ನೀವೆಲ್ಲ ಗಲಾಟೆ ಮಾಡೋಕ್ ಬಂದಿದ್ದೀರಾ? ಶ್ರೇಯಸ್ ಪಟೇಲ್ ಬೆಂಬಲಿಗರ ವಿರುದ್ಧ ಸಚಿವ ಶಿವಲಿಂಗೇಗೌಡ ಆಕ್ರೋಶ
ನೀವೆಲ್ಲ ಇಲ್ಲಿಗೆ ಗಲಾಟೆ ಮಾಡಲು ಬಂದಿದ್ದೀರಾ? ನಾನು ಇಂತಹದ್ದನ್ನು ತುಂಬಾ ನೋಡಿದ್ದೀನಿ ಸುಮ್ಮನೆ ಕುಳಿತುಕೊಳ್ಳಿ ಎಂದು ಸಿಟ್ಟನ್ನು ಹೊರಹಾಕಿದ್ದಾರೆ.

ಹಾಸನ: ಸಂಸದ ಶ್ರೇಯಸ್ ಪಟೇಲ್ ಅವರ ಬೆಂಬಲಿಗರು ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಗಲಾಟೆ ಮಾಡಿದ್ದಕ್ಕೆ ಸಚಿವ ಶಿವಲಿಂಗೇಗೌಡ ಅವರು ಗರಂ ಆಗಿದ್ದಾರೆ.
ಗಲಾಟೆಯಿಂದಾಗಿ ಕೆಲಕಾಲ ಸಭೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮದಲ್ಲಿ ಸಂಸದರ ಹೆಸರು ಪ್ರಸ್ತಾಪಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಂಬಲಿಗರ ಮೇಲೆ ಸಚಿವರು ಗರಂ ಆಗಿದ್ದಾರೆ. ನೀವೆಲ್ಲ ಇಲ್ಲಿಗೆ ಗಲಾಟೆ ಮಾಡಲು ಬಂದಿದ್ದೀರಾ? ನಾನು ಇಂತಹದ್ದನ್ನು ತುಂಬಾ ನೋಡಿದ್ದೀನಿ ಸುಮ್ಮನೆ ಕುಳಿತುಕೊಳ್ಳಿ ಎಂದು ಸಿಟ್ಟನ್ನು ಹೊರಹಾಕಿದ್ದಾರೆ.
ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷ ಜಿ.ಬಿ. ಶಶಿಧರ್ ಅವರ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರ ಹೆಸರನ್ನು ಹೇಳದಿರುವುದಕ್ಕೆ ಅವರ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ, ಸಂಸದರು ಕಾರ್ಯಕ್ರಮಕ್ಕೆ ಬರುವವರೆಗೂ ಉದ್ಘಾಟನೆ ಮಾಡದಂತೆ ಪಟ್ಟುಹಿಡಿದು ಕಾರ್ಯಕರ್ತರು ಗಲಾಟೆ ಹಾಗೂ ಅಡ್ಡಿಪಡಿಸಲು ಮುಂದಾದರು.
ಕಾರ್ಯಕರ್ತರ ಈ ವರ್ತನೆಯಿಂದ ಸಿಟ್ಟಿಗೆದ್ದ ಸಚಿವ ಕೆ.ಎಂ. ಶಿವಲಿಂಗೇಗೌಡರು ಗರಂ ಆಗಿ,ನೀವೆಲ್ಲ ಇಲ್ಲಿಗೆ ಗಲಾಟೆ ಮಾಡಲು ಬಂದಿದ್ದೀರಾ? ನಾನು ಇಂತಹದ್ದನ್ನೆಲ್ಲಾ ತುಂಬಾ ನೋಡಿದ್ದೀನಿ, ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿದರು. ಬಳಿಕ ಸಮಾಧಾನಪಡಿಸಲು ಯತ್ನಿಸುತ್ತಾ, ನೀವೇ ಹೋಗಿ ಶ್ರೇಯಸ್ ಪಟೇಲ್ ಅವರನ್ನು ಕರೆದು ತನ್ನಿ, ಆಮೇಲೆ ಕಾರ್ಯಕ್ರಮ ಉದ್ಘಾಟನೆ ಮಾಡೋಣ ಎಂದು ಹೇಳಿದರು.
ನಂತರ ಕಾರ್ಯಕರ್ತರ ಅಸಮಾಧಾನದ ಮಧ್ಯೆಯೂ ಸಚಿವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಆದರೆ, ಉದ್ಘಾಟನೆಯ ಬಳಿಕವೂ ಕೆಲಕಾಲ ಗಲಾಟೆ ಹಾಗೂ ಮಾತಿನ ಚಕಮಕಿ ಮುಂದುವರಿದ ಕಾರಣ ಕಾರ್ಯಕ್ರಮವನ್ನು ಕೆಲಕಾಲ ಸ್ಥಗಿತಗೊಳಿಸಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



