ಮೇ 31ರವರೆಗೆ ಎಲ್ಲಾ ವಿಮಾನಗಳಲ್ಲಿ ಉಚಿತ ರೀಶೆಡ್ಯೂಲಿಂಗ್, ನೇರ ಬುಕಿಂಗ್ ರಿಯಾಯಿತಿ ಘೋಷಿಸಿದ ಏರ್ ಏಷ್ಯಾ ಇಂಡಿಯಾ
ಮೇ 31 ರವರೆಗೆ ಅನ್ವಯಿಸುವಂತೆ ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್‌ಗಳ ಎಲ್ಲಾ ರೀ ಶೆಡ್ಯೂಲಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ.

ನವದೆಹಲಿ: ಮೇ 31 ರವರೆಗೆ ಅನ್ವಯಿಸುವಂತೆ ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್‌ಗಳ ಎಲ್ಲಾ ರೀ ಶೆಡ್ಯೂಲಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ.
ಕೊರೋನಾವೈರಸ್ ಅನಿಶ್ಚಿತತೆಯ ದೃಷ್ಟಿಯಿಂದ ಏರ್‌ಏಷ್ಯಾ ಇಂಡಿಯಾ ಈ ಪ್ರಸ್ತಾಪವನ್ನು ಘೋಷಿಸಿದೆ.
ಇದಲ್ಲದೆ, ಏರ್‌ಏಷ್ಯಾ ಇಂಡಿಯಾ www.airasia.com ಮತ್ತು ಏರ್‌ಏಷ್ಯಾ ಇಂಡಿಯಾ ಮೊಬೈಲ್ ಆ್ಯಪ್‌ನಲ್ಲಿ 14 ದಿನಗಳ ಮುಂಚಿತವಾಗಿ ಮಾಡಿದ ಬುಕಿಂಗ್‌ಗಳಿಗೆ ಶೇಕಡಾ 10 ರಷ್ಟು ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಪ್ರೋಮೋ ಕೋಡ್ FLYNOW10 ಬಳಸಿ ಯಾರು ಟಿಕೆಟ್ ಬುಕ್ ಮಾಡುವರೋ ಅವರು ಈ ರಿಯಾಯಿತಿ ಪಡೆಯಲಿದ್ದಾರೆ ಎಂದು ಹೇಳಿಕೆ ನೀಡಿದೆ.
ಜನರು ತಮ್ಮ ಬುಕಿಂಗ್ ಅನ್ನು ನಿರ್ವಹಿಸಬಹುದು ಮತ್ತು ರೀಶೆಡ್ಯೂಲಿಂಗ್ ಮಾಡಿಸುವ ಮೂಲಕ ವಿಮಾನಯಾನ ವೆಬ್‌ಸೈಟ್‌ನಲ್ಲಿ "ಬಿಗ್ ಮೆಂಬರ್" ಆಗಿ ಸೈನ್ ಅಪ್ ಮಾಡುವ ಮೂಲಕ ತಮ್ಮ ಮೂಲ ಬುಕಿಂಗ್ ಮಾಡುವಾಗ ಬಳಸುವ ಇ-ಮೇಲ್ ಐಡಿಯೊಂದಿಗೆ, ತಮ್ಮ ಅಸ್ತಿತ್ವದಲ್ಲಿರುವ ಪಿಎನ್‌ಆರ್ ಅನ್ನು ತಮ್ಮ ಬಿಗ್ ಮೆಂಬರ್ ಐಡಿಗೆ ಲಿಂಕ್ ಮಾಡಿ ಮತ್ತು ಅವರ ಬುಕಿಂಗ್ ಅನ್ನುಪಡೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


