ವಿದೇಶ

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

X (ಹಿಂದಿನ ಟ್ವಿಟ್ಟರ್) ನಲ್ಲಿ ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಪ್ರಕಾರ, ಆ ಟೆಕ್ ಉದ್ಯೋಗಿ ತಾನು ಕಳೆದುಕೊಳ್ಳುವ ಸಮಯವನ್ನು ಬೆಳಿಗ್ಗೆ ಬೇಗ ಕೆಲಸ ಆರಂಭಿಸುವುದರಿಂದ ಅಥವಾ ರಾತ್ರಿ ಕೆಲಸ ಮಾಡುವುದರಿಂದ ಸರಿದೂಗಿಸುವುದಾಗಿ ವಿವರಿಸಿದ್ದಾರೆ.

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!
ಸಾಂಕೇತಿಕ ಚಿತ್ರ — online desk
Published On :

ಏಳು ತಿಂಗಳ ಮಗು ನೋಡಿಕೊಳ್ಳಲು ಅನುಕೂಲಕರ ಕೆಲಸದ ಸಮಯ ಬೇಕೆಂದು ಒಬ್ಬ ಭಾರತೀಯ ನೌಕರ ವಿನಂತಿ ಮಾಡಿದಾಗ, ಅಮೆರಿಕನ್ ಮ್ಯಾನೇಜರ್ ನೀಡಿದ ಪ್ರತಿಕ್ರಿಯೆ ಆನ್‌ಲೈನ್ ಬಳಕೆದಾರರಿಂದ ಪ್ರಶಂಸೆಗೆ ಪಾತ್ರವಾಗಿದೆ.

X (ಹಿಂದಿನ ಟ್ವಿಟ್ಟರ್) ನಲ್ಲಿ ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಪ್ರಕಾರ, ಆ ಟೆಕ್ ಉದ್ಯೋಗಿ ತಾನು ಕಳೆದುಕೊಳ್ಳುವ ಸಮಯವನ್ನು ಬೆಳಿಗ್ಗೆ ಬೇಗ ಕೆಲಸ ಆರಂಭಿಸುವುದರಿಂದ ಅಥವಾ ರಾತ್ರಿ ಕೆಲಸ ಮಾಡುವುದರಿಂದ ಸರಿದೂಗಿಸುವುದಾಗಿ ವಿವರಿಸಿದ್ದಾರೆ. ನವಜಾತ ಮಗುವನ್ನು ನೋಡಿಕೊಳ್ಳುತ್ತಿರುವವರು ಸಂಜೆ 4:30 (ಈಸ್ಟರ್ನ್ ಟೈಮ್)ಕ್ಕೆ ತೆರಳುವರು, ಆ ನಂತರ ತಾನು ಸಂಜೆ 7:30ರವರೆಗೆ ಕಚೇರಿಯಿಂದ ಹೊರಗಿದ್ದು ಮಗುವಿನ ಆರೈಕೆಯಲ್ಲಿ ತೊಡಗಿರಬೇಕಾಗುತ್ತದೆ ಎಂದು ನೌಕರ ಮ್ಯಾನೇಜರ್‌ಗೆ ತಿಳಿಸಿದ್ದಾರೆ.

"ನನ್ನ ವೇಳಾಪಟ್ಟಿಗೆ ಅನುಗುಣವಾಗಿ, ನಾನು ಈ ಸಮಯವನ್ನು ರಾತ್ರಿ ಕೆಲಸ ಮಾಡುವುದರಿಂದ ಅಥವಾ ದಿನವನ್ನು ಬೇಗ ಆರಂಭಿಸುವುದರಿಂದ ಪೂರೈಸುವ ಯೋಜನೆ ಹೊಂದಿದ್ದೇನೆ. ಈ ಬದಲಾವಣೆ ನಿಮಗೂ ಮತ್ತು ತಂಡಕ್ಕೂ ಅನುಕೂಲವಾಗುತ್ತದೆ ಎಂದು ಭಾವಿಸುತ್ತೇನೆ," ಎಂದು ನೌಕರ ಮೇಲ್ ನಲ್ಲಿ ಬರೆದಿದ್ದರು.

ಮ್ಯಾನೇಜರ್ ಸಹಾನುಭೂತಿಯಿಂದ ಪ್ರತಿಕ್ರಿಯಿಸಿ, ಮಗು ನ್ಯಾನಿಯ ಜೊತೆಗಿನ ಸಮಯವನ್ನು ಆನಂದಿಸಲಿ ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲಿ ಎಂದು ಆಶಿಸಿದ್ದಾರೆ. ಜೊತೆಗೆ, ಯಾವುದೇ ಗೊಂದಲಗಳು ಉಂಟಾಗದಂತೆ ಅಗತ್ಯವಾದ ಕೆಲಸದ ಗಂಟೆಗಳನ್ನು ಕ್ಯಾಲೆಂಡರ್‌ನಲ್ಲಿ ಬ್ಲಾಕ್ ಮಾಡುವುದಾಗಿ ಸೂಚಿಸಿದ್ದಾರೆ.

