convicted

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆ ನಟನೆ; ಸುಕೇಶ್ ಚಂದ್ರಶೇಖರ್ ಅಪರಾಧಿ ಎಂದ ನ್ಯಾಯಾಲಯ!
ಇದು ನ್ಯಾಯಾಂಗ ಪ್ರಕ್ರಿಯೆಯ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆಗೆ ಮಾಡಿದ "ನೇರ ಅವಮಾನ" ಎಂದು ನ್ಯಾಯಾಲಯ ಹೇಳಿದೆ.

ಟ್ರಂಪ್ ಹತ್ಯೆಗೆ ಸಂಚು: ಇರಾನ್ ಜೊತೆಗೆ ನಂಟು ಹೊಂದಿದ ಪಾಕ್ ವ್ಯಕ್ತಿ ದೋಷಿ ಎಂದ ಅಮೆರಿಕ ನ್ಯಾಯಾಲಯ!
ರಾಷ್ಟ್ರೀಯ ಗಡಿಗಳನ್ನು ಮೀರಿ ಭಯೋತ್ಪಾದನಾ ಕೃತ್ಯದ ಆರೋಪದ ಮೇರೆಗೆ 48 ವರ್ಷದ ಆಸಿಫ್ ರಝಾ ಮರ್ಚೆಂಟ್ ನನ್ನು ದೂಷಿ ಎಂದು ಬ್ಲೂಕ್ಲಿನ್ ಕೋರ್ಟ್ ನ ಫೆಡರಲ್ ಜ್ಯೂರಿ ತೀರ್ಪು ನೀಡಿದರು. ಮಾರ್ಚೆಂಟ್ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಾನೆ.

ತಾಲಿಬಾನ್ ಕ್ರೂರ ಆಡಳಿತ: 13 ವರ್ಷದ ಬಾಲಕನಿಂದ ಕೊಲೆಗಾರನಿಗೆ ಗುಂಡಿಟ್ಟು ಶಿಕ್ಷೆ; 80,000 ಮಂದಿ ಆಫ್ಘನ್ನರು ಘಟನೆಗೆ ಸಾಕ್ಷಿ..!
ಅಬ್ದುಲ್ ರೆಹಮಾನ್, ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದ ಅಪರಾಧಕ್ಕಾಗಿ ಮಂಗಲ್ ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿದೆ.

ಬ್ಯಾಂಕ್ ವಂಚನೆ ಪ್ರಕರಣ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಎಂಟಿವಿ ರೆಡ್ಡಿ, ಶ್ರೀನಿವಾಸ್ ಹಾಗೂ ಮುನಿರಾಜು ನಾಲ್ವರೂ ತಪ್ಪಿತಸ್ಥರು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಬೆಳಗ್ಗೆ ತೀರ್ಪು ನೀಡಿತ್ತು.

ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣಗೆ ಜೈಲು ಶಿಕ್ಷೆ: ಮೈಸೂರು ಕೋರ್ಟ್ ತೀರ್ಪು
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ಸಿ ಕೋರ್ಟ್ ಗುರುವಾರ ಸ್ನೇಹಮಯಿ ಕೃಷ್ಣ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.

ಹಷ್ ಮನಿ ಪ್ರಕರಣ: ಡೊನಾಲ್ಡ್ ಟ್ರಂಪ್ ಅಪರಾಧಿ; ಹೊಸ ದಾಖಲೆ ಬರೆದ ಮಾಜಿ ಅಧ್ಯಕ್ಷ!
ನ್ಯೂಯಾರ್ಕ್ ನ್ಯಾಯಾಲಯದ ನ್ಯಾಯಾಧೀಶರು ಡೊನಾಲ್ಡ್ ಟ್ರಂಪ್ ಅವರನ್ನು ಪೋರ್ನ್ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರೊಂದಿಗೆ ಸಂಬಂಧ ಮರೆಮಾಚಲು ಹಣ ನೀಡಿದ ಪ್ರಕರಣ ಸೇರಿದಂತೆ 34 ಪ್ರಕರಣಗಳಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದಾರೆ.

ಮಾನನಷ್ಟ ಪ್ರಕರಣ: NBA ನಾಯಕಿ ಮೇಧಾ ಪಾಟ್ಕರ್ ದೋಷಿ
ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ವಿರುದ್ಧ ರಾಷ್ಟ್ರ ರಾಜಧಾನಿಯ ಹಾಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ನ್ಯಾಯಾಲಯ ಶುಕ್ರವಾರ ದೋಷಿ ಎಂದು ತೀರ್ಪು ನೀಡಿದೆ.

2013 ರ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಮ್ ಬಾಪು ದೋಷಿ: ಗುಜರಾತ್ ಕೋರ್ಟ್ ತೀರ್ಪು
ಸ್ವ ಘೋಷಿತ ದೇವಮಾನವ ಅಸಾರಾಮ್ ಬಾಪು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಗುಜರಾತ್ ನ ಗಾಂಧಿನಗರ ಕೋರ್ಟ್ ಜ.30 ರಂದು ತೀರ್ಪು ಪ್ರಕಟಿಸಿದೆ.

ಅಕ್ರಮ ರಿವಾಲ್ವರ್ ಪ್ರಕರಣ: ಸೋಮಶೇಖರ ರೆಡ್ಡಿ ದೋಷಿ ಎಂದ ವಿಶೇಷ ನ್ಯಾಯಾಲಯ, ಬಿಡುಗಡೆ
ಪರವಾನಗಿ ನವೀಕರಿಸದೇ ಅಕ್ರಮವಾಗಿ ರಿವಾಲ್ವಾರ್ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರನ್ನು ದೋಷಿ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಆದರೂ, ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಿದೆ.

