ವಿದೇಶ

ಮಹಿಳೆಯರು ನಟಿಸಿರುವ ಧಾರಾವಾಹಿಗಳಿಗೆ ತಾಲಿಬಾನ್ ನಿರ್ಬಂಧ: ಕಠಿಣ ಟಿವಿ ಮಾರ್ಗಸೂಚಿಗೆ ಪತ್ರಕರ್ತರ ಖಂಡನೆ

ಆಫ್ಘನ್ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ಧೋರಣೆ ಇರುವ ಸಿನಿಮಾಗಳಿಗೂ ನಿರ್ಬಂಧ ವಿಧಿಸಲಾಗಿದೆ.

ಮಹಿಳೆಯರು ನಟಿಸಿರುವ ಧಾರಾವಾಹಿಗಳಿಗೆ ತಾಲಿಬಾನ್ ನಿರ್ಬಂಧ: ಕಠಿಣ ಟಿವಿ ಮಾರ್ಗಸೂಚಿಗೆ ಪತ್ರಕರ್ತರ ಖಂಡನೆ
ಸಾಂದರ್ಭಿಕ ಚಿತ್ರ
Published On :

ಕಾಬೂಲ್: ಆಫ್ಘನ್ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ತಾಲಿಬಾನ್ ಜಾರಿ ಮಾಡಿರುವ ಕಠಿಣ ಟಿವಿ ಮಾರ್ಗಸೂಚಿಯನ್ನು ವಿರೋಧಿಸಿದ್ದಾರೆ. ಮಹಿಳೆಯರು ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ಮಾರ್ಗಸೂಚಿಯಲ್ಲಿ ನಿರ್ಬಂಧಿಸಲಾಗಿದೆ. 

ಟಿವಿಯಲ್ಲಿ ಪ್ರಸಾರವಾಗುವ ಧಾರವಾಹಿಗಳಿಗೂ ಈ ನಿಯಮ ಅನ್ವಯಿಸಿದ್ದು, ಮಹಿಳೆಯರು ನಟಿಸಿರುವ ಧಾರಾವಾಹಿಗಳನ್ನು ಪ್ರಸಾರ ಮಾಡದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ.

ಅಲ್ಲದೆ ಆಫ್ಘನ್ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ಧೋರಣೆ ಇರುವ ಸಿನಿಮಾಗಳಿಗೂ ನಿರ್ಬಂಧ ವಿಧಿಸಲಾಗಿದೆ. 

ಸುದ್ದಿವಾಹಿನಿಗಳಲ್ಲಿ ನಿರೂಪಕಿಯರಾಗಿ ಕೆಲಸ ಮಾಡುವ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

Related Article

ಪಾಕ್ ಮೂಲಕ ಅಫ್ಘಾನಿಸ್ತಾನಕ್ಕೆ ಗೋದಿ ಸಾಗಿಸಲು ಭಾರತಕ್ಕೆ ಇಮ್ರಾನ್ ಖಾನ್ ಗ್ರೀನ್ ಸಿಗ್ನಲ್

ದೆಹಲಿಯಲ್ಲಿ ಅಫ್ಘಾನಿಸ್ತಾನ ಕುರಿತು ಚರ್ಚೆ: ಭಾರತ ಆಹ್ವಾನ ತಿರಸ್ಕರಿಸಿ ಪಾಕ್, ಚೀನಾ ಸಭೆಗೆ ಗೈರು!

'ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ': ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್

ವಿದೇಶಿ ಕರೆನ್ಸಿ ನಿಷೇಧಿಸಿದ ಅಫ್ಘಾನಿಸ್ತಾನ: ಉಲ್ಲಂಘನೆ ಮಾಡುವವರಿಗೆ 'ಕ್ರಮ'ದ ಎಚ್ಚರಿಕೆ

ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕುಟುಂಬ ನಿರ್ವಹಣೆಗೆ ಸ್ವಂತ ಮಕ್ಕಳ ಮಾರಾಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.