ಬಾಂಗ್ಲಾದೇಶ ಸೆಲೆಬ್ರಿಟಿ ಲೀಗ್ ವೇಳೆ ಹೊಡೆದಾಟ: ಹಲವರಿಗೆ ಗಾಯ, 6 ಮಂದಿ ಆಸ್ಪತ್ರೆಗೆ ದಾಖಲು
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಸೆಲೆಬ್ರಿಟಿ ಲೀಗ್ ಅಕ್ಷರಶಃ ರೆಸ್ಲಿಂಗ್ ರಣಾಂಗಣವಾಗಿ ಮಾರ್ಪಟ್ಟಿದ್ದು, ಪರಸ್ಪರ ಸಂಘರ್ಷದಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಸೆಲೆಬ್ರಿಟಿ ಲೀಗ್ ಅಕ್ಷರಶಃ ರೆಸ್ಲಿಂಗ್ ರಣಾಂಗಣವಾಗಿ ಮಾರ್ಪಟ್ಟಿದ್ದು, ಪರಸ್ಪರ ಸಂಘರ್ಷದಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೌದು.. ಬಾಂಗ್ಲಾದೇಶ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೇಳೆ ಆಟಗಾರರ ನಡುವೆ ಗಲಾಟೆ ನಡೆದಿದ್ದು, ಹಲವು ಕಲಾವಿದರು ಗಾಯಗೊಂಡಿದ್ದಾರೆ. ಈ ಪೈಕಿ 6 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ ಬಾಂಗ್ಲಾ ಚಲನಚಿತ್ರ ನಿರ್ಮಾಪಕರಾದ ಮೊಸ್ತಫಾ ಕಮಲ್ ರಾಝ್ ಮತ್ತು ದೀಪಂಕರ್ ಡಿಪೋನ್ ತಂಡದ ನಡುವಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಅಂಪೈರ್ನ ತಪ್ಪು ನಿರ್ಧಾರದ ಹಿನ್ನೆಲೆಯಲ್ಲಿ ಈ ಜಗಳ ನಡೆದಿದೆ ಎನ್ನಲಾಗಿದ್ದು, ಸೆಮಿ ಫೈನಲ್ಗೂ ಮುನ್ನವೇ ಆಟವನ್ನು ರದ್ದು ಮಾಡಲಾಗಿದೆ.
Hilarious scenes in Celebrity Cricket League.
— Saif Ahmed
A celebrity crying because an umpire didn’t give a boundary which was clearly a four.
Two teams fought badly, 6 people injured in hospital and the tournament is now cancelled!!! pic.twitter.com/brEYCKzIw3
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


