ವಿದೇಶ

'ಯುದ್ಧ ಯಾವಾಗ ಕೊನೆಗೊಳ್ಳಬೇಕೆಂದು ನಾವು ನಿರ್ಧರಿಸುತ್ತೇವೆ, ಅಮೆರಿಕವಲ್ಲ': ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ಪ್ರತಿಕ್ರಿಯೆ

ಯುದ್ಧದ ಅಂತ್ಯವನ್ನು ನಿರ್ಧರಿಸುವವರು ನಾವೇ. ಈ ಪ್ರದೇಶದ ಸಮೀಕರಣಗಳು ಮತ್ತು ಭವಿಷ್ಯದ ಸ್ಥಿತಿ ಈಗ ನಮ್ಮ ಸಶಸ್ತ್ರ ಪಡೆಗಳ ಕೈಯಲ್ಲಿದೆ; ಅಮೆರಿಕನ್ ಪಡೆಗಳು ಯುದ್ಧವನ್ನು ಕೊನೆಗೊಳಿಸಲು ಆಗುವುದಿಲ್ಲ

'ಯುದ್ಧ ಯಾವಾಗ ಕೊನೆಗೊಳ್ಳಬೇಕೆಂದು ನಾವು ನಿರ್ಧರಿಸುತ್ತೇವೆ, ಅಮೆರಿಕವಲ್ಲ': ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ಪ್ರತಿಕ್ರಿಯೆ
ಇಸ್ರೇಲ್-ಇರಾನ್ ಯುದ್ಧ
Published On :

ಟೆಹ್ರಾನ್: ಇರಾನ್ ಜೊತೆಗಿನ ಸಂಘರ್ಷ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ನಂತರ, ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಮೆರಿಕ ಮತ್ತು ಇಸ್ರೇಲ್ ಮೇಲೆ ದಾಳಿ ಮಾಡುವುದನ್ನು ಯಾವಾಗ ನಿಲ್ಲಿಸಬೇಕೆಂದು ಇರಾನ್ ಮಾತ್ರ ನಿರ್ಧರಿಸುತ್ತದೆ ಎಂದು ಹೇಳಿದೆ.

ಇರಾನ್‌ನ ಮಿಲಿಟರಿ ಪಡೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಾವಾಗ ದಾಳಿ ನಿಲ್ಲಿಸಬೇಕು ಎಂಬುದು ನಮ್ಮ ನಿರ್ಧಾರವಾಗಿದೆ. ಈ ಪ್ರದೇಶದ ಭವಿಷ್ಯ ಮತ್ತು ಸಂಘರ್ಷದ ಅಂತ್ಯವು ಈಗ ಅಮೆರಿಕದ ಕೈಯಲ್ಲಿಲ್ಲ, ಇರಾನ್‌ನ ಸಶಸ್ತ್ರ ಪಡೆಗಳ ಕೈಯಲ್ಲಿದೆ ಎಂದಿದೆ.

'ಯುದ್ಧದ ಅಂತ್ಯವನ್ನು ನಿರ್ಧರಿಸುವವರು ನಾವೇ. ಈ ಪ್ರದೇಶದ ಸಮೀಕರಣಗಳು ಮತ್ತು ಭವಿಷ್ಯದ ಸ್ಥಿತಿ ಈಗ ನಮ್ಮ ಸಶಸ್ತ್ರ ಪಡೆಗಳ ಕೈಯಲ್ಲಿದೆ; ಅಮೆರಿಕನ್ ಪಡೆಗಳು ಯುದ್ಧವನ್ನು ಕೊನೆಗೊಳಿಸಲು ಆಗುವುದಿಲ್ಲ' ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಇರಾನ್ ವಿರುದ್ಧದ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಆದರೆ, ಹೊಸ ಕಟ್ಟರ್ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡಿರುವ ಇಸ್ಲಾಮಿಕ್ ಗಣರಾಜ್ಯದಿಂದ ಜಾಗತಿಕ ತೈಲ ಪೂರೈಕೆ ಮೇಲೆ ಅಡ್ಡಿ ಉಂಟಾದರೆ ಈ ಹೋರಾಟದಲ್ಲಿ ಉಲ್ಬಣಗೊಳ್ಳುವ ಸಾಧ್ಯತೆಯೂ ಇದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರ್ಂಪ್ ಹೇಳಿದ್ದಾರೆ.

