ವಿದೇಶ

'ಧ್ವನಿ ಇಲ್ಲದವರಿಗೆ ದನಿಯಾದ' ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ

ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಜಾನ್ ಫಾಸ್ಸೆ ಅವರಿಗೆ 2023ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ.

'ಧ್ವನಿ ಇಲ್ಲದವರಿಗೆ ದನಿಯಾದ' ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ
ಜಾನ್ ಫಾಸ್ಸೆ
Published On :

ಸ್ಟಾಕ್‌ಹೋಮ್: ನಾಟಕಕಾರ, ಕಾದಂಬರಿಕಾರ ಹಾಗೂ ನಾರ್ಡಿಕ್ ಬರವಣಿಗೆಯ ಮಾಸ್ಟರ್ ಜಾನ್ ಫಾಸ್ಸೆ ಅವರಿಗೆ 2023ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭಿಸಿದೆ.

ಜಾನ್ ಫಾಸ್ಸೆ ಅವರ ಕಾದಂಬರಿಗಳು ಧ್ವನಿ ಇಲ್ಲದವರಿಗೆ ದನಿಯಾಗಿವೆ ಎಂದು ನೊಬೆಲ್ ಪ್ರಶಸ್ತಿ ಅಕಾಡೆಮಿ ಬಣ್ಣಿಸಿದೆ. 

ಫಾಸ್ಸೆ ಅವರ ಕೆಲಸವು "ಅವರ ನಾರ್ವೇಜಿಯನ್ ಹಿನ್ನೆಲೆಯ ಭಾಷೆ ಮತ್ತು ಸ್ವಭಾವದಲ್ಲಿ" ಬೇರೂರಿದೆ ಎಂದು ನೊಬೆಲ್ ಸಾಹಿತ್ಯ ಸಮಿತಿಯ ಅಧ್ಯಕ್ಷ ಆಂಡರ್ಸ್ ಓಲ್ಸನ್ ಅವರು ಹೇಳಿದ್ದಾರೆ.

ಫಾಸ್ಸೆ ಅವರ ಹಲವಾರು ನಾಟಕಗಳು, ಕಾದಂಬರಿಗಳು, ಕವನ ಸಂಕಲನಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಭಾಷಾಂತರಗಳನ್ನು ಒಳಗೊಂಡ ಹಲವು ಕೃತಿಗಳನ್ನು ಗೌರವಿಸಿ ಈ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

64 ವರ್ಷದ ಜಾನ್ ಫಾಸ್ಸೆ ಅವರು ಎರಡು ಡಜನ್‌ಗಿಂತಲೂ ಹೆಚ್ಚು ನಾಟಕಗಳನ್ನು ಬರೆದಿದ್ದು, ನಾಲ್ಕು ದಶಕಗಳ ಕಾಲ ಕಾದಂಬರಿಗಳು, ಪ್ರಬಂಧಗಳು, ಕವನ ಸಂಕಲನಗಳು ಮತ್ತು ಮಕ್ಕಳ ಪುಸ್ತಕಗಳನ್ನು ಕೂಡ  ಪ್ರಕಟಿಸಿದ್ದಾರೆ. ಇವರ ಲೇಖನ, ಬರಹಗಳು 40 ಭಾಷೆಗಳಲ್ಲೂ ಭಾಷಾಂತರಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.