ವಿದೇಶ

ನ್ಯೂಸ್ ಲೈವ್ ನಲ್ಲಿ ಬಾಯಿಗೆ ನೊಣ ಬಿದ್ದರೆ ಪರಿಸ್ಥಿತಿ ಏನಾಗಬಹುದು: ಈ ವಿಡಿಯೋ ನೋಡಿ!

ಪಾಕಿಸ್ತಾನದ ಪ್ರವಾಹದ ಕುರಿತು ಸುದ್ದಿ ನಿರೂಪಕಿ ಫರ್ರಾ ನಾಸರ್ ಟಿವಿಯಲ್ಲಿ ಲೈವ್ ಕೊಡುತ್ತಿದ್ದಾಗಲೇ ನೊಣವನ್ನು ನುಂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯೂಸ್ ಲೈವ್ ನಲ್ಲಿ ಬಾಯಿಗೆ ನೊಣ ಬಿದ್ದರೆ ಪರಿಸ್ಥಿತಿ ಏನಾಗಬಹುದು: ಈ ವಿಡಿಯೋ ನೋಡಿ!
ಫರ್ರಾ ನಾಸರ್
Published On :

ಟೊರೊಂಟೊ(ಕೆನಡಾ): ಪಾಕಿಸ್ತಾನದ ಪ್ರವಾಹದ ಕುರಿತು ಸುದ್ದಿ ನಿರೂಪಕಿ ಫರ್ರಾ ನಾಸರ್ ಟಿವಿಯಲ್ಲಿ ಲೈವ್ ಕೊಡುತ್ತಿದ್ದಾಗಲೇ ನೊಣವನ್ನು ನುಂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಿವಿ ಮೂಲಕ ತಮ್ಮನ್ನು ಲಕ್ಷಾಂತರ ಜನ ನೋಡುತ್ತಿರುತ್ತಾರೆ ಎಂಬ ಪ್ರಜ್ಞೆಯಿಂದ ಗ್ಲೋಬಲ್ ನ್ಯೂಸ್ ಟೊರೊಂಟೊದ ಪತ್ರಕರ್ತೆ ಬಾಯಿಗೆ ನೊಣ ಬಿದ್ದರೂ ಇದನ್ನು ನುಗ್ಗಿಕೊಂಡು ವರದಿಯನ್ನು ಮುಂದುವರಿಸುವಲ್ಲಿ ಯಶಸ್ವಿಯಾದರು.

ಪಾಕಿಸ್ತಾನದಲ್ಲಿ ಭೀಕರ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯ ಕುರಿತಂತೆ ಲೈವ್ ರಿಪೋರ್ಟ್ ಕೊಡುತ್ತಿರುವಾಗಲೇ ಈ ಘಟನೆ ನಡೆದಿದೆ. 

ಈ ವಿಡಿಯೋವನ್ನು ಸ್ವತಃ ನಿರೂಪಕಿ ಫರ್ರಾ ನಾಸರ್ ಅವರನೇ ಟ್ವೀಟ್ ಮಾಡಿದ್ದು ಈ ದಿನಗಳಲ್ಲಿ ನಮಗೆಲ್ಲರಿಗೂ ನಗು ಬೇಕಿದೆ. ಅದಕ್ಕಾಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದೇನೆ ಎಂದು ಟ್ವೀಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.