೆ ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

