ವಿದೇಶ

ಇಸ್ರೇಲ್ ನ ಟೆಲ್ ಅವಿವ್ ವಿಶ್ವದ ನಂ.1 ದುಬಾರಿ ನಗರ: ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್

ಯುದ್ಧಪೀಡಿತ ರಾಷ್ಟ್ರವಾದ ಸಿರಿಯ, ಡಮಸ್ಕಸ್, ವಾಸಿಸಲು ಅತಿ ಅಗ್ಗದ ನಗರಗಳು ಎನ್ನುವ ಹೆಸರಿಗೆ ಪಾತ್ರವಾಗಿದೆ.

ಇಸ್ರೇಲ್ ನ ಟೆಲ್ ಅವಿವ್ ವಿಶ್ವದ ನಂ.1 ದುಬಾರಿ ನಗರ: ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್
ಟೆಲ್ ಅವಿವ್
Published On :

ಜೆರುಸಲೆಂ: ವಿಶ್ವದ ಅತಿ ದುಬಾರಿ ನಗರ ಎನ್ನುವ ಖ್ಯಾತಿಗೆ ಇಸ್ರೇಲಿನ ಟೆಲ್ ಅವಿವ್ ನಗರ ಪಾತ್ರವಾಗಿದೆ. ಜೆರುಸಲೆಂ ಇಸ್ರೇಲಿನ ರಾಜಧಾನಿಯಾಗಿದ್ದರೂ, ದೇಶದ ಆರ್ಥಿಕ ಮತ್ತು ತಂತ್ರಜ್ನಾನ ಕೇಂದ್ರ ಟೆಲ್ ಅವಿವ್ ಆಗಿದೆ. 

ಇದೇ ಮೊದಲ ಬಾರಿಗೆ ಈ ಹೆಸರಿಗೆ ಇಸ್ರೇಲ್ ಪಾತ್ರವಾಗಿದೆ. ಹಣದುಬ್ಬರ ಏರಿಕೆ ಅದಕ್ಕೆ ಕಾರಣ ಎನ್ನಲಾಗುತ್ತಿದೆ. ಟೆಲ್ ಅವಿವ್ ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್ ಇದೆ. ಅಮೆರಿಕದ ನ್ಯೂಯಾರ್ಕ್ 6ನೇ ಸ್ಥಾನ ಪಡೆದಿದೆ.

ಕಳೆದ ವರ್ಷ ಪ್ಯಾರಿಸ್ ಮೊದಲ ಸ್ಥಾನ ಪಡೆದಿತ್ತು. ಇದೇ ವೇಳೆ ಯುದ್ಧಪೀಡಿತ ರಾಷ್ಟ್ರವಾದ ಸಿರಿಯ, ಡಮಸ್ಕಸ್, ವಾಸಿಸಲು ಅತಿ ಅಗ್ಗದ ನಗರ ಎನ್ನುವ ಹೆಸರಿಗೆ ಪಾತ್ರವಾಗಿದೆ. Economist Intelligence Unit ಸಂಸ್ಥೆ ನಡೆಸಿದ ಜಾಗತಿಕ ಸಮೀಕ್ಷೆಯಿಂದ ಈ ಮಾಹಿತಿ ಹೊರಬಂದಿದೆ.

Related Article

ತಾಲಿಬಾನ್ ವಶವಾದಾಗಿನಿಂದ ಅಫ್ಘಾನಿಸ್ತಾನದಲ್ಲಿ ಶೇ.50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಬಂದ್!

ಗಂಡನ ಪುರ್ನಜನ್ಮ: ಹಸು ಜೊತೆ ಮದುವೆಯಾದ ಮಹಿಳೆ!

ಪಿಎಂ ಆಗಿ ಆಯ್ಕೆಗೊಂಡ ಕೆಲ ಹೊತ್ತಿನಲ್ಲೇ ರಾಜೀನಾಮೆ ನೀಡಿದ ಸ್ವೀಡನ್ ಮೊದಲ ಮಹಿಳಾ ಪ್ರಧಾನಿ! ಕಾರಣ ಏನು?

ಮಹಿಳೆಯರು ನಟಿಸಿರುವ ಧಾರಾವಾಹಿಗಳಿಗೆ ತಾಲಿಬಾನ್ ನಿರ್ಬಂಧ: ಕಠಿಣ ಟಿವಿ ಮಾರ್ಗಸೂಚಿಗೆ ಪತ್ರಕರ್ತರ ಖಂಡನೆ

ಪತಿಗೆ ವಿಚ್ಛೇದನ, ಒಂಟಿತನ ನಿವಾರಿಸಲು ನಾಯಿಯನ್ನು ಮದುವೆಯಾದ ಮಹಿಳೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.