ವಿದೇಶ

ವಿಶ್ವದಲ್ಲಿ ಮೊಟ್ಟ ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಸಾವು!

ಪ್ರಪಂಚದಲ್ಲಿಯೇ ಮೊಟ್ಟಮೊದಲು ಕೊರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್‌ ದೇಶದ ವಿಲಿಯಂ ಷೇಕ್ಸ್‌ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ವಿಶ್ವದಲ್ಲಿ ಮೊಟ್ಟ ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಸಾವು!
ವಿಲಿಯಮ್ ಶೇಕ್ಸ್ ಪಿಯರ್
Published On :

ಲಂಡನ್: ಪ್ರಪಂಚದಲ್ಲಿಯೇ ಮೊಟ್ಟಮೊದಲು ಕೊರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್‌ ದೇಶದ ವಿಲಿಯಂ ಷೇಕ್ಸ್‌ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಕಳೆದ ವರ್ಷ ಡಿಸೆಂಬರ್ 8 ರಂದು, ಕೋವಿಡ್ -19 ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಶೇಕ್ಸ್‌ಪಿಯರ್ ಪಾತ್ರರಾಗಿದ್ದರು.

ಯೂನಿವರ್ಸಿಟಿ ಆಸ್ಪತ್ರೆ ಕೋವೆಂಟ್ರಿ ಅಂಡ್‌ ವಾರ್ವಿಕ್‌ಶೈರ್‌ನಲ್ಲಿ ಅವರು ಜರ್ಮನಿಗೆ ಸೇರಿದ ಬಯೋಎನ್‌ಟೆಕ್‌, ಅಮೆರಿಕಾ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ದಿ ಪಡಿಸಿದ್ದ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ಅನಾರೋಗ್ಯ ಸಮಸ್ಯೆಗಳಿಂದ ಇದೇ ಆಸ್ಪತ್ರೆಗೆ ಸೇರಿದ್ದ ಷೇಕ್ಸ್‌ಪಿಯರ್ ಈ ತಿಂಗಳ 20 ರಂದು ಮೃತಪಟ್ಟರು ಎಂದು ಅವರ ಸ್ನೇಹಿತ ಜೈನ್ ಇನ್ನೆಸ್ ತಿಳಿಸಿದ್ದಾರೆ.

ಇದೇ ಆಸ್ಪತ್ರೆಯಲ್ಲಿ ಮಾರ್ಗರೇಟ್ ಕೀನನ್(91) ಎಂಬುವವರು ಕೊರೋನಾ ಲಸಿಕೆ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.