ವಿದೇಶ

ಪತಂಜಲಿ ಉತ್ಪನ್ನ ಸೇರಿ 16 ಭಾರತೀಯ ಕಂಪನಿಗಳ ಔಷಧಿ ಆಮದು ನಿಷೇಧಿಸಿದ ನೇಪಾಳ

ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳ ಔಷಧಗಳ ಆಮದನ್ನು ನೇಪಾಳ ನಿಷೇಧಿಸಿದೆ.

ಪತಂಜಲಿ ಉತ್ಪನ್ನ ಸೇರಿ 16 ಭಾರತೀಯ ಕಂಪನಿಗಳ ಔಷಧಿ ಆಮದು ನಿಷೇಧಿಸಿದ ನೇಪಾಳ
ಸಾಂದರ್ಭಿಕ ಚಿತ್ರ
Published On :

ಕಠ್ಮಂಡು: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧೀಯ ಕಂಪನಿಗಳ ಔಷಧಗಳ ಆಮದನ್ನು ನೇಪಾಳ ನಿಷೇಧಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯುಎಚ್‌ಒ) ಉತ್ಪಾದನಾ ಗುಣಮಟ್ಟವನ್ನು ಅನುಸರಿಸಲು ವಿಫಲವಾದ ಭಾರತದ 16 ಔಷಧೀಯ ಕಂಪನಿಗಳಿಂದ ಔಷಧ ಆಮದು ಮಾಡಿಕೊಳ್ಳುವುದಕ್ಕೆ ನೇಪಾಳ ನಿಷೇಧ ಹೇರಿದೆ. 

ಅಲೋಪತಿ ಮತ್ತು ಆಯುರ್ವೇದ ಔಷಧ ಮಾರುಕಟ್ಟೆಗಳ ರಾಷ್ಟ್ರೀಯ ನಿಯಂತ್ರಣ ಸಂಸ್ಥೆಯ ಇಲಾಖೆಯು 16 ಕಂಪನಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆ ಕಂಪನಿಗಳು ತಯಾರಿಸಿದ ಔಷಧಿಗಳನ್ನು ನೇಪಾಳಕ್ಕೆ ಆಮದು ಮಾಡಿಕೊಳ್ಳಲಾಗುವುದಿಲ್ಲ ಎಂದು ಕಠ್ಮಂಡು ಪೋಸ್ಟ್ ದಿನಪತ್ರಿಕೆ ವರದಿ ಮಾಡಿದೆ.

ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಬಯಸಿದ್ದ ಭಾರತದ ಹಲವು ಔಷಧಿ ಕಂಪೆನಿಗಳು ಅರ್ಜಿ ಸಲ್ಲಿಸಿದ್ದವು. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದ ಉತ್ಪಾದನಾ ಗುಣಮಟ್ಟವನ್ನು ಅನುಸರಿಸದ ಕಂಪೆನಿಗಳಿಂದ ನಾವು ಔಷಧ ಖರೀದಿಸುವುದಿಲ್ಲ. ಅಂತಹ ಕಂಪೆನಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಇಲಾಖೆಯ ವಕ್ತಾರ ಸಂತೋಷ್ ಕೆ.ಸಿ. ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.