ವಿದೇಶ

ನೂತನ ಬಾಹ್ಯಾಕಾಶ ಕೇಂದ್ರದತ್ತ ಚೀನಾದ ಮೂರು ಗಗನ ಯಾತ್ರಿಗಳು ಪ್ರಯಾಣ!

ಮೂವರು ಗಗನಯಾನಿಗಳನ್ನು ಹೊತ್ತ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಗುರುವಾರ ಬೆಳಗ್ಗೆ ಯಶ‌ಸ್ವಿಯಾಗಿ ಉಡಾವಣೆಗೊಂಡಿದೆ.

ನೂತನ ಬಾಹ್ಯಾಕಾಶ ಕೇಂದ್ರದತ್ತ ಚೀನಾದ ಮೂರು ಗಗನ ಯಾತ್ರಿಗಳು ಪ್ರಯಾಣ!
ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತು ಸಾಗಿದ ನೌಕೆ
Published On :

ಬೀಜಿಂಗ್: ಮೂವರು ಗಗನಯಾನಿಗಳನ್ನು ಹೊತ್ತ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಗುರುವಾರ ಬೆಳಗ್ಗೆ ಯಶ‌ಸ್ವಿಯಾಗಿ ಉಡಾವಣೆಗೊಂಡಿದೆ.

ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆನ್‌ಶಾವ್-12 ನೌಕೆ ಬೆಳಗ್ಗೆ 9:22ಕ್ಕೆ  ಉಡಾವಣೆಯಾಗಿದ್ದು, ನೌಕೆಯು ನಿಯೆ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಗಗನಯಾನಿಗಳನ್ನು ಹೊತ್ತು ನೂತನ ಬಾಹ್ಯಾಕಾಶ  ನಿಲ್ದಾಣದತ್ತ ಸಾಗಿದೆ. ಈ ಮೂರು ಗಗನ ಯಾನಿಗಳ ಪೈಕಿ ಇಬ್ಬರು ಅನುಭವಿ ಗಗನಯಾನಿಗಳಾಗಿದ್ದರೆ, ಮತ್ತೋರ್ವ ಹೊಸಬರಾಗಿದ್ದು, ಬಾಹ್ಯಾಕಾಶ ಕೇಂದ್ರದಲ್ಲಿ ನಿರ್ವಹಣೆ ಮತ್ತು ಮುಂದಿನ ಯೋಜನೆಗೆ ನಿಲ್ದಾಣವನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಮೂವರು ತೊಡಗಿಸಿಕೊಳ್ಳಲಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ಆಶಯದೊಂದಿಗೆ ಮೂವರು ಪುರುಷ ಗಗನಯಾತ್ರಿಗಳನ್ನು ಗುರುವಾರ ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಸಜ್ಜಾಗಿರುವುದಾಗಿ ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ  (ಸಿಎಂಎಸ್‌ಎ) ಬುಧವಾರ ತಿಳಿಸಿತ್ತು.

Story image

‘ಟಿಯಾಂಗಾಂಗ್‌ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಮೂವರು ಗಗನ ಯಾತ್ರಿಗಳು ಮೂರು ತಿಂಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ‘ ಎಂದು ಸಿಎಮ್ಎಸ್ಎ ನಿರ್ದೇಶಕ  ಸಹಾಯಕ ಜಿ ಕಿಮಿಂಗ್ ಉಡಾವಣಾ ಕೇಂದ್ರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಸಮಯದಲ್ಲಿ ಇದು ಮೊದಲ ಮಾನವಸಹಿತ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

2003 ರಲ್ಲಿ ಚೀನಾ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಉಡಾವಣೆ ಮಾಡಿತ್ತು. ಆ ಮೂಲಕ  ಬಾಹ್ಯಾಕಾಶಕ್ಕೆ ಮಾನವ ಸಹಿತ ಬಾಹ್ಯಾಕಾಶ ಉಡಾವಣೆ ಮಾಡಿದ ಜಗತ್ತಿನ ಮೂರನೇ ರಾಷ್ಟ್ರ ಎಂಬ ಕೀರ್ತಿಗೆ ಚೀನಾ ಭಾಜನವಾಗಿತ್ತು. ಇದಕ್ಕೂ ಮೊದಲು ಅಮೆರಿಕ ಮತ್ತು  ಸೋವಿಯತ್ ರಷ್ಯಾ ಈ ಸಾಧನೆ ಮಾಡಿತ್ತು. 

ಈ ಯೋಜನೆಯಲ್ಲಿ ಚೀನಾ ಒಟ್ಟು 14 ಮಂದಿ ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹೊಂದಿದೆ. ನೂತನ ಬಾಹ್ಯಾಕಾಶ ನಿಲ್ದಾಣಕ್ಕೆ ಹೆಚ್ಚುವರಿ ವಿಭಾಗಗಳನ್ನು ಸೇರಿಸಲು ಮತ್ತು ಸಿಬ್ಬಂದಿ ಮತ್ತು ಸರಬರಾಜುಗಳನ್ನು ಕಳುಹಿಸಲು ಮುಂದಿನ ವರ್ಷದಲ್ಲಿ  ಯೋಜಿಸಲಾದ 11 ಮಾನವ ಸಹಿತ ಉಡಾವಣೆಗಳಲ್ಲಿ ಹಾಲಿ ಉಡಾವಣೆ ಮೂರನೆಯದು. ಮೂರು ತಿಂಗಳಲ್ಲಿ ಹೊಸ ಮೂರು ಸದಸ್ಯರ ಸಿಬ್ಬಂದಿ ಮತ್ತು ಸರಕು ಸಾಗಣೆ ನೌಕೆಯನ್ನು ಮತ್ತೆ ಉಡಾವಣೆ ಮಾಡಲಾಗುತ್ತದೆ. ಅಂತೆಯೇ ಮುಂದಿನ ಉಡಾವಣೆಗಳಲ್ಲಿ ಮಹಿಳೆಯರನ್ನು ನಿಲ್ದಾಣಕ್ಕೆ  ಕಳುಹಿಸಲು ಚೀನಾ ಯೋಜನೆ ಹೊಂದಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.