ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಅಮೆರಿಕದ ತೈಲ ಶುದ್ಧೀಕರಣ ಘಟಕ ಒಪ್ಪಂದ: Donald Trump ಘೋಷಣೆ
ಇದು ಐತಿಹಾಸಿಕ 300 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ — ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡದು ಎಂದು ಟ್ರಂಪ್ ಬರೆದಿದ್ದಾರೆ. ಈ ಯೋಜನೆ ತನ್ನ ಇಂಧನ ನೀತಿಯ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದ್ದು, ಯೋಜನೆಯ ವಿವರಗಳನ್ನು ನೀಡಿಲ್ಲ.

ವಾಷಿಂಗ್ಟನ್: ಭಾರತದ ಇಂಧನ ದಿಗ್ಗಜ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕದಲ್ಲಿ ಅರ್ಧ ಶತಮಾನ ಬಳಿಕ ನಿರ್ಮಿಸುತ್ತಿರುವ ಮೊದಲ ದೊಡ್ಡ ತೈಲ ಶುದ್ಧೀಕರಣ ಘಟಕ ಯೋಜನೆಗೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ತಮ್ಮ Truth Social ವೇದಿಕೆಯ ಮೂಲಕ ಈ ಘೋಷಣೆ ಮಾಡಿದರು. America First Refining ಎಂಬ ಕಂಪನಿ Port of Brownsville, Texas ನಲ್ಲಿ ಹೊಸ ಶುದ್ಧೀಕರಣ ಘಟಕ ನಿರ್ಮಿಸಲಿದೆ ಎಂದು ಅವರು ಹೇಳಿದರು.
ಇದು ಐತಿಹಾಸಿಕ 300 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ - ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡದು ಎಂದು ಟ್ರಂಪ್ ಬರೆದಿದ್ದಾರೆ. ಈ ಯೋಜನೆ ತನ್ನ ಇಂಧನ ನೀತಿಯ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದ್ದು, ಯೋಜನೆಯ ವಿವರಗಳನ್ನು ನೀಡಿಲ್ಲ.
ನಮ್ಮ ಭಾರತದ ಪಾಲುದಾರರಿಗೆ ಮತ್ತು ಅವರ ಅತಿದೊಡ್ಡ ಖಾಸಗಿ ಇಂಧನ ಕಂಪನಿ ರಿಲಯನ್ಸ್‌ಗೆ ಈ ಮಹತ್ವದ ಹೂಡಿಕೆಗಾಗಿ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ. ಆದರೆ ಕಂಪನಿಯ ನಿಖರ ಹೂಡಿಕೆ ವಿವರವನ್ನು ಅವರು ಸ್ಪಷ್ಟಪಡಿಸಲಿಲ್ಲ.
ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಖಾಸಗಿ ಸಂಸ್ಥೆಯಾಗಿದ್ದು, ಜಾಮ್ನಗರ ರಿಫೈನರಿ ವಿಶ್ವದ ಅತಿದೊಡ್ಡ ತೈಲ ಶುದ್ಧೀಕರಣ ಘಟಕವಾಗಿದೆ.
ಅಮೆರಿಕ ಫಸ್ಟ್ ರಿಫೈನಿಂಗ್ ವೆಬ್‌ಸೈಟ್ ಪ್ರಕಾರ, ಈ ಯೋಜನೆ ಎಲಿಮೆಂಟ್ ಫುಯೆಲ್ಸ್ ಸಂಸ್ಥೆಯ ಯೋಜನೆಯಾಗಿದ್ದು, 2024ರಲ್ಲಿ ಬ್ರೌನ್ಸ್‌ವಿಲ್‌ನಲ್ಲಿ 3ರಿಂದ 4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಶುದ್ಧೀಕರಣ ಘಟಕ ನಿರ್ಮಿಸಲು ಮೊದಲ ಬಾರಿ ಘೋಷಿಸಿತ್ತು.
ಈ ಶುದ್ಧೀಕರಣ ಘಟಕ ಗಲ್ಫ್ ಆಫ್ ಮೆಕ್ಸಿಕೊ ಪ್ರದೇಶದಲ್ಲಿ 1970ರ ದಶಕದ ಬಳಿಕ ನಿರ್ಮಾಣವಾಗುವ ಮೊದಲ ರಿಫೈನರಿ ಆಗಲಿದೆ. ಜೊತೆಗೆ, ಶೇಕಡಾ100ರಷ್ಟು ಅಮೆರಿಕದ ಶೇಲ್ ತೈಲವನ್ನು ಸಂಸ್ಕರಿಸಲು ವಿನ್ಯಾಸಗೊಳಿಸಲಾದ ಏಕೈಕ ಘಟಕವಾಗಲಿದೆ ಎಂದು ಕಂಪನಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