'ಕೆಲವು ದುಷ್ಟಶಕ್ತಿಗಳನ್ನು ತೊಡೆದುಹಾಕಲು ನಾವು ಮಧ್ಯಪ್ರಾಚ್ಯಕ್ಕೆ ಒಂದು ಸಣ್ಣ ವಿಹಾರವನ್ನು ಕೈಗೊಂಡಿದ್ದೇವೆ. ಮತ್ತು ಅದು ಅಲ್ಪಾವಧಿಯ ವಿಹಾರವಾಗಲಿದೆ ಎಂಬುದನ್ನು ನೀವು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ' ಎಂದು ಟ್ರಂಪ್ ಮಿಯಾಮಿ ಬಳಿಯ ತಮ್ಮ ಗಾಲ್ಫ್ ಕ್ಲಬ್‌ನಲ್ಲಿ ರಿಪಬ್ಲಿಕನ್ ಶಾಸಕರಿಗೆ ತಿಳಿಸಿದರು.

ಇದಾದ ಕೆಲವು ಗಂಟೆಗಳ ನಂತರ, ಅಮೆರಿಕದ ಕಮಾಂಡರ್-ಇನ್-ಚೀಫ್ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ನಲ್ಲಿ, 'ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹರಿವನ್ನು ನಿಲ್ಲಿಸುವ ಯಾವುದೇ ಕ್ರಮ ಕೈಗೊಂಡರೆ, ಅವರು ಇಲ್ಲಿಯವರೆಗೆ ನೋಡಿದ್ದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಅಮೆರಿಕ ಸಂಯುಕ್ತ ಸಂಸ್ಥಾನದಿಂದ ತೊಂದರೆಗೊಳಗಾಗುತ್ತಾರೆ' ಎಂದಿದ್ದಾರೆ.

'ಹೆಚ್ಚುವರಿಯಾಗಿ, ನಾವು ಸುಲಭವಾಗಿ ನಾಶಪಡಿಸಬಹುದಾದ ಗುರಿಗಳನ್ನು ನಾಶಪಡಿಸುತ್ತೇವೆ. ಅದು ಇರಾನ್ ಅನ್ನು ಮತ್ತೆ ಒಂದು ರಾಷ್ಟ್ರವಾಗಿ ನಿರ್ಮಿಸುವುದನ್ನು ಅಸಾಧ್ಯವಾಗಿಸುತ್ತದೆ. ಸಾವು, ಬೆಂಕಿ ಮತ್ತು ಕೋಪವು ಅವರ ಮೇಲೆ ಆಳ್ವಿಕೆ ನಡೆಸುತ್ತದೆ. ಆದರೆ, ಅದು ಸಂಭವಿಸದಿರಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ!. ಇದು ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಚೀನಾ ಮತ್ತು ಹಾರ್ಮುಜ್ ಜಲಸಂಧಿಯನ್ನು ಹೆಚ್ಚಾಗಿ ಬಳಸುವ ಎಲ್ಲ ರಾಷ್ಟ್ರಗಳಿಗೆ ಉಡುಗೊರೆಯಾಗಿದೆ. ಆಶಾದಾಯಕವಾಗಿ, ಇದು ಬಹಳವಾಗಿ ಮೆಚ್ಚುಗೆ ಪಡೆಯುವ ಒಂದು ಸೂಚನೆಯಾಗಿದೆ' ಎಂದು ಅವರು ಹೇಳಿದರು.

ಇರಾನ್‌ನಲ್ಲಿನ ಯುದ್ಧವು ವಿಶ್ವ ಮಾರುಕಟ್ಟೆಗಳಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆಯನ್ನು ಸ್ಥಗಿತಗೊಳಿಸಿದೆ ಮತ್ತು ಅಮೆರಿಕದಾದ್ಯಂತ ಇಂಧನ ಬೆಲೆಗಳು ಏರಿಕೆಯಾಗಿವೆ. ಇರಾನ್ ತನ್ನ ಸರ್ವೋಚ್ಛ ನಾಯಕನನ್ನಾಗಿ ಹತ್ಯೆಯಾದ ಖಮೇನಿ ಅವರ ಪುತ್ರ ಅಯತೊಲ್ಲಾ ಮೊಜ್ತಬಾ ಖಮೇನಿಯನ್ನು ಆಯ್ಕೆ ಮಾಡಿದೆ.

ತೈಲ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, 2022ರಿಂದ ಅಧಿಕ. ಆದರೆ, ಇರಾನ್ ಜೊತೆಗಿನ ಯುದ್ಧವು ಹೆಚ್ಚು ಕಾಲ ನಡೆಯುವುದಿಲ್ಲ ಎಂದು ಅಮೆರಿಕ ಭರವಸೆ ನೀಡಿದ ನಂತರ ಬೆಲೆಗಳು ಕುಸಿದವು ಮತ್ತು ಅಮೆರಿಕದ ಷೇರು ಮಾರುಕಟ್ಟೆ ಏರಿಕೆ ಕಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.