ಹಾರುತ್ತಿದ್ದ ವಿಮಾನದಿಂದ ಜಿಗಿದು ಪೈಲಟ್ ಸಾವು; ತರಬೇತಿನಿರತ ವಿದ್ಯಾರ್ಥಿನಿಯಿಂದ ಸುರಕ್ಷಿತ ಲ್ಯಾಂಡಿಂಗ್!
ಬೆರ್ಟಾಝೊ ತನ್ನ ಹೆಡ್ಸೆಟ್ ಮತ್ತು ಸೀಟ್ಬೆಲ್ಟ್ ತೆಗೆದು, ಬಾಗಿಲು ತೆರೆದು ವಿಮಾನದಿಂದ ಜಿಗಿಯುವ ಮೊದಲು, "ನೀನು ಏನು ಮಾಡಬೇಕೆಂದು ನಿನಗೆ ತಿಳಿದಿದೆ, ಮುಂದುವರಿಸು" ಎಂದು ಹೇಳಿರುವುದಾಗಿ ಅವರ ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಟೊಲೆಡೊ: ಆಕಾಶದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲಿನಿಂದ ಪೈಲಟ್ ಹೊರಗೆ ಹಾರಿ ಸಾವನ್ನಪ್ಪಿದ್ದು, ತಾನು ತರಬೇತಿ ನೀಡುತ್ತಿದ್ದ ವಿಮಾನ ತರಬೇತಿ ಶಾಲೆಯ ವಿದ್ಯಾರ್ಥಿ ಆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾನೆ.
ಮಧ್ಯ ಅರ್ಜೆಂಟೀನಾದ ಟೊಲೆಡೊದಲ್ಲಿ ಶನಿವಾರ ಈ ಆಘಾತಕಾರಿ ಘಟನೆ ನಡೆದಿದ್ದು, ವಿಮಾನ ತರಬೇತುದಾರ ಲಿಯಾಂಡ್ರೊ ಆಂಡ್ರೆಸ್ ಬರ್ಟಾಝೊ(42) ಅವರು ಹಾರುತ್ತಿದ್ದ ವಿಮಾನದಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ಮಂಗಳವಾರ ಪ್ರಕಟವಾದ ದೇಶದ ಸಾರ್ವಜನಿಕ ಅಭಿಯೋಜಕರ ಪ್ರಕಟಣೆ ತಿಳಿಸಿದೆ.
ಸೆಸ್ನಾ 150 ವಿಮಾನದಲ್ಲಿ ರೊಸಾರಿಯೊ ಎಂಬ 22 ವರ್ಷದ ವಿದ್ಯಾರ್ಥಿನಿಯೊಂದಿಗೆ ಬರ್ಟಾಝೊ ಇದ್ದರು ಎಂದು ಸಿಎನ್ಎನ್ ಅಂಗಸಂಸ್ಥೆ ಟಿಎನ್ ವರದಿ ಮಾಡಿದೆ.
ಬೆರ್ಟಾಝೊ ತನ್ನ ಹೆಡ್ಸೆಟ್ ಮತ್ತು ಸೀಟ್ಬೆಲ್ಟ್ ತೆಗೆದು, ಬಾಗಿಲು ತೆರೆದು ವಿಮಾನದಿಂದ ಜಿಗಿಯುವ ಮೊದಲು, "ನೀನು ಏನು ಮಾಡಬೇಕೆಂದು ನಿನಗೆ ತಿಳಿದಿದೆ, ಮುಂದುವರಿಸು" ಎಂದು ಹೇಳಿರುವುದಾಗಿ ಅವರ ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಬೆರ್ಟಾಝೊ ಕೆಲಸ ಮಾಡುತ್ತಿದ್ದ ಫ್ಲೈಯಿಂಗ್ ಪ್ಯಾರಟ್ ಕಾರ್ಡೋಬಾ ಫ್ಲೈಯಿಂಗ್ ಶಾಲೆಯ ನಿರ್ದೇಶಕ ಎಡ್ವರ್ಡೊ ಅಲ್ವಾರೆಜ್, ಪೈಲಟ್ ವಿಮಾನದಿಂದ ಜಿಗಿಯುವ ಬಗ್ಗೆ ನಮಗೆ ಯಾವುದೇ ಸುಳಿವು ಅಥವಾ ಸೂಚನೆ ಸಿಗಲಿಲ್ಲ ಎಂದು ಟಿಎನ್ಗೆ ತಿಳಿಸಿದ್ದಾರೆ.
ಆ ದಿನ ದುರಂತಕ್ಕೂ ಮೂನ್ನ ಆರಂಭದಲ್ಲಿ ಬರ್ಟಾಝೊ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ವಿಮಾನದಲ್ಲಿ ಹೋಗಿದ್ದರು ಎಂದು ಅಲ್ವಾರೆಜ್ ಹೇಳಿದ್ದಾರೆ.
"ವಿಮಾನದಲ್ಲಿ ಮತ್ತೊಬ್ಬ ವ್ಯಕ್ತಿ ಪಕ್ಕದಲ್ಲಿದ್ದಾಗ ಅವರು ದುರಂತ ಸಾವಿನ ಬಗ್ಗೆ ನಿರ್ಧಾರ ತೆಗೆದುಕೊಂಡರು". ಆದರೆ "ಇದರ ಬಗ್ಗೆ ಯೋಚಿಸುವುದು ಅಥವಾ ಅರ್ಥಮಾಡಿಕೊಳ್ಳುವುದು ಅಸಾಧ್ಯ. ಮನುಷ್ಯರ ಮನಸ್ಸು ತುಂಬಾ ಸಂಕೀರ್ಣ" ಎಂದಿದ್ದಾರೆ.
ಬರ್ಟಾಝೊ ಸಾವಿಗೆ ಕಾರಣವಾದ ಘಟನೆಯ ನಿಖರವಾದ ವಿವರಗಳನ್ನು ಈಗ ಪ್ರಾಸಿಕ್ಯೂಟರ್ಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



