ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಹಿಮಪಾತ: ಪರ್ವತಾರೋಹಣ ದಿಗ್ಗಜ 'Nims' Purja ದುರಂತ ಅಂತ್ಯ; ಕೊನೆಯ ಕ್ಷಣದ Video ವೈರಲ್
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಬ್ರಾಡ್ ಪೀಕ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪರ್ವತಾರೋಹಣ ವೇಳೆ ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ ನಿರ್ಮಲ್ ಪುರ್ಜಾ ಸಾವನ್ನಪ್ಪಿದ್ದಾರೆ..

ಕಠ್ಮಂಡು: ವಿಶ್ವದ ಖ್ಯಾತ ಪರ್ವತಾರೋಹಕ, ನೇಪಾಳದ ನಿರ್ಮಲ್ ಪುರ್ಜಾ (Nims' Purja) ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಬ್ರಾಡ್ ಪೀಕ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪರ್ವತಾರೋಹಣ ವೇಳೆ ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ ನಿರ್ಮಲ್ ಪುರ್ಜಾ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಮೂಲಗಳ ಪ್ರಕಾರ 43 ವರ್ಷದ ನಿರ್ಮಲ್ ಪುರ್ಜಾ ಅವರು 10 ಮಂದಿ ಪರ್ವತಾರೋಹಕರ ತಂಡದ ಭಾಗವಾಗಿದ್ದರು. ಹಿಮಕುಸಿತದಲ್ಲಿ ಮೃತಪಟ್ಟವರ ಪೈಕಿ ನೇಪಾಳದ ಪರ್ವತಾರೋಹಕ ಸೇರಿದಂತೆ ಮೂವರ ಮೃತದೇಹಗಳನ್ನು ಈಗಾಗಲೇ ಗುರುತಿಸಲಾಗಿದೆ. ಪರ್ವತದಲ್ಲಿ ಇನ್ನೂ ಆರು ಮೃತದೇಹಗಳು ಪತ್ತೆಯಾಗಿವೆ ಎಂದು ನೇಪಾಳ ಪರ್ವತಾರೋಹಣ ಸಂಘದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುರ್ಜಾ ಅವರ ಸಾವನ್ನು Elite Expedition ಸಂಸ್ಥೆಯು ಶನಿವಾರ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿರುವ ಹೇಳಿಕೆಯ ಮೂಲಕ ದೃಢಪಡಿಸಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
8,051 ಮೀಟರ್ ಎತ್ತರದ ಅಪಾಯಕಾರಿ ಶಿಖರ
ಕಾರಕೋರಂ ಪರ್ವತಶ್ರೇಣಿಯಲ್ಲಿರುವ ಬ್ರಾಡ್ ಪೀಕ್ 8,051 ಮೀಟರ್ ಎತ್ತರ ಹೊಂದಿದ್ದು, ಕೆ2 ಪರ್ವತದ ಸಮೀಪದಲ್ಲಿದೆ. ಇದು ವಿಶ್ವದ 12ನೇ ಅತಿ ಎತ್ತರದ ಪರ್ವತವಾಗಿದ್ದು, ಅತ್ಯಂತ ಕಠಿಣ ಹಾಗೂ ಅಪಾಯಕಾರಿ ಶಿಖರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಇಲ್ಲಿ ಗುರುವಾರ ಸುಮಾರು 7,000 ಮೀಟರ್ ಎತ್ತರದಲ್ಲಿ ಭೀಕರ ಹಿಮಕುಸಿತ ಸಂಭವಿಸಿತ್ತು. ಶಿಖರ ಏರಲು ಮುಂದಾಗಿದ್ದ 10 ಮಂದಿ ಪರ್ವತಾರೋಹಕರ ತಂಡವನ್ನು ಹಿಮಕುಸಿತ ಕೊಚ್ಚಿಕೊಂಡು ಹೋಗಿತ್ತು ಎಂದು ಪಾಕಿಸ್ತಾನದ ಆಲ್ಪೈನ್ ಕ್ಲಬ್ (ACP) ತಿಳಿಸಿದೆ.
ವಿವಿಧ ದೇಶಗಳ 10 ಪರ್ವತಾರೋಹಕರು ನಾಪತ್ತೆ
ಹಿಮಕುಸಿತದ ಬಳಿಕ ಗುರುವಾರ ಬೆಳಗ್ಗೆ ಸುಮಾರು 9 ಗಂಟೆಗೆ 10 ಮಂದಿ ಪರ್ವತಾರೋಹಕರು ನಾಪತ್ತೆಯಾಗಿದ್ದರು. ತಂಡದಲ್ಲಿ ನೇಪಾಳದ ಆರು ಮಂದಿ, ಪಾಕಿಸ್ತಾನದ ಒಬ್ಬರು, ಒಮಾನ್‌ನ ಒಬ್ಬರು, ಅಮೆರಿಕದ ಒಬ್ಬರು ಹಾಗೂ ಚೀನಾದ ಒಬ್ಬರು ಇದ್ದರು ಎಂದು ವರದಿಯಾಗಿದೆ.
ವಿಶ್ವದ ಅತ್ಯಂತ ಕಠಿಣ ಪರ್ವತಾರೋಹಣ ಸಾಹಸಗಳಿಗೆ ಹೆಸರುವಾಸಿಯಾಗಿದ್ದ ನಿರ್ಮಲ್ ಪುರ್ಜಾ ಅವರ ಅಕಾಲಿಕ ನಿಧನ ಪರ್ವತಾರೋಹಣ ಕ್ಷೇತ್ರಕ್ಕೆ ಭಾರೀ ನಷ್ಟ ಉಂಟುಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



