ಪ್ರೇಯಸಿ ಸಬಾ ಆಜಾದ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ಹೃತಿಕ್ ರೋಷನ್; ಮಾಜಿ ಪತ್ನಿ ಸುಸಾನೆ ಖಾನ್ ಕ್ಯೂಟ್ ಪ್ರತಿಕ್ರಿಯೆ
ಸಬಾ ಮತ್ತು ಹೃತಿಕ್ 2022ರಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದರು.
ಹೃತಿಕ್ ರೋಷನ್ ತಮ್ಮ ಗೆಳತಿ ಸಬಾ ಆಜಾದ್ ಅವರೊಂದಿಗೆ ಒಟ್ಟಿಗಿರುವ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ, ತಾವು ಒಟ್ಟಾಗಿ ಕಳೆದ ಐದು ವರ್ಷಗಳ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಹೃತಿಕ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
'ಇದು ನಮ್ಮ ಹುಟ್ಟುಹಬ್ಬ. 5ನೇ ವರ್ಷದ ಸಂಭ್ರಮದ ಶುಭಾಶಯಗಳು ನನ್ನ ಪ್ರೀತಿಯೇ' ಎಂದು ಬರೆದುಕೊಂಡಿದ್ದಾರೆ. 'ಕ್ರಿಶ್' ನಟ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹಂಚಿಕೊಂಡ ತಕ್ಷಣವೇ ಅದು ನೆಟ್ಟಿಗರ ಗಮನ ಸೆಳೆದಿದ್ದು, ಮೆಚ್ಚುಗೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದಿದೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸುಸಾನೆ, 'ತುಂಬಾ ಮುದ್ದಾಗಿದೆ, ವಾರ್ಷಿಕೋತ್ಸವದ ಶುಭಾಶಯಗಳು' ಎಂದು ಬರೆದಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಹೃತಿಕ್ ರೋಷನ್ ಅವರ ಸೋದರಸಂಬಂಧಿ ಇಶಾನ್ ರೋಷನ್ ಅವರ ವಿವಾಹ ಸಮಾರಂಭವು ಮುಂಬೈನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೃತಿಕ್ ಅವರು ತಮ್ಮ ಗೆಳತಿ ಸಬಾ ಆಜಾದ್ ಅವರೊಂದಿಗೆ ರೋಷನ್ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆ ಸಮಯದಲ್ಲಿ ಸಬಾ ಅವರು ಐಶ್ವರ್ಯಾ ಸಿಂಗ್ ಅವರನ್ನು ರೋಷನ್ ಕುಟುಂಬಕ್ಕೆ ಸ್ವಾಗತಿಸಲು ಇನ್‌ಸ್ಟಾಗ್ರಾಂನಲ್ಲಿ, 'ನಿಮ್ಮ ಜೀವನದ ಅತ್ಯಂತ ಮಹತ್ವದ ಬಾಂಧವ್ಯದ ಆರಂಭವಿದು; ನಮ್ಮ ಪ್ರೀತಿಯ ಐಶೂ ಐಶ್ವರ್ಯಾ ಸಿಂಗ್) ಅವರೇ, ಈ ಕುಟುಂಬಕ್ಕೆ ನಿಮಗೆ ಸುಸ್ವಾಗತ. ಈ ಸುದೀರ್ಘ ಪಯಣದಲ್ಲಿ ನೀವಿಬ್ಬರೂ ಅತ್ಯುತ್ತಮ ಸ್ನೇಹಿತರಾಗಿ ಮುಂದುವರಿಯಿರಿ ಮತ್ತು ಸಹಾನುಭೂತಿ, ಹಾಸ್ಯ ಹಾಗೂ ಹಗುರವಾದ ಮನಸ್ಥಿತಿ ಎಂದಿಗೂ ನಿಮ್ಮೊಂದಿಗೆ ಇರಲಿ' ಎಂದು ಬರೆದಿದ್ದಾರೆ.

ಸಬಾ ಮತ್ತು ಹೃತಿಕ್ 2022ರಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದರು. ಸಬಾ ಅವರು ಹೃತಿಕ್ ಅವರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ ಮತ್ತು ಸುಸಾನೆ ಖಾನ್ ಅವರೊಂದಿಗಿನ ವಿವಾಹದಿಂದ ಜನಿಸಿದ ಹೃತಿಕ್ ಅವರ ಪುತ್ರರಾದ ಹ್ರೆಹಾನ್ ಹಾಗೂ ಹೃಧಾನ್ ಅವರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

