ವಿದೇಶ

ಟ್ರಂಪ್ ಆಡಳಿತದಲ್ಲಿ ಮತ್ತೊಂದು ವಿಕೆಟ್ ಪತನ?: FBI ಮುಖ್ಯಸ್ಥ ಕಾಶ್ ಪಟೇಲ್ ವಜಾ ಸಾಧ್ಯತೆ

ಪೊಲಿಟಿಕೊ ವರದಿ ಪ್ರಕಾರ, ಅಮೆರಿಕದಲ್ಲಿ ಹೆಚ್ಚುತ್ತಿರುವ ಆಂತರಿಕ ಕಳವಳಗಳ ನಡುವೆ ಕಾಶ್ ಪಟೇಲ್ ಅವರ ಭವಿಷ್ಯದ ಬಗ್ಗೆ ಶ್ವೇತಭವನದಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಟ್ರಂಪ್ ಆಡಳಿತದಲ್ಲಿ ಮತ್ತೊಂದು ವಿಕೆಟ್ ಪತನ?: FBI ಮುಖ್ಯಸ್ಥ ಕಾಶ್ ಪಟೇಲ್ ವಜಾ ಸಾಧ್ಯತೆ
ಕಾಶ್ ಪಟೇಲ್
Published On :

ವಾಷಿಂಗ್ಟನ್: ತಮ್ಮ ಸ್ಥಾನದ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳ ನಡುವೆ, ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್‌ಬಿಐ) ನಿರ್ದೇಶಕ ಕಾಶ್ ಪಟೇಲ್ ಅವರು ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪುಟದಿಂದ ಹೊರಬರುತ್ತಿರುವ ಮತ್ತೊಬ್ಬ ಉನ್ನತ ಅಧಿಕಾರಿಯಾಗಬಹುದು ಎಂದು ಪೊಲಿಟಿಕೊ ವರದಿ ತಿಳಿಸಿದೆ.

ಪೊಲಿಟಿಕೊ ವರದಿ ಪ್ರಕಾರ, ಅಮೆರಿಕದಲ್ಲಿ ಹೆಚ್ಚುತ್ತಿರುವ ಆಂತರಿಕ ಕಳವಳಗಳ ನಡುವೆ ಕಾಶ್ ಪಟೇಲ್ ಅವರ ಭವಿಷ್ಯದ ಬಗ್ಗೆ ಶ್ವೇತಭವನದಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಡೊನಾಲ್ಡ್ ಟ್ರಂಪ್ ಅವರ ಅನುಮೋದನೆಯೊಂದಿಗೆ ಅಮೆರಿಕ ನೌಕಾಪಡೆಯ ಕಾರ್ಯದರ್ಶಿಯನ್ನು ತೆಗೆದುಹಾಕಿದ ನಂತರ ಈಗ ಕಾಶ್ ಪಟೇಲ್ ಅವರನ್ನು ಸಹ ಸಂಪುಟದಿಂದ ತೆಗೆದು ಹಾಕಬಹುದು ಎಂಬ ಬಗ್ಗೆ ಈ ವಾರ ಊಹಾಪೋಹಗಳು ತೀವ್ರಗೊಂಡಿವೆ.

ಪೊಲಿಟಿಕೊ ಪ್ರಕಾರ, ಪಟೇಲ್ ಅವರನ್ನು ಮುಂದಿನ ಪದಚ್ಯುತಿಗೆ ಆಯ್ಕೆ ಮಾಡಬಹುದು ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಶ್ ಪಟೇಲ್ ಅವರ ನಡವಳಿಕೆಯಿಂದಾಗಿ ಎಫ್‌ಬಿಐ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬರುತ್ತಿದೆ ಎಂದು ಶ್ವೇತಭವನದ ಕೆಲವು ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುವುದು ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವರ ಮೇಲಿರುವ ಇತರ ಪ್ರಮುಖ ಆರೋಪಗಳಾಗಿವೆ. ಹೀಗಾಗಿ ಅವರನ್ನು ವಜಾಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.