ಪಂಜ್ಶೀರ್ಗೆ ನುಗ್ಗಿದ ತಾಲಿಬಾನಿಗಳು: ಮನೆಮನೆಗೆ ನುಗ್ಗಿ ಯುವಕರ ಹತ್ಯೆ; ಅಮರುಲ್ಲಾ ಸಲೇಹ್ ಸಹೋದರನ ಕಗ್ಗೊಲೆ!
ಪಂಜ್ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ತಾಲಿಬಾನಿಗಳು ಪಂಜ್ಶೀರ್ಗೆ ನುಗ್ಗಿದ್ದಾರೆ. ಅಲ್ಲದೆ ಮನೆ ಮನೆಗೆ ನುಗ್ಗಿ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಮಾರಣಹೋಮ ಸೃಷ್ಟಿಸುತ್ತಿದ್ದಾರೆ.

ಕಾಬೂಲ್: ಪಂಜ್ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ತಾಲಿಬಾನಿಗಳು ಪಂಜ್ಶೀರ್ಗೆ ನುಗ್ಗಿದ್ದಾರೆ. ಅಲ್ಲದೆ ಮನೆ ಮನೆಗೆ ನುಗ್ಗಿ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಮಾರಣಹೋಮ ಸೃಷ್ಟಿಸುತ್ತಿದ್ದಾರೆ.
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ತಮ್ಮ ಸ್ವಂತ ಸರ್ಕಾರವನ್ನು ಘೋಷಿಸಿದ್ದಾರೆ. ಇದೇ ವೇಳೆ ಪಂಜ್ಶೀರ್ ವಶಕ್ಕೆ ಪಡೆಯಲು ಮುಂದಾಗಿರುವ ತಾಲಿಬಾನಿಗಳು ಇದೀಗ ಕಣಿವೆಗೆ ನುಗ್ಗಿದ್ದಾರೆ.
ಪಂಜ್ಶೀರ್ ನಲ್ಲಿ ಮನೆ ಮನೆಗೆ ನುಗ್ಗುತ್ತಿರುವ ತಾಲಿಬಾನಿಗಳು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡುತ್ತಾ ಮಾರಣಹೋಮ ಸೃಷ್ಟಿಸುತ್ತಿದ್ದಾರೆ. ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ.
ಇನ್ನು ಹಂಗಾಮಿ ಉಪಾಧ್ಯಕ್ಷ, ನಾರ್ದನ್ ಅಲಯನ್ಸ್ ಅನ್ನು ಮುನ್ನಡೆಸುತ್ತಿರುವ ಅಮರುಲ್ಲಾ ಸಲೇಹ್ ಸದ್ಯ ಪಂಜ್ಶೀರ್ ಅನ್ನು ತೊರೆದಿದ್ದಾರೆ. ಅಲ್ಲಿ ಸಿಕ್ಕ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ರನ್ನು ವಶಕ್ಕೆ ಪಡೆದ ತಾಲಿಬಾನಿಗಳು ಆತನಿಗೆ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


