ಅಮೆರಿಕ: ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿರುವ ಸುಂಕಗಳ ವಸೂಲಿ ನಾಳೆಯಿಂದ ಬಂದ್
ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ವಿಧಿಸಲಾಗಿದ್ದ ಸುಂಕಗಳಿಗೆ ಸಂಬಂಧಿಸಿದ ಸುಂಕ ಕೋಡ್‌ಗಳನ್ನು ಅಮೆರಿಕಾ ಸಮಯದಂತೆ ನಾಳೆ ಬೆಳಗಿನ ಸಮಯ 12:01ರಿಂದ (ಭಾರತೀಯ ಸಮಯ ಸಂಜೆ 5.30) ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಅಮೆರಿಕದ ಸುಪ್ರೀಂ ಕೋರ್ಟ್ ಅಮಾನ್ಯ ಎಂದು ಘೋಷಿಸಿದ ಕೆಲವು ಆಮದು ಸುಂಕಗಳನ್ನು ನಾಳೆ ಮಂಗಳವಾರ ಬೆಳಗ್ಗೆಯಿಂದ ವಸೂಲು ಮಾಡುವುದನ್ನು ನಿಲ್ಲಿಸಲಾಗುತ್ತದೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ತಿಳಿಸಿದೆ.
ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಅಡಿಯಲ್ಲಿ ವಿಧಿಸಲಾಗಿದ್ದ ಸುಂಕಗಳಿಗೆ ಸಂಬಂಧಿಸಿದ ಸುಂಕ ಕೋಡ್‌ಗಳನ್ನು ಅಮೆರಿಕಾ ಸಮಯದಂತೆ ನಾಳೆ ಬೆಳಗಿನ ಸಮಯ 12:01ರಿಂದ (ಭಾರತೀಯ ಸಮಯ ಸಂಜೆ 5.30) ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಘೋಷಿಸಿರುವ ಸುಂಕವನ್ನು ಸುಪ್ರೀಂ ಕೋರ್ಟ್ ಅಮಾನ್ಯ ಎಂದು ತೀರ್ಪು ನೀಡಿದ ನಂತರ ಇದನ್ನು ಘೋಷಿಸಲಾಗಿದೆ.
ಕಾರ್ಗೋ ಸಿಸ್ಟಮ್ಸ್ ಮೆಸೇಜಿಂಗ್ ಸರ್ವಿಸ್ ಮೂಲಕ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ IEEPA ಆದೇಶಗಳ ಅಡಿಯಲ್ಲಿ ವಿಧಿಸಿದ್ದ ಸುಂಕಗಳ ವಸೂಲಾತಿ ನಿಲ್ಲಿಸಲಾಗುತ್ತದೆ ಎಂದು ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (CBP) ದೃಢಪಡಿಸಿದೆ. ನ್ಯಾಯಾಲಯದ ತೀರ್ಪಿನ ನಂತರವೂ ಕೆಲವು ದಿನಗಳ ಕಾಲ ಸುಂಕಗಳನ್ನು ಏಕೆ ಮುಂದುವರಿಸಿ ವಸೂಲು ಮಾಡಲಾಯಿತು ಎಂಬುದಕ್ಕೆ ಅಮೆರಿಕ ಸರ್ಕಾರ ಯಾವುದೇ ವಿವರಣೆ ನೀಡಿಲ್ಲ.
ಈ ನಡುವೆ, ನ್ಯಾಯಾಲಯ ರದ್ದುಗೊಳಿಸಿದ ಸುಂಕಗಳಿಗೆ ಬದಲಾಗಿ ಪ್ರತ್ಯೇಕ ಕಾನೂನು ಅಧಿಕಾರದ ಅಡಿಯಲ್ಲಿ 15 ಶೇಕಡಾ ಜಾಗತಿಕ ಸುಂಕವನ್ನು ಜಾರಿಗೆ ತರಲು ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಇದಕ್ಕೂ ಮುನ್ನ 10 ಶೇಕಡಾ ಜಾಗತಿಕ ಸುಂಕ ವಿಧಿಸುವುದಾಗಿ ಅವರು ಘೋಷಿಸಿದ್ದರೂ, ಅದಕ್ಕೆ ಸಂಬಂಧಿಸಿದ ಕಾರ್ಯನಿರ್ವಹಣಾ ಆದೇಶ ಇನ್ನೂ ಹೊರಡಿಸಲಾಗಿಲ್ಲ.
IEEPA ಅಡಿಯಲ್ಲಿ ವಿಧಿಸಲಾದ ಸುಂಕಗಳಿಗೆ ಮಾತ್ರ ಈ ಸ್ಥಗಿತ ಅನ್ವಯವಾಗುತ್ತದೆ ಎಂದು ಸಿಬಿಪಿ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಭದ್ರತೆ ಆಧಾರಿತ ಸೆಕ್ಷನ್ 232 ಹಾಗೂ ಅನ್ಯಾಯ ವಾಣಿಜ್ಯ ಕ್ರಮಗಳಿಗೆ ಸಂಬಂಧಿಸಿದ ಸೆಕ್ಷನ್ 301 ಅಡಿಯಲ್ಲಿ ಇರುವ ಇತರೆ ಸುಂಕಗಳಿಗೆ ಇದು ಅನ್ವಯಿಸುವುದಿಲ್ಲ.
6–3 ಬಹುಮತ ತೀರ್ಪಿನಲ್ಲಿ, ತುರ್ತು ಆರ್ಥಿಕ ಅಧಿಕಾರಗಳನ್ನು ಬಳಸಿಕೊಂಡು ಸುಂಕ ವಿಧಿಸುವ ಕ್ರಮವು ಯುಎಸ್ ಕಾಂಗ್ರೆಸ್ ನೀಡಿದ ಅಧಿಕಾರ ಮೀರಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಡೊನಾಲ್ಡ್ ಟ್ರಂಪ್ ನೇಮಿಸಿದ್ದ ಇಬ್ಬರು ನ್ಯಾಯಮೂರ್ತಿಗಳು ಕೂಡ ಬಹುಮತ ತೀರ್ಪಿಗೆ ಬೆಂಬಲ ನೀಡಿದ್ದು, ಅವರ ಎರಡನೇ ಅವಧಿಯ ಪ್ರಮುಖ ನೀತಿಗೆ ಇದು ಮೊದಲ ಹಿನ್ನಡೆಯಾಗಿದೆ.
ಮುಂದಿನ ಮಾರ್ಗಸೂಚಿಗಳನ್ನು ಆಮದುದಾರರು ಮತ್ತು ವಾಣಿಜ್ಯ ವಲಯಕ್ಕೆ ಅಗತ್ಯವಿದ್ದಂತೆ ಹೆಚ್ಚುವರಿ ಸೂಚನೆಗಳ ಮೂಲಕ ನೀಡಲಾಗುತ್ತದೆ ಎಂದು ಸಿಬಿಪಿ ತಿಳಿಸಿದೆ.

ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




