ವಿದೇಶ

ಬ್ರಿಟನ್‌ನಲ್ಲಿ ಇಬ್ಬರಿಗೆ ಓಮಿಕ್ರಾನ್‌: ಖಚಿತಪಡಿಸಿದ ಯುಕೆ ಆರೋಗ್ಯ ಕಾರ್ಯದರ್ಶಿ

ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್‌ ವೈರಸ್ ಬ್ರಿಟನ್ ನಲ್ಲಿ ಇಬ್ಬರಿಗೆ ದೃಢಪಟ್ಟಿದೆ ಎಂದು ಯುಕೆ ಸರ್ಕಾರ ತಿಳಿಸಿದೆ. ಅಲ್ಲದೆ ತನ್ನ ಪ್ರಯಾಣದ ಕೆಂಪು ಪಟ್ಟಿಗೆ ಇನ್ನೂ ನಾಲ್ಕು ಆಫ್ರಿಕನ್...

ಬ್ರಿಟನ್‌ನಲ್ಲಿ ಇಬ್ಬರಿಗೆ ಓಮಿಕ್ರಾನ್‌: ಖಚಿತಪಡಿಸಿದ ಯುಕೆ ಆರೋಗ್ಯ ಕಾರ್ಯದರ್ಶಿ
ಸಾಂದರ್ಭಿಕ ಚಿತ್ರ
Published On :

ಲಂಡನ್: ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್‌ ವೈರಸ್ ಬ್ರಿಟನ್ ನಲ್ಲಿ ಇಬ್ಬರಿಗೆ ದೃಢಪಟ್ಟಿದೆ ಎಂದು ಯುಕೆ ಸರ್ಕಾರ ತಿಳಿಸಿದೆ. ಅಲ್ಲದೆ ತನ್ನ ಪ್ರಯಾಣದ ಕೆಂಪು ಪಟ್ಟಿಗೆ ಇನ್ನೂ ನಾಲ್ಕು ಆಫ್ರಿಕನ್ ದೇಶಗಳನ್ನು ಸೇರಿಸಿದೆ ಎಂದು ಶನಿವಾರ ಪ್ರಕಟಣೆ ತಿಳಿಸಿದೆ.

ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ(ಯುಕೆಎಚ್‌ಎಸ್‌ಎ) ಚೆಲ್ಮ್ಸ್‌ಫೋರ್ಡ್, ಎಸೆಕ್ಸ್ ಮತ್ತು ನಾಟಿಂಗ್‌ಹ್ಯಾಮ್‌ನಲ್ಲಿ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ಹೇಳಿದ್ದಾರೆ.

ಸೋಂಕಿತ ಇಬ್ಬರೂ ಅವರ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್ ಆಗಿದ್ದು, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಭಾನುವಾರ ಮುಂಜಾನೆ 4 ಗಂಟೆಯಿಂದ ಇನ್ನೂ ನಾಲ್ಕು ದೇಶಗಳಾದ ಅಂಗೋಲಾ, ಮೊಜಾಂಬಿಕ್, ಮಲಾವಿ ಮತ್ತು ಜಾಂಬಿಯಾಗಳನ್ನು ಪ್ರಯಾಣದ "ಕೆಂಪು ಪಟ್ಟಿಗೆ" ಸೇರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.