ವಿದೇಶ

ಇರಾಕ್‌ನಲ್ಲಿ ಕಿಡ್ನಾಪ್ ಆಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ವಾರದ ಬಳಿಕ ಬಿಡುಗಡೆ: Rubio

ಮಾರ್ಚ್ 31 ರಂದು ಅಪಹರಣಕ್ಕೊಳಗಾದ ಕಿಟಲ್‌ಸನ್‌ನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಇರಾನ್ ಬೆಂಬಲಿತ ಇರಾಕಿನ ಪ್ರಬಲ ಉಗ್ರ ಸಂಘಟನೆ ಕಟೈಬ್ ಹೆಜ್ಬೊಲ್ಲಾ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆಯಾಗಿದೆ.

ಇರಾಕ್‌ನಲ್ಲಿ ಕಿಡ್ನಾಪ್ ಆಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ವಾರದ ಬಳಿಕ ಬಿಡುಗಡೆ: Rubio
ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್
Published On :

ಬಾಗ್ದಾದ್: ಕಳೆದ ವಾರ ಬಾಗ್ದಾದ್ ಸ್ಟ್ರೀಟ್‌ಕಾರ್ನರ್‌ನಿಂದ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ ಅವರನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ ಎಂದು ಯುಎಸ್ ಮತ್ತು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 31 ರಂದು ಅಪಹರಣಕ್ಕೊಳಗಾದ ಕಿಟಲ್‌ಸನ್‌ನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಇರಾನ್ ಬೆಂಬಲಿತ ಇರಾಕಿನ ಪ್ರಬಲ ಉಗ್ರ ಸಂಘಟನೆ ಕಟೈಬ್ ಹೆಜ್ಬೊಲ್ಲಾ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆಯಾಗಿದೆ. ಕಿಟಲ್ಸನ್ ಬಿಡುಗಡೆಯಾದ ನಂತರ ತಕ್ಷಣ ದೇಶವನ್ನು ತೊರೆಯಬೇಕು" ಎಂಬುದು ಅದರ ಷರತ್ತು ಆಗಿತ್ತು.

ಕಿಟಲ್‌ಸನ್ ಬಿಡುಗಡೆಗಾಗಿ ಈ ಹಿಂದೆ ಬಂಧಿಸಲ್ಪಟ್ಟ ಹೆಜ್ಬೊಲ್ಲಾ ಸಂಘಟನೆಯ ಹಲವು ಸದಸ್ಯರನ್ನು ಬಿಡುಗಡೆ ಮಾಡಲಾಗುವುದು ಎಂದು ಸೇನೆಯೊಳಗಿನ ಇಬ್ಬರು ಅಧಿಕಾರಿಗಳು ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

ಕಿಟಲ್ಸನ್ ಅವರ ಬಿಡುಗಡೆಯನ್ನು ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರೂಬಿಯೊ ಬುಧವಾರ ಮುಂಜಾನೆ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಮೆರಿಕದ ಪತ್ರಕರ್ತೆ ಈಗ ಬಿಡುಗಡೆಯಾಗಿದ್ದಾರೆ. ಇರಾಕ್‌ನಿಂದ ಆಕೆಯ ಸುರಕ್ಷಿತ ನಿರ್ಗಮನದ ನಿಟ್ಟಿನಲ್ಲಿ ಅಮೆರಿಕ ಈಗ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

49 ವರ್ಷದ ಕಿಟಲ್‌ಸನ್‌, ಅಪಹರಣಕ್ಕೂ ಮುನ್ನ ವರ್ಷಗಳ ಕಾಲ ವಿದೇಶದಲ್ಲಿ ವಾಸಿಸುತ್ತಿದ್ದರು. ಸ್ವಲ್ಪ ಸಮಯದವರೆಗೆ ರೋಮ್ ನಲ್ಲಿದ್ದ ಅವರು ಮಧ್ಯಪ್ರಾಚ್ಯದಾದ್ಯಂತ ವಿಶೇಷವಾಗಿ ಇರಾಕ್ ಮತ್ತು ಸಿರಿಯಾದಲ್ಲಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಆಕೆ ಅಪಹರಣಕ್ಕೂ ಮುನ್ನಾ ಮತ್ತೆ ಇರಾಕ್‌ಗೆ ಪ್ರವೇಶಿಸಿದ್ದರು. ಆಕೆಯ ವಿರುದ್ಧ ಹಲವು ಬಾರಿ ಬೆದರಿಕೆ ಎಚ್ಚರಿಕೆ ನೀಡಿದ್ದರೂ ಆಕೆ ತನ್ನ ವೃತಿಯನ್ನು ಬಿಡಲು ಬಯಸಿರಲಿಲ್ಲ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.