ಟ್ರಂಪ್ ಹತ್ಯೆಗೆ ಸಂಚು: ಇರಾನ್ ಜೊತೆಗೆ ನಂಟು ಹೊಂದಿದ ಪಾಕ್ ವ್ಯಕ್ತಿ ದೋಷಿ ಎಂದ ಅಮೆರಿಕ ನ್ಯಾಯಾಲಯ!
ರಾಷ್ಟ್ರೀಯ ಗಡಿಗಳನ್ನು ಮೀರಿ ಭಯೋತ್ಪಾದನಾ ಕೃತ್ಯದ ಆರೋಪದ ಮೇರೆಗೆ 48 ವರ್ಷದ ಆಸಿಫ್ ರಝಾ ಮರ್ಚೆಂಟ್ ನನ್ನು ದೂಷಿ ಎಂದು ಬ್ಲೂಕ್ಲಿನ್ ಕೋರ್ಟ್ ನ ಫೆಡರಲ್ ಜ್ಯೂರಿ ತೀರ್ಪು ನೀಡಿದರು. ಮಾರ್ಚೆಂಟ್ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಾನೆ.

ನ್ಯೂಯಾರ್ಕ್: 2020 ರಲ್ಲಿ ಹತ್ಯೆಯಾದ ಇರಾನ್ ಕುಡ್ಸ್ ಫೋರ್ಸ್ ಕಮಾಂಡರ್ ಖಾಸೆಮ್ ಸೊಲೈಮಾನಿ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತಿತರ ಅಮೆರಿಕದ ರಾಜಕಾರಣಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಇರಾನ್ ಜೊತೆಗೆ ನಂಟು ಹೊಂದಿರುವ ಪಾಕ್ ವ್ಯಕ್ತಿಗೆ ನ್ಯೂಯಾರ್ಕ್‌ನಲ್ಲಿ ದೋಷಿ ಎಂದು ಘೋಷಿಸಲಾಗಿದೆ.
ರಾಷ್ಟ್ರೀಯ ಗಡಿಗಳನ್ನು ಮೀರಿ ಭಯೋತ್ಪಾದನಾ ಕೃತ್ಯದ ಆರೋಪದ ಮೇರೆಗೆ 48 ವರ್ಷದ ಆಸಿಫ್ ರಝಾ ಮರ್ಚೆಂಟ್ ನನ್ನು ದೂಷಿ ಎಂದು ಬ್ಲೂಕ್ಲಿನ್ ಕೋರ್ಟ್ ನ ಫೆಡರಲ್ ಜ್ಯೂರಿ ತೀರ್ಪು ನೀಡಿದರು. ಮಾರ್ಚೆಂಟ್ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಾನೆ.
ಟ್ರಂಪ್ ಅವರನ್ನು ಕೊಲ್ಲುವ ಸಂಚು ರೂಪಿಸಿ ಮರ್ಚೆಂಟ್ ಅಮೆರಿಕಕ್ಕೆ ಬಂದಿದ್ದ ಎಂದು ಅಮೆರಿಕದ ಅಟಾರ್ನಿ ಜನರಲ್ ಪಮೇಲಾ ಬೊಂಡಿ ಹೇಳಿದರು. ಮರ್ಚೆಂಟ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯ ತರಬೇತಿ ಪಡೆದಿದ್ದ ಅಲ್ಲದೇ, ರಾಜಕೀಯ ನಾಯಕರನ್ನು ಹತ್ಯೆ ಮಾಡಲು ತನನ್ನು IRGC ಕಳುಹಿಸಿರುವುದಾಗಿ 2024 ರಲ್ಲಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ತಿಳಿಸಿದೆ.
ಗುರಿಯನ್ನಾಗಿಸಿದ ರಾಜಕಾರಣಿಗಳಲ್ಲಿ ಟ್ರಂಪ್, ಮಾಜಿ ಅಧ್ಯಕ್ಷ ಜೋಸೆಫ್ ಬೈಡನ್ ಮತ್ತು ವಿಶ್ವಸಂಸ್ಥೆಯ ಯುಎಸ್ ರಾಯಭಾರಿ ನಿಕ್ಕಿ ಹ್ಯಾಲೆ ಕೂಡಾ ಸೇರಿದ್ದರು. ಮರ್ಚೆಂಟ್ 2022 ರ ಕೊನೆಯಲ್ಲಿ ಅಥವಾ 2023 ರ ಆರಂಭದಲ್ಲಿ IRGC ಗಾಗಿ ಕೆಲಸ ಶುರು ಮಾಡಿದರು. ಅವರು ಕೌಂಟರ್‌ಸರ್ವೇಲೆನ್ಸ್ ಸೇರಿದಂತೆ ಮತ್ತಿತರ ಗುಪ್ತಚರ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದು, ನಂತರ 2023 ರಲ್ಲಿ IRGC ನೇಮಕಾತಿಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು.
IRGC ಒಂದು ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆ ಎಂದು ತನಗೆ ತಿಳಿದಿತ್ತು. ಈ ಅವಧಿಯಲ್ಲಿ IRGC ಹ್ಯಾಂಡ್ಲರ್ ಅನ್ನು ಭೇಟಿ ಮಾಡಲು ಪದೇ ಪದೇ ಇರಾನ್‌ಗೆ ಪ್ರಯಾಣಿಸುತ್ತಿದ್ದನೆಂದು ಮರ್ಚೆಂಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
2024 ರಲ್ಲಿ ಮೂರು US ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಯೊಬ್ಬರ ಕೊಲೆಗೆ ವ್ಯವಸ್ಥೆ ಮಾಡಲು ದಾಳಿಕೋರರನ್ನು ನೇಮಿಸುವ ಹೊಸ ಕಾರ್ಯಾಚರಣೆಯೊಂದಿಗೆ ಆತನನ್ನು ಯುನೈಟೆಡ್ ಸ್ಟೇಟ್ಸ್‌ಗೆ ಕಳುಹಿಸಲಾಗಿತ್ತು.
ಟ್ರಂಪ್ ಆದೇಶಿಸಿದ ಯುಎಸ್ ವೈಮಾನಿಕ ದಾಳಿಯಿಂದ 2020 ರ ಜನವರಿಯಲ್ಲಿ ಕೊಲ್ಲಲ್ಪಟ್ಟ ಸೊಲೈಮಾನಿ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಯುಎಸ್ ಸರ್ಕಾರಿ ಅಧಿಕಾರಿ ಅಥವಾ ರಾಜಕಾರಣಿಯನ್ನು ಕೊಲ್ಲಲು ಐಆರ್‌ಜಿಸಿ ತನ್ನನ್ನು ನಿಯೋಜಿಸಿದೆ ಎಂದು ಮರ್ಚೆಂಟ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



