ವಿದೇಶ

Pak ಮಾಜಿ ವೇಗಿ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ LeT ಉಗ್ರರು ಭಾಗಿ, Video!

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಿರಿಯ ಸಹೋದರ ಶಾಹಿದ್ ಅಖ್ತರ್ ಅಂತ್ಯಕ್ರಿಯೆ ಇದೀಗ ಪ್ರಪಂಚದಾದ್ಯಂತ ಭದ್ರತಾ ಸಂಸ್ಥೆಗಳು ಹುಬ್ಬೇರಿಸುವಂತೆ ಮಾಡಿದೆ. ಅಂತ್ಯಕ್ರಿಯೆ ಇಸ್ಲಾಮಾಬಾದ್‌ನ H-8 ಸ್ಮಶಾನದಲ್ಲಿ ನಡೆಯಿತು.

Pak ಮಾಜಿ ವೇಗಿ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ LeT ಉಗ್ರರು ಭಾಗಿ, Video!
ಶೋಯೆಬ್ ಅಖ್ತರ್
Published On :

ಇಸ್ಲಾಮಾಬಾದ್: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಿರಿಯ ಸಹೋದರ ಶಾಹಿದ್ ಅಖ್ತರ್ ಅಂತ್ಯಕ್ರಿಯೆ ಇದೀಗ ಪ್ರಪಂಚದಾದ್ಯಂತ ಭದ್ರತಾ ಸಂಸ್ಥೆಗಳು ಹುಬ್ಬೇರಿಸುವಂತೆ ಮಾಡಿದೆ. ಅಂತ್ಯಕ್ರಿಯೆ ಇಸ್ಲಾಮಾಬಾದ್‌ನ H-8 ಸ್ಮಶಾನದಲ್ಲಿ ನಡೆದಿದ್ದು ಇದರಲ್ಲಿ ಕ್ರೀಡೆ ಮತ್ತು ರಾಜಕೀಯ ಜಗತ್ತಿನ ಅನೇಕ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಏತನ್ಮಧ್ಯೆ, ಪಾಕಿಸ್ತಾನದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಮತ್ತು ಅದರ ರಾಜಕೀಯ ಮುಖವಾಣಿ ಪಾಕಿಸ್ತಾನ್ ಸೆಂಟ್ರಲ್ ಮುಸ್ಲಿಂ ಲೀಗ್ (PMML) ನಾಯಕರು ಅಲ್ಲಿ ಕಾಣಿಸಿಕೊಂಡಿರುವುದು ಪಾಕಿಸ್ತಾನ ಕುತಂತ್ರಿ ಬುದ್ದಿಯನ್ನು ಜಗಜ್ಜಾಹೀರು ಮಾಡಿದೆ.

ಈ ಸಂಪೂರ್ಣ ಘಟನೆ ಬಗ್ಗೆ ಅತ್ಯಂತ ಆಘಾತಕಾರಿ ವಿಷಯವೆಂದರೆ ಈ ಉಗ್ರರ ಉಪಸ್ಥಿತಿಯು ರಹಸ್ಯವಾಗಿರಲಿಲ್ಲ. ಭಯೋತ್ಪಾದನೆ ಮತ್ತು ಉಗ್ರಗಾಮಿ ಸಂಘಟನೆಗಳ ಮೇಲ್ವಿಚಾರಣೆ ನಡೆಸುತ್ತಿರುವ ತಜ್ಞರ ಪ್ರಕಾರ, ಲಷ್ಕರ್-ಎ-ತೈಬಾ ಮತ್ತು ಪಿಎಂಎಂಎಲ್‌ನ ಅಧಿಕೃತ ಮಾಧ್ಯಮ ವಿಭಾಗವು ಅಂತ್ಯಕ್ರಿಯೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದೆ.

ಇಸ್ಲಾಮಾಬಾದ್‌ನ ಪಿಎಂಎಂಎಲ್ ಅಧ್ಯಕ್ಷ ಇನಾಮ್ ಉರ್ ರೆಹಮಾನ್ ಕಾಂಬೋಹ್ ಅವರು ಲಷ್ಕರ್-ಎ-ತೈಬಾದೊಂದಿಗೆ ಸಂಬಂಧಿಸಿದ ಹಲವಾರು ಹಿರಿಯ ಸಹಚರರು ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಹಾಜರಿದ್ದರು ಎಂದು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಅವರು ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಲ್ಲದೆ, ಶೋಯೆಬ್ ಅಖ್ತರ್ ಅವರ ಕುಟುಂಬದೊಂದಿಗೆ ನಿಕಟವಾಗಿ ಕಾಣಿಸಿಕೊಂಡರು. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ತಕ್ಷಣ ರಕ್ಷಣಾ ವಿಶ್ಲೇಷಕರು ಮತ್ತು ಕ್ರೀಡಾ ಅಭಿಮಾನಿಗಳಲ್ಲಿ ಚರ್ಚೆಗೆ ನಾಂದಿ ಹಾಡಿವೆ.

ಪಿಎಂಎಂಎಲ್ ವಾಸ್ತವವಾಗಿ ಭಯೋತ್ಪಾದಕ ಹಫೀಜ್ ಸಯೀದ್‌ನ ಮುದ್ದಿನ ಕೂಸು. ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ಭಯೋತ್ಪಾದಕ ಮತ್ತು ಭಾರತ ಸೇರಿದಂತೆ ವಿಶ್ವದ ಅತ್ಯಂತ ಬೇಕಾಗಿರುವ ಭಯೋತ್ಪಾದಕ ಹಫೀಜ್ ಸಯೀದ್ ಮತ್ತು ಅವನ ಸಂಘಟನೆಯಾದ ಜಮಾತ್-ಉದ್-ದವಾ (ಜೆಯುಡಿ) ಮತ್ತು ಲಷ್ಕರ್-ಎ-ತೈಬಾ, ತಾವು ವ್ಯಾಪಕ ನಿರ್ಬಂಧಗಳನ್ನು ಎದುರಿಸುತ್ತಿದ್ದೇವೆ ಎಂದು ಅರಿತುಕೊಂಡಾಗ, ಅವರು ಮುಖ್ಯವಾಹಿನಿಯ ರಾಜಕೀಯಕ್ಕೆ ಪ್ರವೇಶಿಸಲು ಈ ಹೊಸ ಪಕ್ಷವನ್ನು (ಪಿಎಂಎಂಎಲ್) ರಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.