"ಏಳು ತಿಂಗಳ ಮಗುವಿನ ಆರೈಕೆಗೆ ದಿನವೂ ಮೂರು ಗಂಟೆಗಳ ಕಾಲ OOO (ಔಟ್ ಆಫ್ ಆಫೀಸ್) ಆಗಿರಲು ಒಬ್ಬ ಭಾರತೀಯ ನೌಕರ ತನ್ನ ಅಮೆರಿಕನ್ ಮ್ಯಾನೇಜರ್‌ಗೆ ವಿನಂತಿಸಿದ್ದಾರೆ," ಎಂದು ಸ್ವಪ್ನ ಕುಮಾರ್ ಪಾಂಡಾ ಹಂಚಿದ ಪೋಸ್ಟ್‌ನ ಕ್ಯಾಪ್ಷನ್ ಹೇಳುತ್ತದೆ. "ಆತನ ಮ್ಯಾನೇಜರ್‌ನ ಉತ್ತರವನ್ನು ನೋಡಿ. ಇಂತಹುದು ಭಾರತೀಯ ಕೆಲಸದ ಸ್ಥಳಗಳಲ್ಲಿ ಏಕೆ ಅಸಾಧ್ಯ?" ಎಂದು ಅವರು ಪ್ರಶ್ನಿಸಿದ್ದಾರೆ.

ಈ ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದ್ದು, 4,67,300 ಕ್ಕೂ ಹೆಚ್ಚು ವೀಕ್ಷಣೆಗಳು, ಸುಮಾರು 5,000 ಲೈಕ್‌ಗಳು ಬಂದಿವೆ. ಇದರಿಂದ ನಿರ್ವಹಣಾ ಶೈಲಿ ಮತ್ತು ಕೆಲಸ-ಜೀವನ ಸಮತೋಲನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿದೆ. ಅನೇಕರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ನನ್ನ ಅನಿಸಿಕೆ… ಇದು ದೇಶದ ಬಗ್ಗೆ ಇರುವ ವಿಷಯವಲ್ಲ ಕೆಲಸವನ್ನು ಹೇಗೆ ರೂಪಿಸಲಾಗಿದೆ ಮತ್ತು ಜನರು ಅದನ್ನು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ಇರುವ ವಿಷಯ,” ಎಂದು ಒಬ್ಬ ಬಳಕೆದಾರ ಕಾಮೆಂಟ್‌ನಲ್ಲಿ ಬರೆದ್ದಾರೆ“ ಭಾರತದ ಅನೇಕ ಕಡೆಗಳಲ್ಲಿ ಯಾವಾಗಲೂ ಲಭ್ಯವಾಗಿರುವುದನ್ನೇ ಇನ್ನೂ ಬದ್ಧತೆ ಎಂದು ನೋಡಲಾಗುತ್ತದೆ.

ಹೀಗಾಗಿ ಹೊಂದಾಣಿಕೆ ಇದ್ದರೂ, ಅದು ಸಾಮಾನ್ಯವಾದದ್ದಿಗಿಂತ ಅಪವಾದದಂತೆ ಅನಿಸುತ್ತದೆ.” ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು, “ಇದು ಎಂದಿಗೂ ಬದಲಾಗುವುದಿಲ್ಲ. ಒಂದು ವಾರ ಹಿಂದೆ ನಾನು ನನ್ನ ಎಲ್ಲಾ ಕೆಲಸವನ್ನು ಸಮಯಕ್ಕಿಂತ ಮುಂಚೆಯೇ ಮುಗಿಸಿದ್ದೆ. ನನ್ನ ಲಾಗ್‌ಔಟ್ ಸಮಯ ರಾತ್ರಿ 8, ಆದರೆ ನನಗೆ 8:30 ಕ್ಕೆ ರೈಲು ಇದ್ದುದರಿಂದ 7:40 ಕ್ಕೆ ಹೊರಡಲು ವಿನಂತಿಸಿದೆ. ಬೆಂಗಳೂರು ಟ್ರಾಫಿಕ್ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ನನ್ನ ಮ್ಯಾನೇಜರ್‌ಗೆ ಮುಂಚಿತವಾಗಿ ಜವಾಬ್ದಾರಿಯಿಂದ ತಿಳಿಸಿದ್ದರೂ, ಇನ್ನೂ ಬೈಯಿಸಿಕೊಂಡೆ,” ಎಂದು ಬರೆದರು. “ನಮ್ಮ ಭಾರತದಲ್ಲೂ ಉತ್ತಮ ಕೆಲಸದ ಸಂಸ್ಕೃತಿಗಳು ಇವೆ. ಭಾರತದ ಐಟಿ ಕ್ಷೇತ್ರ ಬಹಳ ದೊಡ್ಡದು – ಕೆಲವೇ ಘಟನೆಗಳನ್ನು ಆಧರಿಸಿ ಅದನ್ನು ಸಾಮಾನ್ಯೀಕರಿಸಬಾರದು,” ಎಂದು ಮೂರನೇ ಬಳಕೆದಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.