ನಮ್ಮ ಮೆಟ್ರೋದಲ್ಲಿ ಬಾಡಿಗೆ ಜಾಗ: ಫ್ಲಿಪ್ ಕಾರ್ಟ್ ಹಿಂದಿಕ್ಕಿದ ಸ್ಟಾರ್ಟ್ ಅಪ್ ಸಂಸ್ಥೆಗಳು
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವ್ಯಾಪಾರ ವಹಿವಾಟುಗಳಿಗಾಗಿ ಒಂದಷ್ಟು ಜಾಗವನ್ನು ಬಾಡಿಗೆಗೆ ನೀಡಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳು ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್ ನ್ನು ಹಿಂದಿಕ್ಕಿವೆ.

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವ್ಯಾಪಾರ ವಹಿವಾಟುಗಳಿಗಾಗಿ ಒಂದಷ್ಟು ಜಾಗವನ್ನು ಬಾಡಿಗೆಗೆ ನೀಡಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳು ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್ ನ್ನು ಹಿಂದಿಕ್ಕಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್ ಸಿಎಲ್ ವಕ್ತಾರ ವಸಂತ್ ರಾವ್ " ಬಾಡಿಗೆ ಜಾಗ ಪಡೆಯುವ ಪ್ರಕ್ರಿಯೆಯಲ್ಲಿ ಬೇರೆ ಸಂಸ್ಥೆಗಳು ಫ್ಲಿಪ್ ಕಾರ್ಟ್ ನ್ನು ಹಿಂದಿಕ್ಕಿವೆ" ಎಂದಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಒಂದಷ್ಟು ಜಾಗವನ್ನು ಬಾಡಿಗೆಗೆ ನೀಡುವುದಾಗಿ ನಮ್ಮ ಮೆಟ್ರೋ ಈ ಹಿಂದೆಯೇ ಘೋಷಿಸಿತ್ತು. ಅಂತೆಯೇ ಬಾಡಿಗೆ ಜಾಗವನ್ನು ಪಡೆಯಲು ಬಿಡ್ ಮಾಡುವಂತೆ ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿತ್ತು.
ಆಯ್ಕೆ ಪ್ರಕ್ರಿಯೆಯಲ್ಲಿ ಫ್ಲಿಪ್ ಕಾರ್ಟ್ ನಂತಹ ಸಂಸ್ಥೆಗಳನ್ನು ಈಗಷ್ಟೆ ಪ್ರಾರಂಭವಾಗಿರುವ ಸ್ಟಾರ್ಟ್ ಅಪ್ ಗಳು ಹಿಂದಿಕ್ಕಿ ಬಾಡಿಗೆ ಜಾಗ ಪಡೆಯುವಲ್ಲಿ ಯಶಸ್ವಿಯಾಗಿವೆ. ಬೈಯ್ಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ನಗರ, ಇಂದಿರಾನಗರ, ಟ್ರಿನಿಟಿ ಸರ್ಕಲ್, ಹಲಸೂರು ಸೇರಿ ಒಟ್ಟು 5 ಮೆಟ್ರೋ ನಿಲ್ದಾಣಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಾಡಿಗೆ ಜಾಗ ಲಭ್ಯವಿದೆ. ಇದನ್ನು ಪಡೆಯಲು ಫ್ಲಿಪ್ ಕಾರ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಆದರೆ ಫ್ಲಿಪ್ ಕಾರ್ಟ್ ಸಂಸ್ಥೆ ಮಾತ್ರ ಬಾಡಿಗೆ ಜಾಗ ಪಡೆಯುವಲ್ಲಿ ವಿಫಲವಾಗಿದೆ.
ಬೈಯ್ಯಪ್ಪನ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವಾಣಿಜ್ಯ ವ್ಯಾಪಾರ ಗಳಿಗೆ ಸರಿ ಹೊಂದುವಂತಹ 11 ಮಳಿಗೆಗಾಗುವಷ್ಟು ಜಾಗವಿದೆ. ಇಂದಿರಾನಗರದಲ್ಲಿ 6, ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ವೃತ್ತದಲ್ಲಿ 5, ಹಲಸೂರು ಮೆಟ್ರೋ ನಿಲ್ದಾಣದಲ್ಲಿ 3 ಜಾಗಗಳು ಇರಲಿವೆ. ಈ ಪೈಕಿ ಆನ್ ಲೈನ್ ನಲ್ಲಿ ಬೇಳೆ, ಅಕ್ಕಿ ಸೇರಿದಂತೆ ಧಾನ್ಯಗಳನ್ನು ಮಾರಾಟ ಮಾಡುವ ಸ್ಟಾರ್ಟ್ ಅಪ್ ಸಂಸ್ಥೆ ವಾಲ್ನಟ್ ಸ್ಟೋರ್ಸ್.ಇನ್ ಗೆ ಬೈಯ್ಯಪ್ಪನ ಹಳ್ಳಿಯಲ್ಲಿ ಬಾಡಿಗೆ ದೊರೆತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಟಾರ್ಟಪ್ ನ ಮಾಲೀಕರಾದ ಪ್ರೀತಿ, ನಮಗೆ ಅಂಗಡಿಯನ್ನು ತೆರೆಯುವುದಕ್ಕೆ ಇದಕ್ಕಿಂತ ಉತ್ತಮ ಜಾಗ ಬೇರೆ ಸಿಗುವುದಿಲ್ಲ. ಆನ್ ಲೈನ್ ಶಾಪಿಂಗ್ ಮಾಡಲು ಇಚ್ಛಿಸದವರು ಅಂಗಡಿಗೆ ಬಂದು ಪದಾರ್ಥಗಳನ್ನು ಖರೀದಿಸುತ್ತಾರೆ ಎಂದು ಹೇಳಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಜಾಗ ಬಾಡಿಗೆಗೆ ಕೊಡುವುದರಿಂದ ಬಿಎಂಆರ್ ಸಿಎಲ್ ಗೆ ಆದಾಯ ಹೆಚ್ಚಲಿದ್ದು, ಮೊದಲ ಹಂತದ ಮೆಟ್ರೋ ಕಾಮಗಾರಿಯ ಸಾಲ ತೀರಿಸಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


