ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಎಲಾನ್ ಮಸ್ಕ್ ನ ಸ್ಪೇಸ್‌ಎಕ್ಸ್ ರಾಕೆಟ್ ಸ್ಫೋಟ
ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿ ನಿರ್ಮಿಸಿದ ಜಗತ್ತಿನ ಅತಿದೊಡ್ಡ ರಾಕೆಟ್ ಸ್ಪೇಸ್‌ಎಕ್ಸ್‌ನ ರಾಕೆಟ್ ಗುರುವಾರ ಪ್ರಾಯೋಗಿಕ ಉಡಾವಣೆಯಲ್ಲೇ ಸ್ಫೋಟಗೊಂಡಿದೆ.

ಟೆಕ್ಸಾಸ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ನಿರ್ಮಿಸಿದ ಜಗತ್ತಿನ ಅತಿದೊಡ್ಡ ರಾಕೆಟ್ ಸ್ಪೇಸ್‌ಎಕ್ಸ್‌ನ ರಾಕೆಟ್ ಗುರುವಾರ ಪ್ರಾಯೋಗಿಕ ಉಡಾವಣೆಯಲ್ಲೇ ಸ್ಫೋಟಗೊಂಡಿದೆ.
ಇಂದು ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್‌ಎಕ್ಸ್ ಕಂಪೆನಿಯ ಸ್ಟಾರ್‌ಬೆಸ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ದೈತ್ಯಾಕಾರದ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದ್ದು, ಗಲ್ಫ್ ಆಫ್ ಮೆಕ್ಸಿಕೊಗೆ ಅಪ್ಪಳಿಸಿದೆ.
ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್‌ಶಿಪ್ ರಾಕೆಟ್‌ಅನ್ನು ಅಭಿವೃದ್ಧಿಪಡಿಸಲಾಗಿತ್ತು.
ಉಡಾವಣೆಯಾದ ಮೂರು ನಿಮಿಷದಲ್ಲಿ ಮೊದಲ ಹಂತದಿಂದ ಸ್ಟಾರ್‌ಶಿಪ್ ಕ್ಯಾಪ್ಸುಲ್ ಬೇರ್ಪಡಬೇಕಿತ್ತು. ಬೇರ್ಪಡಲು ವಿಫಲವಾದ್ದರಿಂದ ರಾಕೆಟ್ ಮಧ್ಯದಲ್ಲಿಯೇ ಸ್ಟೋಟಗೊಂಡಿದೆ. ಸ್ಟೋಟಗೊಂಡ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


