ವಾಣಿಜ್ಯ

ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್, ಕೇವಲ 249 ರು. ಅನಿಯಮಿತ ಡಾಟಾ!

ಅಗ್ಗದ ಡಾಟಾ ಪ್ಲಾನ್ ಘೋಷಿಸಿದ್ದ ರಿಲಯನ್ಸ್ ಜಿಯೋಗೆ ಸಮನಾದ ಪೈಪೋಟಿ ನೀಡುತ್ತೇವೆ ಎಂದು ಘೋಷಿಸಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಅದಕ್ಕೆ ತಕ್ಕಂತೆ ಅತ್ಯಂತ ಅಗ್ಗದ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿದೆ.

ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್, ಕೇವಲ 249 ರು. ಅನಿಯಮಿತ ಡಾಟಾ!
ಬಿಎಸ್ ಎನ್ ಎಲ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಅಗ್ಗದ ಡಾಟಾ ಪ್ಲಾನ್ ಘೋಷಿಸಿದ್ದ ರಿಲಯನ್ಸ್ ಜಿಯೋಗೆ ಸಮನಾದ ಪೈಪೋಟಿ ನೀಡುತ್ತೇವೆ ಎಂದು ಘೋಷಿಸಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಅದಕ್ಕೆ ತಕ್ಕಂತೆ  ಅತ್ಯಂತ ಅಗ್ಗದ ಪ್ಲಾನ್ ಗಳನ್ನು ಘೋಷಣೆ ಮಾಡುತ್ತಿದೆ.

ಈ ಹಿಂದೆ ಬಿಬಿಜಿ ಕಾಂಬೋ ಪ್ಲಾನ್  ನಲ್ಲಿ 1, 199 ರುಗೆ ಅನಿಯಮಿತ ಎಸ್ ಟಿಡಿ ಹಾಗೂ ಲೋಕಲ್ ಉಚಿತ ಕರೆಗಳ ಆಫರ್ ನೀಡಿದ್ದ ಬಿಎಸ್ ಎನ್ ಎಲ್ ಇದೀಗ ಹೊಸ ಗ್ರಾಹಕರ ಸೆಳೆಯಲು  ಮತ್ತೊಂದು ವಿಶೇಷ ಆಫರ್ ಘೋಷಣೆ ಮಾಡಿದೆ. ಬಿಬಿ249 ಹೆಸರಿನ ಪ್ಲಾನ್ ಘೋಷಣೆ ಮಾಡಲಾಗಿದ್ದು, ಅದರಂತೆ ಬಿಎಸ್ ಎನ್ ಎಲ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ಪಡೆಯುವ ಹೊಸ ಗ್ರಾಹಕರು  ಕೇವಲ 249ರು.ಗೆ ಅನಿಯಮಿತ ಡಾಟಾ ಪಡೆಯಬಹುದಾಗಿದೆ.

ಈ ಆಫರ್ 9-09-2016ರಿಂದ ಜಾರಿಯಾಗಿದ್ದು ಈ ದಿನಾಂಕದ ಬಳಿಕ ಕನೆಕ್ಷನ್ ಪಡೆದ ಎಲ್ಲ ಹೊಸ ಗ್ರಾಹಕರು ಈ ಪ್ಲಾನ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಬಿಎಸ್ ಎನ್ ಎಲ್ ಹೇಳಿದೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.