ವಾಣಿಜ್ಯ

ಭಾರತದ ಕಾಫಿ ಉತ್ಪಾದನೆಯಲ್ಲಿ ದಾಖಲೆ ೯% ಏರಿಕೆ ಸಾಧ್ಯತೆ

ವಿಶ್ವದ ಆರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರ ೨೦೧೫-೧೬ ರ ವಾರ್ಷಿಕದಲ್ಲಿ ೩೫೫೬೦೦ ಟನ್ ಕಾಫಿ ಬೀಜದ ಉತ್ಪಾದನೆ ಮಾಡಲಿದೆ ಎಂದು

ಭಾರತದ ಕಾಫಿ ಉತ್ಪಾದನೆಯಲ್ಲಿ ದಾಖಲೆ ೯% ಏರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
Published On :

ಮುಂಬೈ: ವಿಶ್ವದ ಆರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರ ೨೦೧೫-೧೬ ರ ವಾರ್ಷಿಕದಲ್ಲಿ ೩೫೫೬೦೦ ಟನ್ ಕಾಫಿ ಬೀಜದ ಉತ್ಪಾದನೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಕಾಫಿ ಉತ್ಪಾದನಾ ಪ್ರದೇಶಗಳಲ್ಲಿ ಮುಂಗಾರು ಮಳೆಯ ಆರಂಭ ಚೆನ್ನಾಗಿದ್ದು ಈ ಉತ್ಪಾದನೆಯಲ್ಲಿ ೯% ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ರಾಜ್ಯದ ಕಾಫಿ ಮಂಡಲಿ ಹೇಳಿಕೆ ನೀಡಿದೆ.

ಈ ಹೆಚ್ಚಿನ ಉತ್ಪಾದನೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ದರದ ಮೇಲೆ ಕಡಿಮೆ ಒತ್ತಡ ಬೀರಲಿದೆ ಎನ್ನಲಾಗಿದೆ. ಸದ್ಯದ ಅತಿ ದೊಡ್ಡ ಕಾಫಿ ಉತ್ಪಾದಕ ದೇಶ ಬ್ರೆಜಿಲ್.

ಭಾರತ ಈ ವಾರ್ಷಿಕದಲ್ಲಿ ೧೧೦೩೦೦ ಟನ್ ಅರೇಬಿಕಾ ಹಾಗು ೨೪೫೩೦೦ ಟನ್ ರೋಬಸ್ಟ ಉತ್ಪಾದಿಸುವ ಸಾಧ್ಯತೆ ಇದೆ ಎಂದು ಮಂಡಲಿ ಸೋಮವಾರ ತಿಳಿಸಿದೆ.

ಭಾರತ ತನ್ನ ಉತ್ಪಾದನೆಯ ಮೂರನೆ ನಾಲ್ಕು ಭಾಗವನ್ನು ರಫ್ತು ಮಾಡುತ್ತದೆ.

ಭಾರತದ ಕಾಫಿ ಇಳುವರಿಗೆ ಇಟಲಿ, ಜರ್ಮನಿ ಮತ್ತು ಬೆಲ್ಜಿಯಮ್ ಗಳಲ್ಲಿ ಹೆಚ್ಚು ಬೇಡಿಕೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.