ವಿದೇಶ

'Kohinoor Diamond' ಭಾರತಕ್ಕೆ ಹಿಂತಿರುಗಿಸಿ: ಕಿಂಗ್ ಚಾರ್ಲ್ಸ್ III ಗೆ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಒತ್ತಾಯ

ಇತಿಹಾಸದ ಅನ್ಯಾಯಗಳನ್ನು ಸರಿಪಡಿಸುವ ಸಮಯ ಬಂದಿದೆ. ಬ್ರಿಟಿಷರ ಕಾಲದಲ್ಲಿ ಭಾರತದಿಂದ ತೆಗೆದುಕೊಂಡು ಹೋದ ಕೋಹಿನೂರ್ ವಜ್ರವು ಇಂದು ಬ್ರಿಟಿಷ್ ರಾಜಮನೆತನದ ಆಭರಣಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಅದನ್ನು ಭಾರತಕ್ಕೆ ಹಿಂತಿರುಗಿಸಬೇಕು.

'Kohinoor Diamond' ಭಾರತಕ್ಕೆ ಹಿಂತಿರುಗಿಸಿ: ಕಿಂಗ್ ಚಾರ್ಲ್ಸ್ III ಗೆ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಒತ್ತಾಯ
ಸಾಂದರ್ಭಿಕ ಚಿತ್ರ
Published On :

ನ್ಯೂಯಾರ್ಕ್‌: ಕೊಹಿನೂರು ವಜ್ರವನ್ನು ಭಾರತಕ್ಕೆ ಹಿಂತಿರುಗಿಸುವಂತ ‘ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್‌'ಗೆ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರು ಒತ್ತಾಯಿಸಿದ್ದಾರೆ.

9/11 ಉಗ್ರ ದಾಳಿಯ ಸಂತ್ರಸ್ತರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಮ್ದಾನಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಇತಿಹಾಸದ ಅನ್ಯಾಯಗಳನ್ನು ಸರಿಪಡಿಸುವ ಸಮಯ ಬಂದಿದೆ. ಬ್ರಿಟಿಷರ ಕಾಲದಲ್ಲಿ ಭಾರತದಿಂದ ತೆಗೆದುಕೊಂಡು ಹೋದ ಕೋಹಿನೂರ್ ವಜ್ರವು ಇಂದು ಬ್ರಿಟಿಷ್ ರಾಜಮನೆತನದ ಆಭರಣಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಅದನ್ನು ಭಾರತಕ್ಕೆ ಹಿಂತಿರುಗಿಸಬೇಕು. ಬ್ರಿಟನ್‌ ದೊರೆ ಮೂರನೇ ಚಾರ್ಲ್ಸ್‌ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕರೆ, ಈ ಬಗ್ಗೆ ಮಾತನಾಡುತ್ತೇನೆಂದು ಹೇಳಿದರು.

ಕೋಹಿನೂರ್ ವಜ್ರವು ಮೂಲತಃ ಭಾರತದದ್ದಾಗಿದ್ದು, ಬ್ರಿಟಿಷ್ ಆಡಳಿತದ ಕಾಲದಲ್ಲಿ ಅದನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋಗಲಾಗಿತ್ತು ಎಂದು ಇತಿಹಾಸ ಹೇಳುತ್ತದೆ.

ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪತ್ತಿನ ಹಿಂತಿರುಗಿಸುಂತೆ ಆಗ್ರಹಿಸುತ್ತಿವೆ.

ಭಾರತ ಸರ್ಕಾರ ಮತ್ತು ಹಲವು ಇತಿಹಾಸಕಾರರು ಕೋಹಿನೂರ್ ವಜ್ರವನ್ನು ಮರಳಿ ನೀಡುವಂತೆ ಬ್ರಿಟನ್‌ಗೆ ಹಲವು ಬಾರಿ ಮನವಿ ಮಾಡಿದೆ. ಆದರೆ, ಬ್ರಿಟನ್ ಸರ್ಕಾರ ಇದನ್ನು ಕಾನೂನುಬದ್ಧವಾಗಿ ಪಡೆದದ್ದು ಎಂದು ಹೇಳಿ ನಿರಾಕರಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಮ್ದಾನಿ ಅವರ ಈ ಹೇಳಿಕೆ ಮತ್ತೆ ಈ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.