ಜಿಯೋ ಗೆ ವೊಡಾಫೋನ್ ಸವಾಲು: 1ಜಿಬಿ ಪ್ಲಾನ್‌ಗೆ 10 ಜಿಬಿ ಡೇಟಾ
ರಿಲಯನ್ಸ್ ಜಿಯೊ ಉಚಿತ ಕೊಡುಗೆಗಳಿಗೆ ಸವಾಲಾಗಿ ವೊಡಾಫೋನ್, 4ಜಿ ಮೊಬೈಲ್ ಬಳಕೆದಾರರಿಗಾಗಿ 1ಜಿಬಿ ಪ್ಲಾನ್ ದರದಲ್ಲೇ 10 ಜಿಬಿ ಡೇಟಾ ನೀಡುವುದಾಗಿ ..

ನವದೆಹಲಿ: ರಿಲಯನ್ಸ್ ಜಿಯೊ ಉಚಿತ ಕೊಡುಗೆಗಳಿಗೆ ಸವಾಲಾಗಿ ವೊಡಾಫೋನ್, 4ಜಿ ಮೊಬೈಲ್ ಬಳಕೆದಾರರಿಗಾಗಿ 1ಜಿಬಿ ಪ್ಲಾನ್ ದರದಲ್ಲೇ 10 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದೆ.
ಹೊಸ 4ಜಿ ಸ್ಮಾರ್ಟ್‌ಫೋನ್ ಹೊಂದಿರುವ ವೊಡಾಫೋನ್ ಗ್ರಾಹಕರು, 1ಜಿ ಬಿ ಪ್ಲಾನ್ ರಿಚಾರ್ಜ್‌ನೊಂದಿಗೆ ಹೆಚ್ಚುವರಿ 9 ಜಿಬಿಗಳನ್ನು ಪಡೆಯಲಿದ್ದಾರೆ. 2016 ಡಿಸೆಂಬರ್ 31ರೊಳಗೆ ಪ್ರಿಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರು 3ಜಿ ಅಥವಾ 4ಜಿ ಸೇವೆಯ ಈ ಆಫರ್‌ಗಳನ್ನು ಪಡೆಯಬಹುದಾಗಿದೆ.
ಈ ಆಫರ್‌ನ ಚಂದಾದಾರರು ವೊಡಾಫೋನ್ ಪ್ಲೇನಲ್ಲಿ ಉಚಿತವಾಗಿ ಟಿವಿ, ಚಲನಚಿತ್ರ ಹಾಗೂ ಹಾಡುಗಳನ್ನು ನೋಡಬಹುದಾಗಿದೆ. ಹೊಸ 4ಜಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ. ಈಶಾನ್ಯ ರಾಜ್ಯಗಳಲ್ಲೂ 4ಜಿ ಹ್ಯಾಂಡ್‌ಸೆಟ್ ಬಳಕೆದಾರರಿಗೆ ಈ ಆಫರ್ ಲಭ್ಯವಿದ್ದು, ಅದಕ್ಕೆ ಕಾಲಮಿತಿ ವಿಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


