ಜಿಯೋಗೆ ಸೆಡ್ಡು: ಏರ್‌ಟೆಲ್‌ನಿಂದ 259 ರು,ಗೆ 10 ಜಿಬಿ ಡೇಟಾ
ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಸೆಡ್ಡು...

Published On :
ಮುಂಬೈ: ಅನಿಯಮಿತ ಸೇವೆ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿ ಏರ್‌ಟೆಲ್ ಇದೀಗ ತನ್ನ ಗ್ರಾಹಕರಿಗೆ 259 ರುಪಾಯಿಗೆ 10 ಜಿಬಿ ಡೇಟಾ ಆಫರ್ ನೀಡಿದೆ.
ಏರ್ಟೇಲ್ ಬಳಕೆದಾರರು ಯಾವುದೇ 4ಜಿ ಫೋನ್ ಹೊಂದಿದ್ದರೆ ಅಂತಹವರು ಈ ಸೇವೆ ಪಡೆಯಬಹುದಾಗಿದೆ. ರಿಚಾರ್ಚ್ ಮಾಡಿದ ತಕ್ಷಣ ಒಂದು ಜಿಬಿ ಡೇಟಾ ನಿಮ್ಮ ಮೊಬೈಲ್ ಫೋನ್ ಗೆ ಬರುತ್ತದೆ. ನಂತರ ಗೂಗಲ್ ಪ್ಲೇಸ್ಟೋರ್ ನಲ್ಲಿ ಮೈ ಏರ್ಟೆಲ್ ಆಪ್ ಇನ್ ಸ್ಟಾಲ್ ಮಾಡಿಕೊಂಡು ಉಳಿದ 9 ಜಿಬಿ ಡೇಟಾವನ್ನು ಉಪಯೋಗಿಸಬಹುದು.
ಮೊದಲಿಗೆ ಈ ಆಫರ್ ಅನ್ನು ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಈ ಆಫರ್ ಘೋಷಿಸಲಾಗಿತ್ತು. ಇದೀಗ ದೇಶಾದ್ಯಂತ ಈ ಸೇವೆ ಲಭಿಸಲಿದೆ. ಈ ಡೇಟಾ ಅವಧಿ ಒಂದು ತಿಂಗಳು ಅಂದರೇ 28 ದಿನ ಮಾತ್ರ ಬಳಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


