ಲಿಬಿಯಾ: ಪೋರ್ಚುಗಲ್‌ಗೆ ತೆರಳುತ್ತಿದ್ದ ಭಾರತ ಮೂಲದ ದಂಪತಿ, 3 ವರ್ಷದ ಪುತ್ರಿಯ ಅಪಹರಣ; ₹2 ಕೋಟಿ ಹಣಕ್ಕೆ ಬೇಡಿಕೆ
ಈ ಕುಟುಂಬವು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಬಾದಲ್‌ಪುರ ಗ್ರಾಮದವರಾಗಿದ್ದು, ಅವರನ್ನು ಕಿಸ್ಮತ್‌ಸಿನ್ಹ್ ಚಾವ್ಡಾ, ಅವರ ಪತ್ನಿ ಹೀನಾಬೆನ್ ಮತ್ತು ಮಗಳು ದೇವಾಂಶಿ ಎಂದು ಗುರುತಿಸಲಾಗಿದೆ.

ಪೋರ್ಚುಗಲ್‌ಗೆ ವಲಸೆ ಹೋಗಲು ಯತ್ನಿಸುತ್ತಿದ್ದ ಭಾರತೀಯ ದಂಪತಿ ಮತ್ತು ಅವರ ಮೂರು ವರ್ಷದ ಮಗಳನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ಶನಿವಾರ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಕುಟುಂಬವು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಬಾದಲ್‌ಪುರ ಗ್ರಾಮದವರಾಗಿದ್ದು, ಅವರನ್ನು ಕಿಸ್ಮತ್‌ಸಿನ್ಹ್ ಚಾವ್ಡಾ, ಅವರ ಪತ್ನಿ ಹೀನಾಬೆನ್ ಮತ್ತು ಮಗಳು ದೇವಾಂಶಿ ಎಂದು ಗುರುತಿಸಲಾಗಿದೆ. ದಂಪತಿಯ ವಯಸ್ಸು ತಿಳಿದಿಲ್ಲವಾದರೂ, ಅವರ ಮಗಳಿಗೆ 3 ವರ್ಷ ಎನ್ನಲಾಗಿದೆ.
ಕಿಸ್ಮತ್‌ಸಿನ್ಹ್ ಅವರ ಸಹೋದರ ವಾಸಿಸುತ್ತಿರುವ ಪೋರ್ಚುಗಲ್‌ಗೆ ಹೋಗುತ್ತಿದ್ದಾಗ ಲಿಬಿಯಾದಲ್ಲಿ ಕುಟುಂಬವನ್ನು ಅಪಹರಿಸಲಾಗಿದೆ ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಸೋಲಂಕಿ ಹೇಳಿದ್ದಾರೆ.
ಕುಟುಂಬವು ನವೆಂಬರ್ 29 ರಂದು ಗುಜರಾತ್‌ನ ಅಹಮದಾಬಾದ್‌ನಿಂದ ದುಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿತ್ತು. ಅಲ್ಲಿಂದ ಅವರು ಲಿಬಿಯಾದ ಬೆಂಗಾಜಿ ನಗರಕ್ಕೆ ಹೋದರು. ಅಲ್ಲಿ ಅವರನ್ನು ಪೋರ್ಚುಗಲ್‌ಗೆ ತೆರಳುವ ಮೊದಲೇ ಅಪಹರಿಸಲಾಗಿದೆ. ಘಟನೆಯ ಬಗ್ಗೆ ಮೆಹ್ಸಾನಾ ಕಲೆಕ್ಟರ್ ಎಸ್‌ಕೆ ಪ್ರಜಾಪತಿಗೆ ತಿಳಿಸಲಾಗಿದೆ ಎಂದು ಸೋಲಂಕಿ ಹೇಳಿದರು.
'ಚಾವ್ಡಾ ಅವರ ಸಹೋದರ ಪೋರ್ಚುಗಲ್‌ನಲ್ಲಿ ನೆಲೆಸಿದ್ದಾರೆ ಮತ್ತು ಹೀಗಾಗಿ ಅವರು ಪೋರ್ಚುಗಲ್‌ನಲ್ಲಿರುವ ಏಜೆಂಟ್ ಸಹಾಯದಿಂದ ಪ್ರಯಾಣಿಸುತ್ತಿದ್ದರು. ಕುಟುಂಬವು ಯುರೋಪಿಯನ್ ರಾಷ್ಟ್ರದಲ್ಲಿಯೇ ನೆಲೆಸುವ ಉದ್ದೇಶದಿಂದ ಪ್ರಯಾಣಿಸುತ್ತಿತ್ತು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಏಜೆಂಟ್‌ಗಳು ಭಾರತೀಯರಲ್ಲ” ಎಂದು ಸೋಲಂಕಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಕುಟುಂಬವನ್ನು ಅಪಹರಿಸಿದ ನಂತರ, ಅಪಹರಣಕಾರರು ಮೆಹ್ಸಾನಾದಲ್ಲಿರುವ ಅವರ ಸಂಬಂಧಿಕರನ್ನು ಸಂಪರ್ಕಿಸಿ ₹2 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ನಂತರ ಸಂಬಂಧಿಕರು ಶುಕ್ರವಾರ ಸಹಾಯಕ್ಕಾಗಿ ಜಿಲ್ಲಾಧಿಕಾರಿ ಎಸ್‌ಕೆ ಪ್ರಜಾಪತಿ ಅವರನ್ನು ಸಂಪರ್ಕಿಸಿದ್ದಾರೆ. ಅಪಹರಣದ ಬಗ್ಗೆ ರಾಜ್ಯ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



