ವಿದೇಶ

ಜೈಲಿನಲ್ಲಿರುವ ವಿಕಿ ಲೀಕ್ಸ್ ವೆಬ್ ಸೈಟ್ ಸ್ಥಾಪಕ ಜೂಲಿಯನ್ ಅಸಾಂಜ್ ಗೆ ಸ್ಟ್ರೋಕ್: ವಿಚಾರಣೆ ಒತ್ತಡವೇ ಕಾರಣ ಎಂದ ಪ್ರೇಯಸಿ ಸ್ಟೆಲ್ಲಾ

ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಗೌಪ್ಯ ಸೇನಾ ಮಾಹಿತಿಯುಳ್ಳ ದಾಖಲೆಗಳನ್ನು ತನ್ನ ವಿಕಿ ಲೀಕ್ಸ್ ಜಾಲತಾಣದಲ್ಲಿ ಬಿಡುಗಡೆ ಮಾಡಿ ಪ್ರಭಾವಿಗಳ ಕೆಂಗಣ್ಣಿಗೆ ಅಸಾಂಜ್ ಗುರಿಯಾಗಿದ್ದರು.

ಜೈಲಿನಲ್ಲಿರುವ ವಿಕಿ ಲೀಕ್ಸ್ ವೆಬ್ ಸೈಟ್ ಸ್ಥಾಪಕ ಜೂಲಿಯನ್ ಅಸಾಂಜ್ ಗೆ ಸ್ಟ್ರೋಕ್: ವಿಚಾರಣೆ ಒತ್ತಡವೇ ಕಾರಣ ಎಂದ ಪ್ರೇಯಸಿ ಸ್ಟೆಲ್ಲಾ
ಅಸಾಂಜ್ ಮತ್ತು ಪ್ರೇಯಸಿ ಸ್ಟೆಲ್ಲಾ ಮೋರಿಸ್
Published On :

ಲಂಡನ್: ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಜೈಲಿನಲ್ಲಿ ಪ್ರಕರಣ ಎದುರಿಸುತ್ತಿರುವ ವಿಕಿ ಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಅವರಿಗೆ ಜೈಲಿನಲ್ಲಿ ಸ್ಟ್ರೋಕ್ ಉಂಟಾಗಿದೆ. ಅವರಿಗೆ ಜೈಲಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೊಮ್ಮೆ ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಗೌಪ್ಯ ಸೇನಾ ಮಾಹಿತಿಯುಳ್ಳ ದಾಖಲೆಗಳನ್ನು ತನ್ನ ವಿಕಿ ಲೀಕ್ಸ್ ಜಾಲತಾಣದಲ್ಲಿ ಬಿಡುಗಡೆ ಮಾಡಿ ಪ್ರಭಾವಿಗಳ ಕೆಂಗಣ್ಣಿಗೆ ಅಸಾಂಜ್ ಗುರಿಯಾಗಿದ್ದರು.

ಅಸಾಂಜ್ ಬಂಧನಕ್ಕೆ ಅಮೆರಿಕ ಶತಪ್ರಯತ್ನ ನಡೆಸಿತ್ತು. ದೇಶದಿಂದ ದೇಶಕ್ಕೆ ಪಲಾಯನ ಮಾಡುತ್ತಿದ್ದ ಅಸಾಂಜ್ ನನ್ನು ಅಮೆರಿಕ ಬೆನ್ನಟ್ಟಿತ್ತು. ಕಡೆಗೆ ಯುಕೆ ಅಧಿಕಾರಿಗಳ ಕೈಲಿ ಅಸಾಂಜ್ ಸೆರೆಯಾಗಿದ್ದರು. ಆತನ ಬಿಡುಗಡೆಗೆ ಪ್ರೇಯಸಿ ಸ್ಟೆಲ್ಲಾ ಮೋರಿಸ್ ಒತ್ತಾಯಿಸುತ್ತಲೇ ಇದ್ದಾರೆ.

ಇದೀಗ ಬಗೆಹರಿಯದ ಕೋರ್ಟ್ ವಿಚಾರಣೆಗಳು ಅಸಾಂಜ್ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದಾಗಿ ಸ್ಟೆಲ್ಲಾ ಎಚ್ಚರಿಸಿದ್ದಾರೆ. ಅಸಾಂಜ್ ರನ್ನು ಅಮೆರಿಕಕ್ಕೆ ಗಡೀಪಾರು ಮಾಡುವ ಕುರಿತಾಗಿ ನ್ಯಾಯಾಲಯ ವಿಚಾರಣೆ ನಡೆಯುತ್ತಿದೆ. ಅಮೆರಿಕಕ್ಕೆ ಅಸಾಂಜ್ ಗಡೀಪಾರಾದರೆ ಅವರಿಗೆ ಮರಣದಂಡನೆ ಖಚಿತ ಎನ್ನುವ ಆತಂಕವೂ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.