ವಿದೇಶ

ತಾಲಿಬಾನಿಗಳಿಂದ ಆಫ್ಘನ್ ಪಾಪ್ ಸ್ಟಾರ್ ಅರಿಯಾನ ಸಯೀದ್ ಎಸ್ಕೇಪ್!

ಅಫ್ಘಾನಿಸ್ತಾನದಲ್ಲಿ ಹೆಂಗಸರು ಬುರ್ಖಾ ತೊಡದಿದ್ದರೆ ತಲೆದಂಡ ಖಚಿತ ಎನ್ನುವ ವಾತಾವರಣ ಎರಡು ದಶಕಗಳ ನಂತರ ನಿರ್ಮಾಣವಾಗುತ್ತಿದೆ. ಹೀಗಿರುವಾಗ, ಸಾವಿರಾರು ಆಫ್ಘನ್ ಪುರುಷರ ನಿದ್ದೆಗೆಡಿಸಿದ್ದ ಓರ್ವ ಪಾಪ್ ಸ್ಟಾರ್ ಅನ್ನು ಅವರು ಜೀವಂತ ಬಿಟ್ಟಾರೆಯೇ?

ತಾಲಿಬಾನಿಗಳಿಂದ ಆಫ್ಘನ್ ಪಾಪ್ ಸ್ಟಾರ್ ಅರಿಯಾನ ಸಯೀದ್ ಎಸ್ಕೇಪ್!
ಆಫ್ಘನ್ ಪಾಪ್ ಸ್ಟಾರ್ ಅರಿಯಾನ
Published On :

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೆಂಗಸರು ಬುರ್ಖಾ ತೊಡದಿದ್ದರೆ ತಲೆದಂಡ ಖಚಿತ ಎನ್ನುವ ವಾತಾವರಣ ಎರಡು ದಶಕಗಳ ನಂತರ ನಿರ್ಮಾಣವಾಗುತ್ತಿದೆ. ಹೀಗಿರುವಾಗ ಸಾವಿರಾರು ಆಫ್ಘನ್ ಪುರುಷರ ನಿದ್ದೆಗೆಡಿಸಿದ್ದ ಓರ್ವ ಪಾಪ್ ಸ್ಟಾರ್ ಅನ್ನು ಅವರು ಜೀವಂತ ಬಿಟ್ಟಾರೆಯೇ? ಎಲ್ಲರಿಗೂ ಉತ್ತರ ಗೊತ್ತಿರುವ ಪ್ರಶ್ನೆ ಇದು. ಈ ಉತ್ತರವನ್ನು ಎಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡದ್ದರಿಂದಲೇ ಆಫ್ಘನ್ ಪಾಪ್ ಸ್ಟಾರ್ ಅರಿಯಾನ ಸಯೀದ್ ಇಂದು ಬದುಕಿರುವುದು ಎಂದು ಹೇಳಬಹುದು. 

ತಾಲಿಬಾನ್ ಕಾಬೂಲ್ ನಗರವನ್ನು ಸುತ್ತುವರಿದಾಗಲೇ ಎಚ್ಚೆತ್ತುಕೊಂಡ ಪಾಪ್ ಸ್ಟಾರ್ ಅರಿಯಾನ ಸಯೀದ್ ಅಮೆರಿಕದ ಕಾರ್ಗೊ ವಿಮಾನದಲ್ಲಿ ಪತಿಯೊಂದಿಗೆ ದೇಶವನ್ನು ತೊರೆದು ಪ್ರಾಣ ಉಳಿಸಿಕೊಂಡಿದ್ದಾರೆ. ಇದೀಗ ಅವರು ಸ್ವದೇಶದಿಂದ ಎಸ್ಕೇಪ್ ಆಗುತ್ತಿರುವ ಸಮಯದಲ್ಲಿ ತೆಗೆದುಕೊಂಡ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ಅವು ಅಂತರ್ಜಾಲದಲ್ಲಿ ವೈರಲ್ ಆಗಿವೆ. 

ಅರಿಯಾನ ಅವರು ಅಫ್ಘಾನಿಸ್ತಾನದ ಜನಪ್ರಿಯ ಪಾಪ್ ಸ್ಟಾರ್ ಆಗಿದ್ದಾರೆ. ಅವರು ಅಲ್ಲಿಯ ಸಂಗೀತ ರಿಯಾಲಿಟಿ ಶೋನಲ್ಲಿ  ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದರು. ಅವರು ಆಫ್ಘನ್ ಸೇನೆಯ ಬೆಂಬಲಿಗಳಾಗಿದ್ದು, ಈ ಹಿಂದೆ ಹಲವು ಬಾರಿ ಆಫ್ಘನ್ ಸೇನೆ ಪರ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಆಕೆಯ ಪತಿ ಸಯೀದ್ ಓರ್ವ ಚಿತ್ರ ನಿರ್ಮಾಪಕರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.